World cup cricket ವೈಭವ: ಆಸ್ಟ್ರೇಲಿಯಕ್ಕೆ ದಾಖಲೆಯ 5ನೇ ಕಿರೀಟ
Team Udayavani, Oct 3, 2023, 6:00 AM IST
2015ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ್ದು ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್. ಈ ನೆರೆಹೊರೆಯ ದೇಶಗಳು ವಿಶ್ವಕಪ್ ಸಂಘಟಿಸಿದ 2ನೇ ಸಂದರ್ಭ ಇದಾಗಿತ್ತು. 1992ರಲ್ಲಿ ಮೊದಲ ಸಲ ಆಯೋಜಿಸಿದಾಗ ಹಾಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯ ಲೀಗ್ ಹಂತದಲ್ಲೇ ಉರುಳಿತ್ತು. ನ್ಯೂಜಿಲ್ಯಾಂಡ್ ಸೆಮಿಫೈನಲ್ ತನಕ ಬಂದು ಮುಗ್ಗರಿಸಿತ್ತು. ಆದರೆ ಈ ಬಾರಿ ಆತಿಥೇಯ ತಂಡಗಳೇ ಫೈನಲ್‌ಗೆ ಲಗ್ಗೆ ಹಾಕಿದವು.
ನ್ಯೂಜಿಲ್ಯಾಂಡ್‌ಗೆ ಇದು ಮೊದಲ ಫೈನಲ್ ಆಗಿತ್ತು. ಆದರೆ ಮೆಲ್ಬರ್ನ್ ಮೇಲಾಟದಲ್ಲಿ ಅದು ಫೈನಲ್ ಜೋಶ್ ತೋರಲೇ ಇಲ್ಲ. ಮೊದಲು ಬ್ಯಾಟಿಂಗ್ ನಡೆಸಿ 183ಕ್ಕೆ ಕುಸಿಯಿತು. ಇದು 1983ರ ಫೈನಲ್‌ನಲ್ಲಿ ಭಾರತ ಗಳಿಸಿದ ಸ್ಕೋರ್ ಆಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಆದರೆ ಕಪಿಲ್ ಬಳಗದಂತೆ ಇದನ್ನು ಉಳಿಸಿಕೊಳ್ಳುವ ಲಕ್ ಕಿವೀಸ್‌ಗೆ ಇರಲಿಲ್ಲ. ಆಸ್ಟ್ರೇಲಿಯ 33.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 186 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಅತ್ಯಧಿಕ ವಿಶ್ವಕಪ್ ಗೆದ್ದ ತನ್ನ ದಾಖಲೆಯನ್ನು ಕಾಂಗರೂ ಪಡೆ 5ಕ್ಕೆ ವಿಸ್ತರಿಸಿತು. ಅಂದು ಆಸೀಸ್ ನಾಯಕರಾಗಿದ್ದವರು ಮೈಕಲ್ ಕ್ಲಾರ್ಕ್.
ಈ ಜಯದೊಂದಿಗೆ ತವರಿನ ಅಂಗಳದಲ್ಲೇ ವಿಶ್ವಕಪ್ ಎತ್ತಿದ ದ್ವಿತೀಯ ತಂಡವೆಂಬ ಹಿರಿಮೆ ಆಸ್ಟ್ರೇಲಿಯದ್ದಾಯಿತು. 2011ರಲ್ಲಿ ಭಾರತ ಈ ಸಾಧನೆಗೈದಿತ್ತು.
