Karwar: ಕೊನೆಗೂ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ


Team Udayavani, Oct 3, 2023, 6:41 PM IST

Karwar: ಕೊನೆಗೂ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ನಗರಕ್ಕೆ ಹೊಂದಿಕೊಂಡಿರುವ ಪೈÉಓವರ್‌ ಸನಿಹದ ಟನಲ್‌ ಗಳನ್ನು ವಾಹನ ಸಂಚಾರಕ್ಕೆ ಸೋಮವಾರ ಸಂಜೆ ಮುಕ್ತಗೊಳಿಸಲಾಗಿದೆ.

ಸೋಮವಾರ ಮಧ್ಯಾಹ್ನದಿಂದ ಶಾಸಕ ಸತೀಶ್‌ ಸೈಲ್‌, ಎಂಎಲ್‌ ಸಿ ಗಣಪತಿ ಉಳ್ವೆಕರ್‌, ನಗರಸಭೆಯ ಮಾಜಿ ಅಧ್ಯಕ್ಷ ನಿತಿನ್‌ ಪಿಕಳೆ, ಮಾಜಿ ಉಪಾಧ್ಯಕ್ಷ ಪಿ.ಪಿ.ನಾಯ್ಕ ಸತತ ಮೂರು ಗಂಟೆಗಳ ಕಾಲ ಈ ಬಗ್ಗೆ ಮಾತುಕತೆ ನಡೆಸಿದರು.

ಮಾತುಕತೆ ಫಲಪ್ರದವಾದ ಕಾರಣ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಶಾಸಕರು, ಸಾರ್ವಜನಿಕರಿಗೆ
ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸುರಂಗಮಾರ್ಗ ಸಂಚಾರ ಮುಕ್ತಗೊಳಿಸುವಂತೆ ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದರು.

ಸಂಸದರ ಓಡಾಟಕ್ಕೆ ಮುಕ್ತವಾಗಿದ್ದ ಸುರಂಗ: ಕೇಂದ್ರ ಸಂಸದೀಯ ಸಮಿತಿ ನೌಕಾನೆಲೆಗೆ ಬಂದ ಕಾರಣ ಐಆರ್‌ಬಿ ಅಧಿಕಾರಿಗಳು ಟನಲ್‌ ನ್ನು ಓಪನ್‌ ಮಾಡಿಕೊಟ್ಟಿದ್ದರು. ಇದು ಮಾಧ್ಯಮದವರ ಗಮನಕ್ಕೆ ಬಂದಿತ್ತು. ಬಳಿಕ ಜಿಲ್ಲಾಧಿಕಾರಿ, ಶಾಸಕರು, ವಿಧಾನಪರಿಷತ್‌ ಸದಸ್ಯ ಉಳ್ವೆಕರ್‌ ಅವರಿಗೂ ಈ ಮಾಹಿತಿ ತಲುಪಿತು. ಆಗ ಜನಪ್ರತಿನಿಧಿಗಳಿಗೆ ಒಂದು ನೀತಿ, ಸಾರ್ವಜನಿಕರಿಗೆ ಒಂದು ನೀತಿಯೇ ಎಂಬ ಪ್ರಶ್ನೆ ಉದ್ಭವಿಸಿತು . ತಕ್ಷಣ ಶಾಸಕರು ಜಿಲ್ಲಾಧಿಕಾರಿ, ಮಾಧ್ಯಮಗಳ ಜೊತೆ ಮಾತನಾಡಿ, ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೆಕರ್‌ ಜೊತೆ ಮಾತುಕತೆ ನಡೆಸಿದರು. ಬಳಿಕ ಸುಂರಂಗದಲ್ಲಿ ಏನಾದರೂ
ಅನಾಹುತವಾದಲ್ಲಿ ಅದರ ಹೊಣೆಯನ್ನು ಎನ್‌ಎಚ್‌ ಎಐ ಮತ್ತು ಐಆರ್‌ಬಿ ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಂದ ಪತ್ರ ಬರೆಯಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ನಿರ್ಧಾರಕ್ಕೆ ಬರಲಾಯಿತು.

