Inspiration: ಕೇವಲ 45,000 ರೂಪಾಯಿಯಲ್ಲಿ ರೋಲ್ಸ್ ರಾಯ್ಸ್ ಕಾರು ನಿರ್ಮಿಸಿದ ಕೇರಳದ ಯುವಕ


Team Udayavani, Oct 3, 2023, 10:05 AM IST

Inspiration: ಕೇವಲ 45,000 ರೂಪಾಯಿಯಲ್ಲಿ ರೋಲ್ಸ್ ರಾಯ್ಸ್ ಕಾರು ನಿರ್ಮಿಸಿದ ಕೇರಳದ ಯುವಕ

ಅತ್ಯಂತ ದುಬಾರಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳು ಕೂಡಾ ಒಂದು, ಇದು ಪ್ರಪಂಚದ ಅತ್ಯಂತ ಶ್ರೀಮಂತರು ಮಾತ್ರ ಬಳಸುವ ಕಾರುಗಳಾಗಿವೆ. ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳನ್ನು ಸಾಮಾನ್ಯ ಜನರು ಖರೀದಿಸುವುದು ಸಾಮಾನ್ಯದ ಮಾತು! ಆದರೆ ಕೇರಳದ ಯುವಕನೊಬ್ಬ ಇದೆ ಮಾದರಿಯ ಕಾರನ್ನು ಬರೇ 45,000 ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾನೆ.

ಬನ್ನಿ ಹಾಗಾದರೆ ಈ ಕಾರನ್ನು ತಯಾರಿಸಿದ ಯುವಕ ಯಾರು ಇಷ್ಟು ಕಡಿಮೆ ಖರ್ಚಿನಲ್ಲಿ ಹೇಗೆ ಕಾರನ್ನು ತಯಾರಿಸಿದ್ದಾನೆ ನೋಡೋಣ.

ಆದುನಿಕ ಯುಗದಲ್ಲಿ ಯುವಕರು ಹೊಸ ಹೊಸ ವಿಚಾರಗಳ ಬಗ್ಗೆ ಅನ್ವೇಷಣೆ ಮಾಡುವುದರಲ್ಲಿ ಹೆಚ್ಚಿನ ಉತ್ಸಾಹ ಹೊಂದಿದ್ದಾರೆ ಅದರಲ್ಲೂ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಹೊಸ ಹೊಸ ಆವಿಷ್ಕಾರಗಳಿಗೆ ಈ ಮೊಬೈಲ್ ಸಹಕಾರಿಯಾಗಿದೆ ಎಂದು ಹೇಳಬಹುದು. ಅದರಂತೆ ಕೇರಳದ ಯುವಕನೊಬ್ಬ ಮಾರುತಿ ೮೦೦ ಕಾರನ್ನು ಬಳಸಿ ಕೇವಲ 45,000 ಖರ್ಚು ಮಾಡಿ ಕೋಟಿಗಟ್ಟಲೆ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರಿನ ಮಾದರಿಯನ್ನೇ ನಿರ್ಮಾಣ ಮಾಡಿದ್ದಾನೆ, ಅಲ್ಲದೆ ಯುವಕನ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದ ಯುವಕ ತನ್ನ ಮನೆಯಲ್ಲೇ ಈ ಕಾರನ್ನು ತಯಾರಿಸಿದ್ದು ಅದಕ್ಕೆ ಬೇಕಾದ ವಸ್ತುಗಳನ್ನು ತಾನೇ ಸಿದ್ದ ಪಡಿಸಿದ್ದು ಕೆಲವೊಂದನ್ನು ಅಟೋಮೊಬೈಲ್ ಅಂಗಡಿಗಳಲ್ಲಿ ಬಿಡಿಭಾಗಗಳನ್ನು ಪಡೆದುಕೊಂಡು ಅತ್ಯಾಕರ್ಷಕವಾಗಿ ಕಾರನ್ನು ವಿನ್ಯಾಸಗೊಳಿಸಿದ್ದಾನೆ.

ಹೊರಭಾಗದಲ್ಲಿ ನೋಡುವಾಗ ರೋಲ್ಸ್ ರಾಯ್ಸ್ ಕಾರಿನಂತೆ ಕಾಣುವಂತೆ ವಿನ್ಯಾಸಗೊಳಿಸಿದ ಯುವಕ ಅದಕ್ಕೆ ಸೂಕ್ತವಾದ ಹೆಡ್ ಲೈಟ್, ಲೋಗೋ ನಿರ್ಮಾಣ ಮಾಡಿದ್ದಾನೆ. ಮಕ್ಕಳ ಆಟಿಕೆ ಸಾಮಗ್ರಿಯಲ್ಲಿ ಸಿಗುವ ರೋಲ್ಸ್ ರಾಯ್ಸ್ ಲೋಗೋವನ್ನು ಇದಕ್ಕೆ ಬಳಸಲಾಗಿದ್ದು ಹೊರಗಿನ ಭಾಗಕ್ಕೆ ಸ್ಟೀಲ್ ಶೀಟ್ ಗಳನ್ನು ಬಳಸಲಾಗಿದೆ. ಅದರಂತೆ ಕಾರಿನ ಒಳ ಭಾಗವನ್ನು ಬಿಎಂ ಡಬ್ಲ್ಯೂ ಮಾದರಿಯಲ್ಲಿ ವಿನ್ಯಾಸಗೊಳಿಸಲಾಯಿದ್ದು ಅತ್ಯಾಕರ್ಷಕವಾಗಿದೆ.

ಕಾರಿನ ಸೃಷ್ಟಿಕರ್ತನ ಬಗ್ಗೆ:
ಕೇರಳದ ಹತೀಫ್ ಈ ಕಾರಿನ ಸೃಷ್ಟಿಕರ್ತ. ಅಂದಹಾಗೆ ಹತೀಫ್ ಅವರು ಈ ರೀತಿಯ ವಿಶಿಷ್ಟ ಕಾರುಗಳನ್ನು ರಚಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಅಂತಹ ಹಲವಾರು ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇತ್ತೀಚೆಗಂತೂ ಅವರು ಮೋಟಾರ್ ಸೈಕಲ್ ಇಂಜಿನ್ ಇರುವ ಜೀಪ್ ಕಂಪನಿ ಕಾರನ್ನು ಸಿದ್ಧಪಡಿಸಿದ್ದರು ಇದಕ್ಕೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Gangavathi: ಕೌಟುಂಬಿಕ ಕಲಹ: ಅಣ್ಣನನ್ನೆ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Valentine’s Day: Young woman orders 100 pizzas for old boyfriend: But there’s a twist

Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್‌ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ

Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…

Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…

Jamui: A married woman married an agent who came for loan recovery!

Jamui: ಸಾಲ ರಿಕವರಿಗೆ ಬಂದ ಏಜೆಂಟ್‌ ನನ್ನೇ ಮದುವೆಯಾದ ವಿವಾಹಿತ ಮಹಿಳೆ!

Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ

Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ

1-ddsa

Malaysia; ಭಾರತ ಮೂಲದ ಮಹಿಳೆಯಿಂದ ಕೆಲಸಕ್ಕಾಗಿ ಪ್ರತಿದಿನ 700 ಕಿ.ಮೀ. ವಿಮಾನ ಯಾನ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.