ಮತ್ತೆ 14 ತಂಡಗಳ ಸ್ಪರ್ಧೆ
ಇಲ್ಲಿ 2011ರ ಮಾದರಿಯನ್ನೇ ಮುಂದುವರಿಸಲಾಯಿತು. 14 ತಂಡಗಳ ನಡುವಿನ ಸ್ಪರ್ಧೆ ಇದಾಗಿತ್ತು. ಒಂದೊಂದು ವಿಭಾಗದಲ್ಲಿ 7 ತಂಡಗಳಿದ್ದವು. ಪ್ರತೀ ಗುಂಪಿನಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಆಡಿದವು. ಬಳಿಕ ಸೆಮಿಫೈನಲ್ ಹಾಗೂ ಫೈನಲ್. ಇನ್ನು ಮುಂದೆ ವಿಶ್ವಕಕಪ್ ಕ್ರಿಕೆಟ್ ಪಂದ್ಯಾವಳಿ ಹತ್ತೇ ತಂಡಗಳಿಗೆ ಸೀಮಿತಗೊಳ್ಳಲಿದೆ ಎಂದು ಐಸಿಸಿ ಅಂದೇ ಘೋಷಿಸಿತ್ತು.
ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿದ್ದ 10 ತಂಡಗಳು ನೇರ ಪ್ರವೇಶ ಪಡೆದವು. ಉಳಿದ 4 ತಂಡಗಳೆಂದರೆ ಐರ್ಲೆಂಡ್, ಅಫ್ಘಾನಿಸ್ಥಾನ, ಸ್ಕಾಟ್ಲೆಂಡ್ ಮತ್ತು ಯುಎಇ. ಇಲ್ಲಿ ಮೊದಲ ಸಲ ವಿಶ್ವಕಪ್ ಆಡುವ ಅದೃಷ್ಟ ಪಡೆದ ತಂಡವೆಂದರೆ ಅಫ್ಘಾನಿಸ್ಥಾನ.
ಲೀಗ್ ಹಂತದಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ನ್ಯೂಜಿಲ್ಯಾಂಡ್ ನಿರ್ವಹಣೆ ಅಮೋಘವಾಗಿತ್ತು. ಎರಡೂ ತಂಡಗಳು ತಮ್ಮ ತಮ್ಮ ವಿಭಾಗದಲ್ಲಿ ಆರೂ ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆಗೈದವು. “ಎ’ ವಿಭಾಗದಿಂದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ತಲುಪಿದವು. ಲೀಗ್ ಹಂತದಲ್ಲಿ ಉದುರಿದ ದೊಡ್ಡ ತಂಡವೆಂದರೆ ಇಂಗ್ಲೆಂಡ್.
“ಬಿ’ ವಿಭಾಗದಿಂದ ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ವೆಸ್ಟ್ ಇಂಡೀಸ್ ಮುನ್ನಡೆ ಸಾಧಿಸಿದವು. ಭಾರತ ತನ್ನ ಲೀಗ್ ಅಭಿಯಾನವನ್ನು ಪಾಕಿಸ್ಥಾನ ವಿರುದ್ಧ ಆರಂಭಿಸಿತ್ತು. ಧೋನಿ ಪಡೆ ಇದನ್ನು 76 ರನ್ನುಗಳಿಂದ ಗೆದ್ದು ಪಾಕ್ ವಿರುದ್ಧ ತಾನು ಅಜೇಯ ಎಂಬುದನ್ನು ಮತ್ತೂಮ್ಮೆ ನಿರೂಪಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಬಾಂಗ್ಲಾದೇಶವನ್ನು 109 ರನ್ನುಗಳಿಂದ ಕೆಡವಿತು. ಆದರೆ ಸೆಮಿಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯದ ಸವಾಲನ್ನು ಎದುರಿಸಿ ನಿಲ್ಲಲಾಗಲಿಲ್ಲ. ಇಲ್ಲಿ 95 ರನ್ನುಗಳ ಸೋಲುಂಡ ಭಾರತ ಕೂಟದಿಂದ ಹೊರಬಿದ್ದು ಮಾಜಿ ಆಯಿತು.
ಸಿಡ್ನಿ ಸೆಣಸಾಟದಲ್ಲಿ ಆಸ್ಟ್ರೇಲಿಯ 7ಕ್ಕೆ 328 ರನ್ ಪೇರಿಸಿದರೆ, ಭಾರತ 233ಕ್ಕೆ ಕುಸಿಯಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ 4 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಇದು ಡಿ-ಎಲ್ ನಿಯಮದಂತೆ ದಾಖಲಾದ ಫಲಿತಾಂಶವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.