![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Oct 5, 2023, 4:50 PM IST
ಹೈದರಾಬಾದ್: ʼಕೆಜಿಎಫ್ʼ ಸಾಮ್ರಾಜ್ಯ ಕಟ್ಟಿದ ಪ್ರಶಾಂತ್ ನೀಲ್ ಸದ್ಯ ʼಸಲಾರ್ʼ ಮೂಲಕ ಮತ್ತೊಂದು ರಣರೋಚಕ ಪಯಣವನ್ನು ಬಿಗ್ ಸ್ಕ್ರೀನ್ ಮೇಲೆ ತರಲು ಸಿದ್ದರಾಗಿದ್ದಾರೆ. ವರ್ಷಾಂತ್ಯಕ್ಕೆ ʼಸಲಾರ್ʼ ರಿಲೀಸ್ ಆಗಲಿದೆ.
ʼಕೆಜಿಎಫ್ʼ ಸಿನಿಮಾದ ಮೂಲಕ ಗ್ಲೋಬಲ್ ಮಟ್ಟದಲ್ಲಿ ಮಿಂಚಿರುವ ಪ್ರಶಾಂತ್ ನೀಲ್ ಅವರು ಜೂ. ಎನ್ ಟಿಆರ್ ಜೊತೆಗಿನ ಸಿನಿಮಾ ಮಾಡುವ ವಿಚಾರ ಸುದ್ದಿಯಾಗಿತ್ತು. ಆ ಬಳಿಕ ಆ ಸಿನಿಮಾದ ಬಗ್ಗೆ ಯಾವ ಅಪ್ಟೇಟ್ ಕೂಡ ಹೊರಬಿದ್ದಿರಲಿಲ್ಲ.
ಇದೀಗ “#NTR31” ಸಿನಿಮಾದ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ ಬಿಗ್ ಅಪ್ಡೇಟ್ ವೊಂದನ್ನು ನೀಡಿದೆ. ʼಆರ್ ಆರ್ ಆರ್ʼ ಮೂಲಕ ವಿಶ್ವಮಟ್ಟದ ಸಿನಿರಂಗದಲ್ಲಿ ಗಮನ ಸೆಳೆದಿರುವ ಜೂ.ಎನ್ ಟಿಆರ್ ಅವರು ಸದ್ಯ ಕೊರಟಾಲ ಶಿವ ಅವರ ‘ದೇವರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆದಿತ್ತು. ಈ ಸಿನಿಮಾದ ಮೂಲಕ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಟಾಲಿವುಡ್ ಎಂಟ್ರಿ ಕೊಡಲಿದ್ದಾರೆ.
ಇದನ್ನೂ ಓದಿ: World cup 1987; ಕೇವಲ ‘ಎರಡು ಟಿಕೆಟ್‘ ಬದಲಾಯಿಸಿತ್ತು ಕ್ರಿಕೆಟ್ ಜಗತ್ತಿನ ಭವಿಷ್ಯ!
ಜೂ.ಎನ್ ಟಿಆರ್ ಅವರ ʼದೇವರʼ ಸಿನಿಮಾದ ಬಗ್ಗೆ ಚರ್ಚೆ ಇರುವಾಗಲೇ ಪ್ರಶಾಂತ್ ನೀಲ್ ಅವರೊಂದಿಗಿನ ಸಿನಿಮಾದ ಬಗ್ಗೆ ಹೊರಬಿದ್ದಿರುವ ಅಪ್ಡೇಟ್ ನೋಡಿ ಅವರ ಫ್ಯಾನ್ಸ್ ಗಳು ಖುಷ್ ಆಗಿದ್ದಾರೆ.
“ತಾರಕ್ (ಜೂ.ಎನ್ ಟಿಆರ್), ಪ್ರಶಾಂತ್ ನೀಲ್ ಬಹು ನಿರೀಕ್ಷಿತ ಯೋಜನೆಯು ಏಪ್ರಿಲ್, 2024 ರಲ್ಲಿ ಪ್ರಾರಂಭವಾಗುತ್ತದೆ. ಹೈ-ಆಕ್ಟೇನ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸಲಿದೆ” ಎಂದು ಮೈತ್ರಿ ಮೂವಿ ಮೇಕರ್ಸ್ ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿದೆ.
ಸದ್ಯ ಈ ಸಿನಿಮಾದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದರ ಬಗ್ಗೆ ಯಾವ ಮಾಹಿತಿ ಕೂಡ ಹೊರಬಿದ್ದಿಲ್ಲ.
The most awaited project of @tarak9999 & #PrashanthNeel will commence in April, 2024 ❤️🔥
The prestigious high-octane spectacle will create a new benchmark in Indian Cinema 💥💥#NTRNeel 🔥@NANDAMURIKALYAN @NTRArtsOfficial pic.twitter.com/CxTPchxOPz
— Mythri Movie Makers (@MythriOfficial) October 5, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.