Viral: ಹೆಲ್ಮೆಟ್ ಇಲ್ಲದೆ ಪೊಲೀಸರ ಕೈಗೆ ಸಿಕ್ಕಿಬಿದ್ದರೂ,ಈತನಿಗೆ ಇದುವರಗೆ ದಂಡವೇ ಹಾಕಿಲ್ಲ!
Team Udayavani, Oct 5, 2023, 1:00 PM IST
ಗುಜರಾತ್: ನಮ್ಮ ದೇಶದಲ್ಲಿ ವಾಹನ ನಿಯಮ ಉಲ್ಲಂಘನೆ ಮಾಡಿದರೆ ಅದಕ್ಕೆ ತಕ್ಕ ದಂಡ ವಿಧಿಸುವ ನಿಯಮಗಳಿವೆ. ದ್ವಿಚಕ್ರ ವಾಹನದಲ್ಲಿ ಸಂಚರಿಸಿದರೆ ಹೆಲ್ಮೆಟ್ ಕಡ್ಡಾಯ ಎನ್ನುವ ನಿಯಮ ನಮ್ಮ ದೇಶದೆಲ್ಲೆಡೆ ಇದೆ.
ಒಂದು ವೇಳೆ ಟ್ರಾಫಿಕ್ ಪೊಲೀಸರ ಮುಂದೆ ನಾವು ಹೆಲ್ಮೆಟ್ ಧರಿಸಿಕೊಂಡು ಹೋಗದಿದ್ದರೆ, ಆಗ ನಮಗೆ ದಂಡ ಬೀಳುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್ ತೆಗೆದುಕೊಂಡ ದಿನದಿಂದ ಇವತ್ತಿನವರೆಗೆ ಹೆಲ್ಮೆಟ್ ಧರಿಸಿಯೇ ಇಲ್ಲ. ಹಾಗಂತ ಈತನಿಗೆ ಪೊಲೀಸರು ಹಿಡಿದಿಲ್ಲ ಅಂಥೇನಿಲ್ಲ. ಹತ್ತಾರು ಬಾರಿ ಪೊಲೀಸರ ಕೈಗೆ ಈತ ಸಿಕ್ಕಿ ಬಿದ್ದಿದ್ದಾನೆ. ಆದರೆ ಎಂದೂ ದಂಡವನ್ನು ಹಾಕಿಲ್ಲ.!
ಹೌದು, ಕೇಳಲು ವಿಚಿತ್ರವಾದರೂ ಇಂಥ ವ್ಯಕ್ತಿಯೊಬ್ಬ ಗುಜರಾತ್ ನಲ್ಲಿದ್ದಾನೆ. ಗುಜರಾತಿನ ಛೋಟಾ ಉದಯಪುರದ ನಿವಾಸಿಯಾಗಿರುವ ಜಾಕಿರ್ ಮೆಮನ್ ಹೆಲ್ಮೆಟ್ ಧರಿಸದೆ ನಿರಂತರವಾಗಿ ಮೋಟಾರ್ ಸೈಕಲ್ ಓಡಿಸುತ್ತಲೇ ಇದ್ದಾರೆ.
ಇದನ್ನೂ ಓದಿ: Watch: ಇನ್ಮುಂದೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಮುನ್ನ ಎಚ್ಚರ.. ಯಾಕೆಂದರೆ
ಹೆಲ್ಮೆಟ್ ಇಲ್ಲದೆ ಹತ್ತಾರು ಬಾರಿ ಸಿಕ್ಕಿಬಿದ್ದರೂ, ದಂಡವೇ ಹಾಕಿಲ್ಲ.!
2019 ರಲ್ಲಿ ಮೊದಲ ಬಾರಿ ಜಾಕಿರ್ ಮೆಮನ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಾಮಾನ್ಯವಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹೆಲ್ಮೆಟ್ ಹಾಕಿಲ್ಲ ಎನ್ನುವುದಕ್ಕೆ ಏನಾದರೂ ಸುಳ್ಳು ಕಾರಣ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತೇವೆ. ಅದು ಆಗಿಲ್ಲ ಅಂದ್ರೆ ದಂಡವನ್ನು ಕಟ್ಟಿ ಗೊಣಗುತ್ತಾ ಹೋಗುತ್ತೇವೆ. ಆದರೆ ಜಾಕಿರ್ ಹೆಲ್ಮೆಟ್ ಹಾಕಿಲ್ಲದ್ದಕ್ಕೆ ಕೊಟ್ಟ ಕಾರಣ ಕೇಳಿ ಪೊಲೀಸರು ಅಚ್ಚರಿಗೊಂಡಿದ್ದಾರೆ. “ನಾನು ಹೆಲ್ಮೆಟ್ ಹಾಕುವುದಿಲ್ಲ ಸರ್, ನನ್ನ ತಲೆಗೆ ಯಾವ ಹೆಲ್ಮೆಟ್ ಕೂಡ ಹೊಂದಿಕೆ ಆಗುವುದಿಲ್ಲ” ಎಂದಿದ್ದಾನೆ. ಆದರೆ ಪೊಲೀಸರು ಆತನ ಮಾತಿಗೆ ಸಂಶಯಗೊಂಡು ಸ್ವತಃ ತಾವೇ ಹೆಲ್ಮೆಟ್ ಅಂಗಡಿಗೆ ಕರೆದುಕೊಂಡು ಹೋಗಿ ನೋಡಿದ್ದಾರೆ. ಅಲ್ಲಿ ಯಾವ ಪ್ರಯೋಜನವೂ ಆಗಿಲ್ಲ. ಜಾಕಿರ್ ಹೇಳಿದಂತೆ ಆತನ ತಲೆಗೆ ಹೊಂದುವಂಥ ಯಾವ ಹೆಲ್ಮೆಟ್ ಕೂಡ ಅಲ್ಲಿ ಇರಲಿಲ್ಲ.
ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದರೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೂ ಝಾಕಿರ್ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಲೇ ಇದ್ದಾನೆ. ದಂಡ ವಿಧಿಸಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ, ನಿಯಮಾವಳಿಗಳಿಗೆ ಬದ್ಧರಾಗಿ ಝಾಕಿರ್ ಅವರಿಂದ ದಂಡ ಸ್ವೀಕರಿಸಲು ಪೊಲೀಸರು ವಿಫಲರಾಗಿದ್ದಾರೆ. ಆ ಕಾರಣದಿಂದ ಅವರನ್ನು ಎಚ್ಚರಿಕೆ ಕೊಟ್ಟು ಪೊಲೀಸರು ಬಿಟ್ಟಿದ್ದಾರೆ.
ತಲೆಗೆ ಹೊಂದುವಂಥ ಹೆಲ್ಮೆಟ್ ನನ್ನು ತಯಾರಿಸಿಕೊಂಡು ಹಾಕಬಹುದು ಆದರೆ ಹಣ್ಣಿನ ವ್ಯಾಪಾರಿ ಆಗಿರುವ ಅವರಿಗೆ ಅಷ್ಟೊಂದು ಖರ್ಚು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಜಾಕಿರ್.
ಇದುವರೆಗೆ ಗುಜರಾತ್ ಟ್ರಾಫಿಕ್ ಪೊಲೀಸರು ಮಾತ್ರವಲ್ಲದೆ, ಕಾನೂನು ಜಾರಿ ಅಧಿಕಾರಿಗಳು ಕೂಡ ಜಾಕಿರ್ ಅವರ ಹೆಲ್ಮೆಟ್ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.