Daily Horoscope: ಸ್ವಂತ ಉದ್ಯಮ ನಡೆಸುವವರಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು
Team Udayavani, Oct 5, 2023, 7:31 AM IST
ಮೇಷ: ಮನೆಯಲ್ಲಿ ಸಂತೃಪ್ತಿಯ ವಾತಾವರಣ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.ಹೊಸ ಜವಾಬ್ದಾರಿಗಳ ಸೇರ್ಪಡೆ. ಸಹೋದ್ಯೋಗಿಗಳ ಸಹಕಾರ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಆಗಮನ.
ವೃಷಭ: ಉದ್ಯೋಗದಲ್ಲಿ ಮುಂದೆ ಬರಲು ಪೈಪೋಟಿ. ಹಿತಶತ್ರುಗಳ ಬಾಧೆ. ಸ್ವಂತ ಉದ್ಯಮಗಳಿಗೆ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಸರಕಾರಿ ಕಚೇರಿಗಳಲ್ಲಿ ವಿಳಂಬ. ಹಳೆಯ ಶಾರೀರಿಕ ಸಮಸ್ಯೆಗೆ ಸಕಾಲಿಕ ಪರಿಹಾರ.
ಮಿಥುನ: ಮೇಲಿಂದ ಮೇಲೆ ಕಾಡುವ ಸಮಸ್ಯೆಗಳು ಹಾಗೂ ಸಮಯಕ್ಕೆ ಸರಿಯಾಗಿ ಅವುಗಳ ಪರಿಹಾರ ಇದು ನಿಮ್ಮ ವ್ಯಕ್ತಿತ್ವದ ವೈಶಿಷ್ಟ್ಯ. ಉದ್ಯೋಗಸ್ಥರು ಸತ್ವಪರೀಕ್ಷೆಯಲ್ಲಿ ಪಾರು. ಸ್ವಂತ ಉದ್ಯಮ ನಡೆಸುವವರಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು.
ಕರ್ಕಾಟಕ: ಮನೆಯಲ್ಲಿ ಎಲ್ಲರಿಗೂ ಒಳ್ಳೆಯ ಆರೋಗ್ಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳ ಸಹಕಾರ. ಉತ್ತರ ದಿಕ್ಕಿನಲ್ಲಿ ಪ್ರಯಾಣ ನಿರೀಕ್ಷೆ.ಆಪ್ತ ಸಲಹೆಯಿಂದ ದ್ವಂದ್ವ ನಿವಾರಣೆ. ವಿತ್ತ ಸಂಸ್ಥೆಯಿಂದ ಅಪೇಕ್ಷಿತ ಸಹಾಯ.
ಸಿಂಹ: ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗಸ್ಥ ರಿಗೆ ಗೌರವದ ಸ್ಥಾನ ಪ್ರಾಪ್ತಿ. ವಿಶಿಷ್ಟ ವ್ಯಕ್ತಿಯೊಬ್ಬರ ಭೇಟಿ. ಹೊಸ ವ್ಯವಹಾರ ಆರಂಭಿಸುವ ಕುರಿತು ಮಾತುಕತೆ ಮುಂದಕ್ಕೆ. ಹಳೆಯ ಗೆಳೆಯನಿಂದ ಶುಭ ಸಮಾಚಾರ. ತೀರ್ಥಯಾತ್ರೆಯ ಚಿಂತನೆ. ಹೊಸ ವಿದ್ಯೆ ಕಲಿಯುವ ಆಸಕ್ತಿ.
ಕನ್ಯಾ: ಉದ್ಯೋಗ ಸ್ಥಾನದಲ್ಲಿ ಮನಸ್ತಾಪ ತಪ್ಪಿಸಿ. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವ್ಯವಹರಿಸುವವರಿಗೆ ದುಡಿಮೆಗೆ ತಕ್ಕ ಪ್ರತಿಫಲ ನಿರಾತಂಕ ವಾಗಿ ಕೈಸೇರುವುದು. ಬಂಧುಗಳೊಡನೆ ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ವೈದ್ಯರೊಂದಿಗೆ ಸಮಾಲೋಚನೆ ಸಾಧ್ಯತೆ.
