Sirsi;ಡಾ.ಶಶಿಕುಮಾರ,ನಾಗೇಂದ್ರ ಮೂರೂರಿಗೆ ನಮ್ಮನೆ ಪ್ರಶಸ್ತಿ,ಶ್ರೀವತ್ಸಗೆ ಕಿಶೋರ ಪುರಸ್ಕಾರ


Team Udayavani, Oct 5, 2023, 8:11 PM IST

1-ssada

ಶಿರಸಿ: ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ನಮ್ಮನೆ ಪ್ರಶಸ್ತಿಗೆ ನಾಡಿನಲ್ಲಿ ಅಕ್ಕಿ ಡಾಕ್ಟರ್ ಎಂದೇ ಹೆಸರಾದ ದೊಡ್ಡಬಳ್ಳಾಪುರದ ಡಾ. ಶಶಿಕುಮಾರ ತಿಮ್ಮಯ್ಯ, ಯಕ್ಷಗಾನದ ಸವ್ಯಸಾಚಿ ಕಲಾವಿದ ನಾಗೇಂದ್ರ ಭಟ್ಟ ಮುರೂರು, ನಮ್ಮನೆ ಕಿಶೋರ ಪುರಸ್ಕಾರಕ್ಕೆ ಯಕ್ಷಗಾನದ ಹಿಮ್ಮೇಳದ ಪ್ರತಿಭೆ ಶ್ರೀವತ್ಸ ಗುಡ್ಡೆದಿಂಬ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಹನ್ನೆರಡು ವರ್ಷಗಳಿಂದ ನಮ್ಮನೆ ಹಬ್ಬದಲ್ಲಿ ನೀಡಲಾಗುತ್ತಿರುವ ನಮ್ಮನೆ ಪ್ರಶಸ್ತಿಗೆ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಸಮಿತಿ ಯಾರಿಂದಲೂ ಆರ್ಜಿ ಪಡೆಯದೇ ಆಯ್ಕೆ ಮಾಡಿದೆ. ಇಬ್ಬರು ಬೇರೆ ಬೇರೆ ಕ್ಷೇತ್ರದ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಓರ್ವ ಕಿಶೋರ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.

ಮೂಲತಃ ಕೋಲಾರದ ಬಂಗಾರಪೇಟೆಯ ಡಾ. ಶಶಿಕುಮಾರ ತಿಮ್ಮಯ್ಯ ಅವರು ಸರಕಾರಿ ನೌಕರಿ ಬಿಟ್ಟು, ಕಳೆದ ಒಂದು ದಶಕಗಳಿಂದ ಸಂಸ್ಕರಣಾ ವಿಭಾಗದಲ್ಲಿ ಡಿಜಿಟಲ್ ತಂತ್ರಜ್ಞಾನದ ಜೊತೆಗೆ ಇಂಜನಿಯರಿಂಗ್ ಜೋಡಿಸಿ ಇಂದು‌ ಕೋಯ್ಲಾದ ಭತ್ತವನ್ನೂ ಹಳೆ ಭತ್ತವಾಗಿಸುವ ತಂತ್ರಜ್ಞಾನದ ಮೂಲಕ ಜಗತ್ತಿನ ಅನ್ನದ ಬಟ್ಟಲಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.

2016 ರಲ್ಲಿ ಕೇವಲ ನಾಲ್ಕು ಜನರಿಂದ ಆರಂಭಗೊಂಡ ಸಂಸ್ಥೆಯಲ್ಲಿ ಇಂದು ಎಂಟು ನೂರಕ್ಕೂ ಅಧಿಕ ಜನರು ಉದ್ಯೋಗ ಪಡೆದಿದ್ದು, 40ಕ್ಕೂ ಅಧಿಕ ದೇಶದಲ್ಲಿ ಇವರ ಸಂಸ್ಥೆ ಗುರುತಾಗಿದೆ. ಅನ್ನದ ಕ್ಷೇತ್ರ ಕಡಿಮೆ ಆಗುತ್ತಿರುವ ಕಾಲದಲ್ಲಿ ಅದೇ ಕ್ಷೇತ್ರದಲ್ಲಿ ಅನನ್ಯ ಕಾರ್ಯ ಮಾಡುತ್ತಿರುವ ಶಶಿಕುಮಾರ ಅವರಿಗೆ ವಿಜಯರತ್ನ, ಬಿಸನೆಸ್ ಎಕ್ಸಲೆನ್ಸ ಸೇರಿದಂತೆ ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಅರಸಿ ಬಂದಿದೆ.

