![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 4, 2023, 12:32 AM IST
ರಾಯ್‌ಪುರ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ “ಜಾತಿಗಣತಿ’ ಅಸ್ತ್ರವನ್ನು ಝಳಪಿಸಲು ಮುಂದಾಗಿರುವ ವಿಪಕ್ಷಗಳ ಒಕ್ಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅದೇ “ಅಸ್ತ್ರ’ವನ್ನು ತಿರುಗುಬಾಣವಾಗಿ ಪ್ರಯೋಗಿಸಿದ್ದಾರೆ.
“ಜನಸಂಖ್ಯೆಗೆ ಅನುಗುಣವಾಗಿಯೇ ಹಕ್ಕುಗಳು ಸಲ್ಲಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಅಲ್ಪಸಂಖ್ಯಾಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆಯೇ?’ ಎಂದು ಮೋದಿಯವರು ಪ್ರಶ್ನಿಸಿದ್ದಾರೆ.
ಬಿಹಾರದ ಜಾತಿಗಣತಿ ವರದಿ ಬಹಿರಂಗವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿ ನಡೆಸುವುದಾಗಿ ಈಗಾಗಲೇ ವಿಪಕ್ಷಗಳ ಮೈತ್ರಿಕೂಟವು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಛತ್ತೀಸ್‌ಗಢದಲ್ಲಿ ಮಂಗಳವಾರ ಸಾರ್ವಜನಿಕ ರ್ಯಾಲಿ ನಡೆಸಿ ಮಾತನಾಡಿದ ಪ್ರಧಾನಿ, “ಕಾಂಗ್ರೆಸ್ ಈಗ ಹೊಸ ಜಪ ಆರಂಭಿಸಿದೆ. ಜನಸಂಖ್ಯೆಗೆ ಅನುಗುಣವಾಗಿಯೇ ಹಕ್ಕುಗಳನ್ನು ನೀಡಬೇಕು ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ನನ್ನ ಪ್ರಕಾರ ದೇಶದಲ್ಲಿ ಇರುವ ಅತಿದೊಡ್ಡ ಸಂಖ್ಯೆ ಬಡವರದ್ದು. ಹಾಗಾಗಿ ಅವರ ಕಲ್ಯಾಣವೇ ನನ್ನ ಗುರಿ. ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇರುವುದು ಅಲ್ಪಸಂಖ್ಯಾಕರಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಮರಿಗೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಸಂಪನ್ಮೂಲಗಳ ಮೇಲೆ ಯಾರಿಗೆ ಎಷ್ಟು ಹಕ್ಕಿದೆ ಎನ್ನುವುದು ಜನಸಂಖ್ಯೆ ಯನ್ನು ಆಧರಿಸಿರುತ್ತದೆ ಎನ್ನುತ್ತಿದೆ. ಅಂದರೆ ಕಾಂಗ್ರೆಸ್‌ನವರು ಅಲ್ಪಸಂಖ್ಯಾಕರ ಹಕ್ಕುಗಳನ್ನು ಕಿತ್ತುಕೊಳ್ಳಲು ಬಯಸುತ್ತಿದ್ದಾರೆಯೇ? ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟಪಡಿಸಬೇಕು. ಅವರ ಪ್ರಕಾರ ಎಲ್ಲ ಹಕ್ಕುಗಳನ್ನು ಹಿಂದೂಗಳೇ ಪಡೆಯಬೇಕೇ? ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಹಿಂದೂಗಳನ್ನು ವಿಭಜಿಸಿ, ಬಡವರ ಮಧ್ಯೆ ಒಡಕು ಮೂಡಿಸಿ, ದೇಶವನ್ನು ನಿರ್ಮೂಲನೆ ಮಾಡಲು ಹೊರಟಿದೆ’ ಎಂದು ವಾಗ್ಧಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನೊಳಗೇ ಭಿನ್ನಮತ
ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶಾದ್ಯಂತ ಜಾತಿಗಣತಿ ನಡೆಯಬೇಕು ಎಂದು ಆಗ್ರಹಿಸುವುದರ ಜತೆಗೆ, “ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ’ (ಜಿತ್ನಾ ಆಬಾದಿ, ಉತ್ನಾ ಹಕ್) ಎಂಬ ಹೊಸ ಉದ್ಘೋಷದ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ. ಆದರೆ ಈ ಕುರಿತು ಪಕ್ಷದೊಳಗೆ ಕೆಲವರಿಂದ ಭಿನ್ನ ರಾಗ ಕೇಳಿಬಂದಿದೆ. ಮಂಗಳವಾರ ಟ್ವೀಟ್ ಮಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, “ಅವಕಾಶಗಳಲ್ಲಿ ಸಮಾನತೆಯು ಎಂದಿಗೂ ಫಲಿತಾಂಶದ ಸಮಾನತೆಗೆ ಸಮಾನವಾಗಿರುವುದಿಲ್ಲ. ಜನಸಂಖ್ಯೆ ಆಧರಿತ ಪ್ರಾತಿನಿಧ್ಯ ಎನ್ನುವವರು ಮೊದಲು ಅದರಿಂದಾಗುವ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಅಂತಿಮವಾಗಿ ಬಹುಸಂಖ್ಯಾಕವಾದದೊಂದಿಗೆ ಕೊನೆಗೊಳ್ಳುತ್ತದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಜೈರಾಂ ರಮೇಶ್, “ಸಿಂಘ್ವಿ ಅವರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ ವಾಗಿದೆ. ಅದು ಕಾಂಗ್ರೆಸ್ ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ’ ಎಂದಿದ್ದಾರೆ. ಇದರ ಬೆನ್ನಲ್ಲೇ ಸಿಂಘ್ವಿ ಅವರು ತಮ್ಮ ಪೋಸ್ಟ್ ಅಳಿಸಿದ್ದಾರೆ.
ಈ ನಡುವೆ ಬಿಹಾರದ ಜಾತಿಗಣತಿ ವರದಿ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಸಿಎಂ ನಿತೀಶ್ ನಡೆಯನ್ನು ಪ್ರಶ್ನಿಸಿ ಸಲ್ಲಿಕೆ ಯಾಗಿ ರುವ ಅರ್ಜಿ ಯನ್ನು ಅ. 6ರಂದು ವಿಚಾರಣೆಗೆ ಕೈಗೆತ್ತಿ ಕೊಳ್ಳುವು ದಾಗಿ ನ್ಯಾಯಪೀಠ ಮಂಗಳವಾರ ಹೇಳಿದೆ.
ವರದಿ ಬಿಡುಗಡೆಯ ಧೈರ್ಯ ಮಾಡಿ: ರಾಜ್ಯದಲ್ಲೂ ಮುಂದುವರಿದ ಆಗ್ರಹ
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಜಾತಿಗಣತಿ ವರದಿ ಬಹಿರಂಗಪಡಿಸಿದಂತೆ ಕರ್ನಾಟಕ ಸರಕಾರವೂ ಈಗಾಗಲೇ ಸಿದ್ಧವಾಗಿರುವ ವರದಿಯನ್ನು ಬಹಿರಂಗಪಡಿಸುವ ಧೈರ್ಯ ಮಾಡಬೇಕು ಎಂದು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಆಗ್ರಹಿಸತೊಡಗಿದ್ದಾರೆ.
ವರದಿ ಬಿಡುಗಡೆಯಾದರೆ ಯಾವ ಸಮುದಾಯಕ್ಕೆ ಯಾವ ರೀತಿಯ ಕಾರ್ಯಕ್ರಮ ರೂಪಿಸಬೇಕು, ಯಾರಿಗೆ ಹೆಚ್ಚಿನ ಅನುದಾನ ಕೊಡಬೇಕು ಎನ್ನುವುದು ಗೊತ್ತಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ವರದಿಯನ್ನು ಸರಕಾರ ತತ್‌ಕ್ಷಣವೇ ಸ್ವೀಕರಿಸದಿದ್ದರೆ ದೊಡ್ಡ ಮಟ್ಟದಲ್ಲಿ ಜನಾಂದೋಲನ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಎಲ್ಲರಿಗೂ ಸಮಾನ ಸೌಲಭ್ಯ ದೊರಕಲು ಕೇಂದ್ರ ಸರಕಾರವೂ ಜಾತಿಗಣತಿ ನಡೆಸಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.