Bigg Boss 10: ಈ ಬಾರಿ ಕಿಚ್ಚನ ಬಿಗ್‌ ಬಾಸ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರೇ ನೋಡಿ..


Team Udayavani, Oct 4, 2023, 12:30 PM IST

Bigg Boss: ಈ ಬಾರಿ ಕಿಚ್ಚನ ಬಿಗ್‌ ಬಾಸ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರೇ ನೋಡಿ..

ಬೆಂಗಳೂರು: ಕಿಚ್ಚ ಸುದೀಪ್‌ ನಡೆಸಿಕೊಡುವ ಜನಪ್ರಿಯ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಆರಂಭಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದಿದೆ. ಪ್ರತಿಬಾರಿಯ ಹಾಗೆ ಈ ಬಾರಿಯೂ ಬಿಗ್‌ ಬಾಸ್‌ ಮನೆಯೊಳಗೆ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಕಾರ್ಯಕ್ರಮ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಕೆಲವರ ಹೆಸರುಗಳು ಕೇಳಿ ಬರುತ್ತಿದೆ. ಇಲ್ಲಿದೆ ಆ ಪಟ್ಟಿ..

ತರುಣ್ ಚಂದ್ರ: ʼಪರಿಚಯʼ, ʼಲವ್‌ ಗುರುʼ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ನಟ ತರುಣ್‌ ಚಂದ್ರ ಅವರು ಬಿಗ್‌ ಬಾಸ್‌ ಸೀಸನ್‌ 10 ನಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಆಶ್ವಿನಿ: ಕಿರುತೆರೆಯಲ್ಲಿ ತನ್ನ ನಟನೆಯಿಂದ ಅಪಾರ ವೀಕ್ಷಕರ ಪ್ರೀತಿಯನ್ನು ಸಂಪಾದಿಸಿರುವ ಆಶ್ವಿನಿ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ʼಮುದ್ದು ಮನಸೇʼ ಧಾರಾವಾಹಿಯಿಂದ ಖ್ಯಾತರಾಗಿರುವ ಅವರನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ.

ಆಶಾ ಭಟ್:‌ ʼರಾಬರ್ಟ್‌ʼ ಬೆಡಗಿಯಾಗಿ ಚಂದನವನದಲ್ಲಿ ಗಮನ ಸೆಳೆದ ನಟಿ ಆಶಾ ಭಟ್‌ ಈ ಬಾರಿಯಬಿಗ್‌ ಬಾಸ್‌ ಮನೆಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಮಿಸ್ ಸುಪ್ರಾನ್ಯಾಷನಲ್ 2014 ಸ್ಪರ್ಧೆಯ ವಿಜೇತೆಯಾಗಿ, 2019 ರಲ್ಲಿ ಬಿಡುಗಡೆಯಾದ ಬಾಲಿವುಡ್‌ ನ ವಿದ್ಯುತ್ ಜಮ್ವಾಲ್ ಅಭಿನಯದ ʼಜಂಗ್ಲಿʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ರಂಜನಿ ರಾಘವನ್: ಮನೆ ಮನಗಳಲ್ಲಿ ʼಕನ್ನಡತಿʼಯಾಗಿ ಮಿಂಚಿದ ರಂಜನಿ ರಾಘವನ್ ಅವರ ಹೆಸರು ಕೂಡ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಲೇಖಕಿಯೂ ಆಗಿರುವ ಅವರು ಜನರಿಗೆ ಕಿರುತೆರೆಯಿಂದ ಹೆಚ್ಚು ಪರಿಚಯಸ್ಥರು.

ರಾಘವೇಂದ್ರ: ಇನ್ನು ಕಿರುತೆರೆಯಲ್ಲಿ ಮಿಂಚಿ, ಹಾಸ್ಯದಿಂದ ಮನಗೆದ್ದಿರುವ ರಾಘವೇಂದ್ರ ಅವರು ಕೂಡ ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ. ರಿಯಾಲಿಟಿ ಶೋ ಪ್ರಿಮಿಯರ್‌ ನಲ್ಲಿ ಮಿಂಚಿದ ಅವರು ಅಂದಿನಿಂದ ಪ್ರೇಕ್ಷಕರನ್ನು ತನ್ನ ಹಾಸ್ಯದಿಂದಲೇ ರಂಜಿಸುತ್ತಲೇ ಬಂದಿದ್ದಾರೆ.