ತುಲಾ: ಮಹಾಗಣಪತಿಯ ಆರಾಧನೆಯಿಂದ ವ್ಯಾಕುಲ ದೂರ. ಮನೆಗೆ ಅತಿಥಿಗಳ ಆಗಮನ. ಪಾಲುದಾರ ಬಂಧುಗಳೊಡನೆ ಸಮಾಲೋಚನೆ. ಸರಕಾರಿ ಉದ್ಯೋಗಸ್ಥರಿಗೆ ವರ್ಗಾವಣೆಯ ಚಿಂತೆ. ಹಿತಶತ್ರುಗಳ ಕಾಟ. ವಸ್ತ್ರೋದ್ಯಮಿಗಳು ಸºರ್ಣೋದ್ಮಮಿಗಳಿಗೆ ನಿರೀಕ್ಷೆಗೆ ತಕ್ಕಂತೆ ಲಾಭ.
ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ನಿಶ್ಚಿಂತೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣವಿರುವುದರಿಂದ ನಿರಾತಂಕ ಸ್ಥಿತಿ.ಅಧ್ಯಾಪಕ ವೃಂದಕ್ಕೆ ಹೆಚ್ಚು ಜವಾಬ್ದಾರಿ.ಸರಕಾರಿ ಕಾರ್ಯಾಲಯಗಳಲ್ಲಿ ಮಂದಗತಿಯ ಸ್ಪಂದನೆಯಿಂದ ಕಾರ್ಯ ವಿಳಂಬ.
ಧನು: ಪರಿಸ್ಥಿತಿಯ ಒತ್ತಡದಿಂದ ಕಾರ್ಯ ವಿಳಂಬ. ಛಲಕ್ಕೆ ತಕ್ಕಂತೆ ಯಶಸ್ಸು. ನಿರ್ಲಿಪ್ತ ಮನಃಸ್ಥಿತಿಯಲ್ಲಿ ಮಾಡಿದ ಪ್ರಯತ್ನ ಫಲಪ್ರದ.ಉದ್ಯೋಗ ಸ್ಥಾನದಲ್ಲಿ ಜನಪ್ರಿಯತೆ ವೃದ್ಧಿ. ಹೈನುಗಾರಿಕೆ, ಜೇನುಸಾಕಣೆಯಲ್ಲಿ ಆಸಕ್ತರಿಗೆ ಆದಾಯ ತೃಪ್ತಿಕರ.ಪಿತೃಕಾರ್ಯದ ಅವಕಾಶ.
ಮಕರ: ಅನವಶ್ಯ ಚಿಂತೆ ಬೇಡ. ಸಹನೆಯೇ ನಿಮ್ಮ ಶಕ್ತಿ ಎಂಬುದನ್ನು ಮರೆಯದಿರಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ಮತ್ತು ಸವಾಲು ಗಳನ್ನು ಸ್ವೀಕರಿಸಿ. ಹತ್ತಿರದ ಬಂಧುವಿನ ಸಲಹೆ ಪಾಲಿಸಿ. ದೀರ್ಘಾವಧಿಯ ಹೂಡಿಕೆಗಳಿಗೆ ಪ್ರಾಶಸ್ತ್ಯ ನೀಡಿ.
ಕುಂಭ: ಅಯಾಚಿತ ಹಾಗೂ ಅನಪೇಕ್ಷಿತವಾಗಿ ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು. ಉದ್ಯೋಗದಲ್ಲಿ ಸ್ಥಿರ ವಾತಾವರಣ. ಸಮಾಜ ದಲ್ಲಿ ಗೌರವ ಹಾಗೂ ಜನಪ್ರಿಯತೆ ವೃದ್ಧಿ. ಗೃಹಾಲಂಕರಣ ಉದ್ಯೋಗಸ್ಥರಿಗೆ ಬೇಡಿಕೆ ಹಾಗೂ ಉತ್ತಮ ಆದಾಯ.
ಮೀನ: ಮಿಶ್ರಫಲಗಳ ದಿನವಾದರೂ ಶುಭ ಫಲಗಳೇ ಅಧಿಕ.ಸರಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳು ಮತ್ತು ನೌಕರರಿಂದ ಉತ್ತಮ ಸ್ಪಂದನೆಯ ಸಹಕಾರ. ವಾಹನ ಸಂಬಂಧಿ ಉದ್ಯೋಗಸ್ಥರಿಗೆ ತೃಪ್ತಿಕರ ಆದಾಯ ಹಾಗೂ ಜನಪ್ರಿಯತೆ ವೃದ್ಧಿ. ಹಿರಿಯರ ಆರೋಗ್ಯದ ವಿಷಯದಲ್ಲಿ ನಿಶ್ಚಿಂತೆ. ಮನೆಯಲ್ಲಿ ಎಲ್ಲರ ಸಹಕಾರ. ಮಕ್ಕಳ ಭವಿಷ್ಯ ಉಜ್ವಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.