ಕೃಷ್ಣಮ್ಮ ಸೇವಾ ಟ್ರಸ್ಟ್ ಮೂಲಕ ಸಾಮಾಜಮುಖಿ ಕಾರ್ಯವನ್ನೂ ಮಾಡುತ್ತಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಮ್ಮದೇ ಕೊಡುಗೆ ನೀಡುತ್ತಿದ್ದು, ತಮ್ಮ ಉದ್ಯೋಗದ ಕ್ಷೇತ್ರದಲ್ಲಿ ದೇಶೀ ಗೋವನ್ನು ಸಾಕಿ ಪೂಜಿಸುತ್ತಿರುವದೂ ವಿಶೇಷವಾಗಿದೆ.

ನಾಗೇಂದ್ರ ಭಟ್ಟ
ಯಕ್ಷಗಾನದ ಸವ್ಯಸಾಚಿ ಕಲಾವಿದ ಮೂಲತಃ ಕುಮಟಾ ತಾಲೂಕಿನ ಮೂರೂರಿನ ನಾಗೇಂದ್ರ ಭಟ್ಟ ಅವರು ಕಳೆದ 27 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಸ್ಯ, ರಾಜ, ಬಣ್ಣದ ವೇಷ ಸೇರಿದಂತೆ ಯಾವುದೇ ಪ್ರಮುಖ, ಪೋಷಕ ಪಾತ್ರ ಮಾಡುವ ನಾಗೇಂದ್ರ ಭಟ್ಟ ಅವರು ಯಕ್ಷಗಾನ ಕ್ಷೇತ್ರದ ಆಪದ್ಭಾಂಧವ ಕಲಾವಿದ ಎಂದೇ ಖ್ಯಾತಿ ಪಡೆದಿದ್ದಾರೆ. ಗುಂಡಬಾಳ, ಪೂರ್ಣಚಂದ್ರ ಯಕ್ಷಗಾನ ಮೇಳ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಯಕ್ಷಮಿತ್ರ ಮಂಡಳಿ ಸೇರಿ ರಾಜ್ಯ, ಹೊರ ರಾಜ್ಯಗಳಲ್ಲಿ ಸಾವಿರಕ್ಕೂ ಅಧಿಕ ಪ್ರದರ್ಶನದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. ಪುತ್ತೂರು ಯಕ್ಷಪಕ್ಷ ವೈಭವ, ಕೊಂಡದಕುಳಿ ರಾಮ ಹೆಗಡೆ ಸೇರಿದಂತೆ ಅನೇಕ ಪ್ರಶಸ್ತಿಗಳೂ ಬಂದಿವೆ.

ಶ್ರೀವತ್ಸ ಗುಡ್ಡೆದಿಂಬ
ಎಂಟನೇ ತರಗತಿಯಲ್ಲಿ ಓದುತ್ತಿರುವ ಸಾಗರದ ಶ್ರೀವತ್ಸ ಗುಡ್ಡೆದಿಂಬ ಯಕ್ಷಗಾನದ ಹಿಮ್ಮೇಳದ ಚಂಡೆ ವಾದನದಲ್ಲಿ ಗಮನ ಸೆಳೆದ ಕಿಶೋರ. ಕಲಾ ಕುಟುಂಬದ ಕುಡಿ ಶ್ರೀವತ್ಸ, ಹಿರಿಯ ಕಲಾವಿದ, ಮದ್ದಲೆವಾದಕ ಮಂಜುನಾಥ ಗುಡ್ಡೆದಿಂಬ, ಅರ್ಚನಾ ದಂಪತಿಯ ಪುತ್ರ. ಚಿಕ್ಕಂದಿನಿಂದಲೇ ಚಂಡೆ ವಾದನದಲ್ಲಿ ಆಸಕ್ತಿ ಪಡೆದವನು. ಅನೇಕ ಹಿರಿಯ ಕಲಾವಿದರಿಗೂ ಸಾಥ್ ನೀಡಿ ಗಮನ ಸೆಳೆದಿದ್ದಾನೆ.