ಜಿಲ್ಲಾಧಿಕಾರಿಗೆ ಬಂದ ಮೇಲ್‌: ಈ ವಿಷಯವಾಗಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಅ.2 ರೊಳಗೆ ಟನಲ್‌ ಸುರಕ್ಷತೆ ಬಗ್ಗೆ ಖಾತ್ರಿ ಪಡಿಸಲು ಐಆರ್‌ಬಿ ಮತ್ತು ಎನ್‌ಎಚ್‌ಎಐಗೆ ಗಡುವು ನೀಡಿದ್ದರು. ಆದರೆ ಟನಲ್‌ ಪರಿಶೀಲನೆಗೆ ಎನ್‌ಎಚ್‌ಎಐ ಹಿರಿಯ ಅಧಿಕಾರಿ ಅ. 8 ರಂದು ಬರಲಿದ್ದಾರೆ. ಜೆ.ಪಿ.ನಡ್ಡಾ ಪುಣೆಗೆ ಬರುವ ಕಾರಣ ಟೆಕ್ನಾಲಜಿಕಲ್‌ ಯುನಿವರ್ಸಿಟಿ ವಿಜ್ಞಾನಿಗಳು ಕಾರವಾರಕ್ಕೆ ತಕ್ಷಣ ಬರಲಾಗುತ್ತಿಲ್ಲ. ಅವರು ಅ. 8 ರಂದು ಬರಲಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ಇ-ಮೇಲ್‌ ಬಂದಿತ್ತು. ಇದನ್ನು ಗಮನಿಸಿ, ಸಾರ್ವಜನಿಕರಿಗೆ , ವಾಹನ ಸವಾರರಿಗೆ ತೊಂದರೆ ಆಗುವುದನ್ನು ತಪ್ಪಿಸಲು, ಸುರಂಗವನ್ನು ಸಂಚಾರಮುಕ್ತಗೊಳಿಸಿ ಜಿಲ್ಲಾಧಿಕಾರಿಗಳು ಸೋಮವಾರ ಸಂಜೆ ಆದೇಶ ಹೊರಡಿಸಿದರು. ಸುಂರಗ ಮಾರ್ಗ ಓಪನ್‌ ಆಗಿದ್ದಕ್ಕೆ ಸಾರ್ವಜನಿಕರು ಹಾಗೂ ವಾಹನ ಸಾವರರು ಸಂತಸ ವ್ಯಕ್ತಪಡಿಸಿದ್ದಾರೆ

ಅನಾಹುತದ ಹೊಣೆ ಹೊರಲು ಸೂಚನೆ
ಅ.8 ರೊಳಗೆ ಟನಲ್‌ ಸುರಕ್ಷತೆ ಮತ್ತೂಮ್ಮೆ ಪರೀಕ್ಷಿಸಬೇಕು. ಏನಾದರೂ ಅನಾಹುತವಾದರೆ ಎನ್‌ಎಚ್‌ ಎಐ ಹೊನ್ನಾವರದಲ್ಲಿನ ಕಚೇರಿಯ ಪ್ರೊಜೆಕ್ಟ್ ಡೈರೆಕ್ಟರ್‌ ಅದರ ಹೊಣೆ ಹೊರಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈ ಆದೇಶವನ್ನು ಸಂಬಂಧಿಸಿದ ಗುತ್ತಿಗೆ ಕಂಪನಿ ಹಾಗೂ ಎನ್‌ಎಚ್‌ಎಐ ಹೊನ್ನಾವರ ಕಚೇರಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸ್‌ ಅಧೀಕ್ಷಕರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಿರ್ದೇಶಕರಿಗೆ, ಜಿಲ್ಲೆಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಕಮಿಷನರ್‌ಗಳಿಗೆ ಕಳುಹಿಸಲಾಗಿದೆ.

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.