ಚಂದ್ರಪ್ರಭಾ: ʼಮಜಾಭಾರತʼ ಮೂಲಕ ನಕ್ಕು ನಗಿಸಿದ ಕಲಾವಿದ ಚಂದ್ರಪ್ರಭಾ ಕಳೆದ ಕೆಲ ದಿನಗಳ ಹಿಂದೆ ಅಪಘಾತ ಪ್ರಕರಣವೊಂದರಲ್ಲಿ ಸುದ್ದಿಯಾಗಿದ್ದರು. ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಪ್ರಭುಗಳ ಪ್ರೀತಿಯನ್ನು ಸಂಪಾದಿಸಿರುವ ಚಂದ್ರಪ್ರಭಾ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗುತ್ತಾರೆ ಎನ್ನಲಾಗುತ್ತಿದೆ.

ವಿನಯ್‌ ಕುಮಾರ್:‌ ಇನ್ನು ಕರ್ನಾಟಕದ ಮಾಜಿ ಕ್ರಿಕೆಟಿಗ, ಟೀಮ್‌ ಇಂಡಿಯಾದಲ್ಲೂ ಗುರುತಿಸಿಕೊಂಡಿದ್ದ ದಾವಣಗೆರೆ ಎಕ್ಸ್‌ ಪ್ರೆಸ್‌ ವಿನಯ್‌ ಕುಮಾರ್‌ ಅವರು ಈ ಬಾರಿಯ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಮಿಮಿಕ್ರಿ ಗೋಪಿ:  ತನ್ನ ವಿಶಿಷ್ಯ ಮಿಮಿಕ್ರಿ ಹಾಗೂ ಹಾಸ್ಯ ಪ್ರವೃತ್ತಿಯಿಂದಲೇ ಕಿರುತೆರೆ ಲೋಕದಲ್ಲಿ ಮಿಂಚಿರುವ ಮಿಮಿಕ್ರಿ ಗೋಪಿ ಅವರು ಬಿಗ್‌ ಬಾಸ್‌ ಮನೆಯೊಳಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ನಟನಾಗಿಯೂ ಗೋಪಿ ಗುರುತಿಸಿಕೊಂಡಿದ್ದಾರೆ. 9ನೇ ಸೀಸನ್‌ ನಲ್ಲೂ ಅವರ ಹೆಸರು ಕೇಳಿ ಬಂದಿತ್ತು.

ಇವರು ಮಾತ್ರವಲ್ಲದೆ ಪತ್ರಕರ್ತ ಹರೀಶ್‌ ನಾಗರಾಜ್‌,ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌, ʼಗೀತಾʼ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ, ಕಿರುತೆರೆ ನಟಿ ಸುಕೃತಾ ನಾಗ್, ನಟ ರಾಜೇಶ್‌ ಧ್ರುವ,ಕಿರುತೆರೆ ನಟ ನಿನಾದ ಹರಿತ್ಸಾ, ಪುಟ್ಟ ಗೌರಿ ಮದುಗವೆ ಹಾಗೂ ನಾಗಿನಿ -2 ಖ್ಯಾತಿ ನಮ್ರತಾ ಗೌಡ ಸೇರಿದಂತೆ ಇನ್ನು ಹಲವರ ಹೆಸರು ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.

ಆದರೆ ಕಾರ್ಯಕ್ರಮದ ಆರಂಭದವರೆಗೆ ಇದು ಯಾವುದು ಕೂಡ ಅಂತಿಮವಲ್ಲ.

ಟಾಪ್ ನ್ಯೂಸ್

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

By Election: Announcement of By-Election for the Dakshina Kannada Local Bodies Constituency

By Election: ದ. ಕನ್ನಡ ಸ್ಥಳೀಯ ಸಂಸ್ಥೆಗಳ ಪರಿಷತ್ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

1-wewqe

Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.