Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್
ಆದಿತ್ಯ-ಎಲ್1 ನೌಕೆಯ ಪಯಣದ ಮೇಲೆ ಇಸ್ರೋ ನಿಗಾ, ಟ್ರ್ಯಾಕಿಂಗ್ಗಾಗಿ ಹೊಸ ಸಾಫ್ಟ್ವೇರ್ ಅಭಿವೃದ್ಧಿ
Team Udayavani, Oct 3, 2023, 12:27 AM IST
ಹೊಸದಿಲ್ಲಿ: ಅತ್ತ ಭಾರತದ ಮೊದಲ ಸೌರ ಪರಿವೀಕ್ಷಕ ನೌಕೆ ಆದಿತ್ಯ-ಎಲ್1 ಭೂಮಿ ಯಿಂದ 1.5 ದಶಲಕ್ಷ ಕಿ.ಮೀ. ದೂರದ ತನ್ನ ಗಮ್ಯ ಸ್ಥಾನದತ್ತ ಪ್ರಯಾಣಿ ಸುತ್ತಿದ್ದರೆ, ಇತ್ತ ಭಾರತೀಯ ಬಾಹ್ಯಾ ಕಾಶ ಸಂಶೋಧನ ಸಂಸ್ಥೆ (ಇಸ್ರೋ) ಆದಿತ್ಯನ ಪ್ರತಿಯೊಂದು ನಡೆಯ ಮೇಲೂ ಕಣ್ಣಿಟ್ಟಿದೆ.
ಗಮ್ಯವನ್ನು ತಲುಪುವುದು ಮಾತ್ರವಲ್ಲ, ಆ ಸ್ಥಳದಲ್ಲಿ ನೆಲೆಗೊಳ್ಳು ವುದು ಕೂಡ ಆದಿತ್ಯ-ಎಲ್1ಗೆ ಸವಾಲೇ ಸರಿ. ಹೀಗಿದ್ದರೂ ನೌಕೆಯು ತನ್ನ ಗುರಿಯನ್ನು ಮುಟ್ಟಲಿ, ಕಕ್ಷೆಯಲ್ಲಿ ಸುರಕ್ಷಿತವಾಗಿ ನೆಲೆಸಲಿ ಎಂಬ ಉದ್ದೇಶ ಹೊಂದಿ ರುವ ಇಸ್ರೋ, ಬಾಹ್ಯಾಕಾಶ ನೌಕೆ ಎಲ್ಲಿದೆ ಮತ್ತು ಎಲ್ಲಿರಬೇಕು ಎಂಬುದರ ಬಗ್ಗೆಯೇ ಗಮನ ಕೇಂದ್ರೀಕರಿಸಿದೆ. ಈ ಟ್ರ್ಯಾಕಿಂಗ್ ಪ್ರಕ್ರಿಯೆಗೆ ಗಣಿತದ ಸೂತ್ರಗಳು ಮತ್ತು ವಿಶೇಷವಾಗಿ ಅಭಿವೃದ್ಧಿಪಡಿ ಸಲಾಗಿ ರುವ ಸಾಫ್ಟ್ ವೇರ್ ಅನ್ನು ನಾವು ನೆಚ್ಚಿ ಕೊಂಡಿ ದ್ದೇವೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ಇಸ್ರೋದ ಯುಆರ್ ರಾವ್ ಬಾಹ್ಯಾಕಾಶ ಕೇಂದ್ರವು ಈ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸಿದೆ. ಆದಿತ್ಯ ನೌಕೆಯು ಎಲ್1 (ಲಾಗ್ರೇಂಜ್ ಪಾಯಿಂಟ್ 1) ನಲ್ಲಿ ಹೋಗಿ ನೆಲೆಗೊಳ್ಳಬೇಕಿದೆ. ಆದರೆ ಎಲ್1 ಒಂದು ರೀತಿ ಯಲ್ಲಿ “ಅಸ್ಥಿರ’ ವಾದ ಬಿಂದು. ಬಾಹ್ಯಾ ಕಾಶ ನೌಕೆಯನ್ನು ನಿಖರ ವಾಗಿ ಆ ಬಿಂದುವಿನಲ್ಲಿ ಕೂರಿಸು ವುದು ಪ್ರಾಯೋಗಿಕ ವಾಗಿ ಅಸಾ ಧ್ಯವೇ ಸರಿ. ಹೀಗಾಗಿ ನೌಕೆ ಯನ್ನು ಎಲ್1 ಬಿಂದುವಿನ ಕಕ್ಷೆಯೊಳಗೆ ತರುವ ಪ್ರಯತ್ನ ನಡೆಯಲಿದೆ. ಇಲ್ಲಿ ಯಾವುದೇ ಅಚಾತುರ್ಯ ಸಂಭವಿಸ ದಂತೆ ನೋಡಿ ಕೊಳ್ಳಲು ಹೊಸ ಕಕ್ಷೆ ನಿರ್ಣಾ ಯಕ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ಸೋಮನಾಥ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.