Flash Flood: ಜಲಪ್ರಳಯಕ್ಕೆ ನಲುಗಿದ ಸಿಕ್ಕಿಂ: 14 ಮೃತ್ಯು, 23ಯೋಧರ ಸಹಿತ 102ಮಂದಿ ನಾಪತ್ತೆ
Team Udayavani, Oct 5, 2023, 8:19 AM IST
ಗ್ಯಾಂಗ್ಟಕ್: ಮೇಘ ಸ್ಫೋಟ ಹಾಗೂ ಅಣೆಕಟ್ಟಿನಿಂದ ಏಕಾಏಕಿ ನೀರು ಬಿಡುಗಡೆ ಮಾಡಿದ ಕಾರಣ ಸಿಕ್ಕಿಂನಲ್ಲಿ ಮಂಗಳವಾರ ತಡರಾತ್ರಿ ದಿಢೀರ್ ಪ್ರವಾಹ ಸೃಷ್ಟಿಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ 23 ಯೋಧರು ಸಹಿತ 102 ಮಂದಿ ನಾಪತ್ತೆಯಾಗಿ, 14 ಮಂದಿ ಮೃತಪಟ್ಟಿದ್ದಾರೆ. ಕ್ಷಣ ಮಾತ್ರದಲ್ಲಿ ಸೇತುವೆಗಳು, ವಾಹನಗಳು, ಮನೆ- ಕಟ್ಟಡಗಳು ಕೊಚ್ಚಿ ಹೋಗಿದ್ದು, ಈ ದುರಂತವನ್ನು ಸಿಕ್ಕಿಂ ಸರಕಾರ “ವಿಪತ್ತು’ ಎಂದು ಘೋಷಿಸಿದೆ.
Can’t begin to fathom the amount of damage the flash flood in Sikkim has caused. A 1200 MW dam in Chungthang completely washed away. Visited this beautiful place last year. Prayers for Sikkim 🙏🏻#sikkimflood pic.twitter.com/8CMY9BW1kt
— Sourav (@Souravk_09) October 4, 2023
ಲ್ಹೋನಾಕ್ ಲೇಕ್ ಪರಿಸರದಲ್ಲಿ ಸುರಿದ ಭಾರೀ ಮಳೆಯಿಂದ ಮಂಗಳವಾರ ತಡರಾತ್ರಿ 1.30ಕ್ಕೆ ತೀಸ್ತಾ ನದಿಯಲ್ಲಿ ಪ್ರವಾಹ
ಉಂಟಾಗಿತ್ತು. ಇದೇ ಸಮಯದಲ್ಲಿ ಚುಂಗ್‌ಥಾಂಗ್ ಅಣೆಕಟ್ಟಿನಿಂದ ನೀರನ್ನೂ ಬಿಡುಗಡೆ ಮಾಡಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಬಿಗ ಡಾಯಿಸಿತು. ನೀರಿನ ಮಟ್ಟವು ಕ್ಷಣಮಾತ್ರದಲ್ಲಿ 15-20 ಅಡಿ ಏರಿ, ಸುತ್ತಮುತ್ತಲಿನ ಪ್ರದೇಶಗಳನ್ನು ಕಬಳಿಸುತ್ತಾ ಸಾಗತೊಡಗಿತು. ವೇಳೆ ಸಿಂಗ್ಟಂ ಪ್ರದೇಶದ ಬರ್ದಾಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಕೊಚ್ಚಿ ಹೋದವು. ಹಲವಾರು ವಾಹನಗಳು ಕೆಸರಿನಲ್ಲಿ ಸಿಲುಕಿವೆ ಎಂದು ಸೇನೆ ತಿಳಿಸಿದೆ.
8 ಸೇತುವೆಗಳು ಕಣ್ಮರೆ
ರಾಜಧಾನಿ ಗ್ಯಾಂಗ್ಟಕ್‌ನಿಂದ 30 ಕಿ.ಮೀ. ದೂರದಲ್ಲಿರುವ ಉಕ್ಕಿನ ಸೇತುವೆ ಇಂದ್ರೇಣಿ ಬ್ರಿಡ್ಜ್ ಅನ್ನು ತೀಸ್ತಾ ನದಿನೀರು ಹೊತ್ತೂಯ್ದಿದೆ. ಲ್ಯಾಂಕೋ ಹೈಡೆಲ್ ಪವರ್ ಪ್ರಾಜೆಕ್ಟ್ ಸಮೀಪ ವಿರುವ ಸೇತುವೆ ಸಹಿತ ಒಟ್ಟು 8 ಸೇತುವೆಗಳೂ ಕೊಚ್ಚಿ ಹೋಗಿವೆ. ಸಿಂಗ್ಟಂ, ರಾಂಗ್‌ಪೋ ಸಹಿತ ಹಲವಾರು ಪಟ್ಟಣಗಳು ಜಲಾವೃತವಾಗಿವೆ. ಸಿಕ್ಕಿಂ ಜತೆಗೆ ದೇಶದ ಇತರ ಭಾಗಗಳನ್ನು ಸಂಪರ್ಕಿಸುವ ರಾ. ಹೆದ್ದಾರಿ-10ರ ಭಾಗವೂ ನೀರುಪಾಲಾಗಿದೆ.
Massive devastating flood in Sikkim, India.
14 Dead, 102 Missing In Sikkim Flash Flood, Missing Army Man Rescues Over 3,000 tourists are feared stranded, said a government official#SikkimCloudburst #sikkimflood # pic.twitter.com/GHYl6MLCcI
— Neeraj ( Writer/YouthMindset4Peace) #ActOnClimate (@Neeraj10z) October 5, 2023
ಮುಂದಿನ 2 ದಿನ ಭಾರೀ ಮಳೆ ಮುಂದುವರಿಯಲಿದ್ದು, ಗ್ಯಾಂಗ್ಟಕ್, ಗ್ಯಾಲ್ಶಿಂಗ್, ಪಕ್ಯಾಂಗ್ ಮತ್ತು ಸೊರೆಂಗ್ ಜಿಲ್ಲೆಗಳಿಗೆ ಆರೆಂಜ್ ಹಾಗೂ ಮಂಗಾನ್ ಮತ್ತು ನಾಮಚಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಟೀಸ್ಟಾ ನದಿ ಪ್ರವಾಹದ ಕಾರಣ ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಕ್ಕೂ ಎಚ್ಚರಿಕೆ ರವಾನಿಸಲಾಗಿದೆ. ಪ.ಬಂ.ದ ಜಲ್‌ಪಾಯಿಗುರಿ ಆಡ ಳಿತವು ತಗ್ಗುಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಆರಂಭಿಸಿದೆ. ಬುಧ ವಾರ 10 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸಿಕ್ಕಿಂ ಸಿಎಂ ಜತೆ ಮೋದಿ ಮಾತುಕತೆ
ಬುಧವಾರ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಗೋಲೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ, ಸಂತ್ರಸ್ತರ ಸುರಕ್ಷೆಗಾಗಿ ಪ್ರಾರ್ಥಿ ಸುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ: Cricket World Cup 2023: ಸಚಿನ್ ತೆಂಡುಲ್ಕರ್ ಜಾಗತಿಕ ರಾಯಭಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.