ಚಿಕ್ಕಂದಿನಿಂದಲ್ಲೇ ಶ್ರೀವತ್ಸಗೆ ಸೂರ್ಯನಾರಾಯಣ ರಾವ್, ಮಂಜುನಾಥ ಗುಡ್ಡೆದಿಂಬ ಹಾಗೂ ನಂತರ ಕಲಾವಿದರಾದ ಲಕ್ಷ್ಮೀನಾರಾಯಣ ಸಂಪ, ಶ್ಯಾಮಸುಂದರ ಭಟ್ಟರಿಂದ ಪ್ರಾಥಮಿಕ ಶಿಕ್ಷಣ, ಶಂಕರ ಭಾಗವತ್ ಇತರರ ಮಾರ್ಗದರ್ಶನ ಲಭಿಸುತ್ತಿದೆ. ರಾಜ್ಯದ ಅನೇಕ‌ ಕಡೆ ನಡೆಯುವ ಯಕ್ಷಗಾನದಲ್ಲಿ ಚಂಡೆ ವಾದನದ ಪ್ರದರ್ಶನ ನೀಡಿದ ಈತನಿಗೆ ಮದ್ದಲೆ, ತಬಲಾ ವಾದನದ ಅಭ್ಯಾಸವೂ ಇದೆ. ಹವ್ಯಕ ಪಲ್ಲವ ಸೇರಿದಂತೆ ಅನೇಕ ಪ್ರಶಸ್ತಿಗಳೂ ಅರಸಿ ಬಂದಿವೆ.

ಡಿಸೆಂಬರ್ ತಿಂಗಳ ಮೊದಲ ಶನಿವಾರ ತಾಲೂಕಿನ ಬೆಟ್ಟಕೊಪ್ಪದಲ್ಲಿ ನಡೆಯುವ ನಮ್ಮನೆ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಟ್ರಸ್ಟ್‌ನ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

Transportation agency issue; Minister Ramalinga Reddy challenged BJP

Koppala: ಸಾರಿಗೆ ಸಂಸ್ಥೆ ವಿಚಾರ; ಬಿಜೆಪಿಗೆ ಸವಾಲು ಹಾಕಿದ ಸಚಿವ ರಾಮಲಿಂಗಾ ರೆಡ್ಡಿ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು … ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು …ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

14-sirsi

Sirsi: ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಗೆ ಚಂದುಬಾಬು ಪ್ರಶಸ್ತಿ

13-dandeli

ಚಕ್ರ ದುಸ್ಥಿತಿಯಲ್ಲಿದ್ದರೂ ಪ್ರಯಾಣಿಕರನ್ನು ಕರೆದೊಯ್ದ ಬಸ್: ತಡೆದು ನಿಲ್ಲಿಸಿದ ಸಾರ್ವಜನಿಕರು

4-dandeli

Dandeli: ಕಾಳಿ ನದಿಗೆ ಜಿಗಿದ ಮಹಿಳೆಯ ಮೃತದೇಹ ಪತ್ತೆ

7

Joida: ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನಿಗೆ ಹಲ್ಲೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

8

Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

7

Bunts Hostel ವೃತ್ತ: ಫುಟ್‌ಪಾತ್‌ ಇಲ್ಲದೆ ಅಪಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.