Honey Bee: ಜೇನುನೊಣಗಳಿಂದ ಅಡಿಕೆ ಕೃಷಿಗೆ ಪರೋಕ್ಷ ಲಾಭ


Team Udayavani, Oct 5, 2023, 12:39 AM IST

honey bee

ಎರೆಹುಳದಂತೆ ಜೇನುನೊಣಗಳೂ ಕೂಡ ರೈತಮಿತ್ರ. ಜೇನು ನೊಣಗಳಿಂದ ಜೇನುತುಪ್ಪ ಪ್ರತ್ಯಕ್ಷ ಲಾಭವಾದರೆ ಅದಕ್ಕಿಂತಲೂ ಹೆಚ್ಚಿನ ಲಾಭವನ್ನು ಪರಾಗಸ್ಪರ್ಶದ ಮೂಲಕ ನಮಗೆ ಅರಿವಿಲ್ಲದೆಯೇ ಪಡೆಯಬಹುದು. ಜೇನು ನೊಣಗಳಲ್ಲಿ ಹಲವು ವಿಧಗಳಿದ್ದರೂ ರೈತರಿಗೆ ಸಾಕಲು ಅನು ಕೂಲಕರ ಮೊಜಂಟಿ ಮತ್ತು ತುಡುವೆ ಜೇನು ಕುಟುಂಬ.

ತುಡುವೆ ಜೇನುನೊಣಗಳು ಆಹಾರಕ್ಕಾಗಿ ಸುಮಾರು ಒಂದೆರಡು ಕಿಲೋಮೀಟರ್‌ ದೂರದ ತನಕ ಹೋಗಿ ಬರುತ್ತವೆ. ವಿಜ್ಞಾನ ಎಷ್ಟೇ ಮುಂದುವರಿದರೂ ಜೇನುತುಪ್ಪವನ್ನು ತಯಾರಿಸಲು ಇಂದಿಗೂ ಸಾಧ್ಯವಾಗಿಲ್ಲ. ಜೇನುನೊಣಗಳು ಪುಷ್ಪರಸವನ್ನು ಹೀರಿ ಗೂಡಿಗೆ ಮರಳುವ ಸಂದರ್ಭದಲ್ಲಿ ಕೆಲವು ಕಿಣ್ವಗಳು ಸೇರಿ ಅದು ಜೇನುತುಪ್ಪವಾಗಿ ಪರಿವರ್ತನೆ ಹೊಂದುತ್ತದೆ. ಜೇನುನೊಣಗಳು ಅದನ್ನು ಗೂಡಿನೊಳಗೆ ಇರುವ ಎರಿಗಳ ಕೋಶಗಳೊಳಗೆ ಉಗುಳುತ್ತವೆ. ಆದ್ದರಿಂದ ಇದನ್ನು ಮಧೂಚ್ಛಿಷ್ಟ ಎನ್ನುತ್ತಾರೆ. ದೇವತಾಕಾರ್ಯಗಳಿಗೆ ಈ ಜೇನುತುಪ್ಪ ಅಗತ್ಯ. ಅಡಿಕೆ ಕೃಷಿಕರು ತುಡುವೆ ಜೇನು ಕುಟುಂಬಗಳನ್ನು ಸಾಕುವುದರಿಂದ ಹೆಚ್ಚಿನ ಪರಾಗಸ್ಪರ್ಶ ಆಗಿ ಇಪ್ಪತ್ತೆçದರಿಂದ ಮೂವತ್ತು ಶೇಕಡಾ ಇಳುವರಿ ಹೆಚ್ಚಾಗುತ್ತದೆ.

ಬೇರೆ ಜಾತಿಯ ಜೇನುನೊಣಗಳಿಗಿಂತ ತುಡುವೆ ಜೇನುನೊಣಗಳಲ್ಲಿ ಪರಾಗಸ್ಪರ್ಶದ ಸಾಧ್ಯತೆ ಹೆಚ್ಚು. ಈ ಜಾತಿಯ ಜೇನುನೊಣಗಳಿಗೆ ಹೂವುಗಳ ಮೇಲೆ ನಿಷ್ಠೆ ಅಧಿಕ. ಒಂದು ಜಾತಿಯ ಹೂವುಗಳಲ್ಲಿ ಪರಾಗ ಮತ್ತು ಪುಷ್ಪರಸ ಮುಗಿಯುವ ತನಕ ಅದೇ ಜಾತಿಯ ಹೂವುಗಳ ಬಳಿಗೇ ಹೋಗುತ್ತವೆ. ತಮ್ಮ ಹಿಂಗಾಲುಗಳೆರಡರಲ್ಲೂ ಇರುವ ಒಂದೊಂದು ಪರಾಗ ಕುಕ್ಕೆಯಲ್ಲೂ ಮುಂಗಾಲುಗಳ ಸಹಾಯದಿಂದ ಒತ್ತೂತ್ತಾಗಿ ಪರಾಗಗಳನ್ನು ತುಂಬಿಕೊಂಡು ಗೂಡಿಗೆ ತಂದು ಎರಿಗಳ ಕೋಶಗಳಲ್ಲಿ ಹಾಕುತ್ತವೆ. ಗೂಡಿನೊಳಗೆ ಇರುವ ಜೇನುನೊಣಗಳು ಜೇನುತುಪ್ಪದೊಂದಿಗೆ ಈ ಪರಾಗವನ್ನು ಮರಿನೊಣಗಳಿಗೆ ಉಣಿಸುತ್ತವೆ.

ಪರಾಗವನ್ನು ತರುವಾಗ ಕಾಲಿನ ಮೂಲಕ ಪರಾಗಸ್ಪರ್ಶ ಕ್ರಿಯೆಯಲ್ಲಿ ನೆರವಾಗುವುದಲ್ಲದೆ ಪರಾಗ ಮತ್ತು ಪುಷ್ಪರಸವನ್ನು ತರಲು ಹೂವಿನ ಮೇಲೆ ಜೇನ್ನೊಣಗಳು ಹೊರಳಾಡುವಾಗ ಮೈಯಲ್ಲಿ ಇರುವ ಚಿಕ್ಕ ಚಿಕ್ಕ ರೋಮಗಳಲ್ಲೂ ಪರಾಗರೇಣುಗಳು ಅಂಟಿಕೊಂಡು ಕಾಯಿ ಆಗುವ ಹೂವಿನಲ್ಲಿ ಕುಳಿತಾಗ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿ ಆಗುವುದು. ಅಲ್ಲದೇ ಅಡಿಕೆ ಹೂವಿನ ಜೇನುತುಪ್ಪ ಅತ್ಯಂತ ರುಚಿಕರ,ಆರೋಗ್ಯವರ್ಧಕ.

ಅಡಿಕೆ ತೋಟದಲ್ಲಿ ಒಂದು ಎಕ್ರೆಗೆ ಸುಮಾರು ಹತ್ತು ಹದಿನೈದು ಜೇನು ಕುಟುಂಬಗಳನ್ನು ಇಟ್ಟು ಸಾಕಬಹುದು. ತೋಟದ ಬದಿಯಲ್ಲಿ ನೀರು ತಾಗದಂತೆ ನೆರಳಿನಲ್ಲಿ ಜೇನು ಕುಟುಂಬಗಳನ್ನು ಇಡಬೇಕು. ಹತ್ತು ಅಡಿ ದೂರಕ್ಕೊಂದು ಜೇನು ಕುಟುಂಬವನ್ನು ಇಡಬಹುದಾದರೂ ತೋಟದ ಸುತ್ತಲೂ ದೂರ ದೂರದಲ್ಲಿ ಜೇನುಪೆಟ್ಟಿಗೆಗಳನ್ನು ಇಟ್ಟರೆ ಎಲ್ಲ ಅಡಿಕೆ ಮರಗಳ ಹೂವುಗಳಿಗೂ ಜೇನುನೊಣಗಳು ಭೇಟಿ ಕೊಡಲು ಅನುಕೂಲ.

ಜೇನು ಕುಟುಂಬ ಸಾಕಲಾಗದ ಕೃಷಿಕರು ಜೇನುನೊಣಗಳಿಗೆ ವಾಸಿಸಲು ಅನುಕೂಲ ವಾಗುವಂತೆ ಸತ್ತ ಅಡಿಕೆ ಮರ, ಈಚಲು ಮರ ಅಥವಾ ಪೊಟರೆಗಳಿರುವ ಮರಗಳನ್ನು ಕಡಿಯದೆ ಇದ್ದರೆ ಅವುಗಳ ಪೊಟರೆಗಳಲ್ಲಿ ಜೇನು ಕುಟುಂಬಗಳು ತಾವಾಗಿಯೇ ಬಂದು ನೆಲೆಸುತ್ತವೆ. ಮಡಕೆಗಳಿಗೆ ಜೇನುಮಯಣ ಸವರಿ ನೆರಳು ಇರುವ ಸ್ಥಳದಲ್ಲಿ ಇಟ್ಟರೆ ಕೆಲವೊಮ್ಮೆ ಅವುಗಳಲ್ಲೂ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಮರದ ಪೊಟರೆ, ಕಲ್ಲಿನ ಸಂದು, ಹುತ್ತ ಮೊದಲಾದವುಗಳಿಂದ ಜೇನುತುಪ್ಪವನ್ನು ತೆಗೆದು ಮೊದಲಿದ್ದಂತೆ ಮುಚ್ಚಿ ಇಟ್ಟರೆ ಮತ್ತೆ ಅದರಲ್ಲಿ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಹೀಗೆ ಅಡಿಕೆ ಕೃಷಿಕರು ಜೇನುನೊಣಗಳಿಂದ ಜೇನುತುಪ್ಪವನ್ನು ಪಡೆಯುವುದಲ್ಲದೆ ಅಡಿಕೆ ಇಳುವರಿಯೂ ವೃದ್ಧಿಯಾಗಿ ಹೆಚ್ಚಿನ ಆದಾಯವನ್ನು ಪಡೆಯಬಹುದು.

ಶಿರಂಕಲ್ಲು ಕೃಷ್ಣ ಭಟ್‌

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2024-Merge

Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು

Amber-1

ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ನ ಚಿದಂಬರ ರಹಸ್ಯವೇನು ಗೊತ್ತಾ?

China

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದರೆ ಮಾಯಾ

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.