ISRO: ಗಗನಯಾನ: ಮಾಸಾಂತ್ಯದಲ್ಲಿ ಕ್ರ್ಯೂ ಪರೀಕ್ಷೆ
ಒಟ್ಟು ನಾಲ್ಕು ಬಾರಿ ಪರೀಕ್ಷೆ - ವಿಎಸ್ಎಸ್ ನಿರ್ದೇಶಕ ಉನ್ನಿಕೃಷ್ಣನ್ ಮಾಹಿತಿ
Team Udayavani, Oct 5, 2023, 11:36 PM IST
ಹೊಸದಿಲ್ಲಿ: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ದೇಶದ ಮಹತ್ವಾಕಾಂಕ್ಷೆಯ ಮಾನವಸಹಿತ ಬಾಹ್ಯಾಕಾಶ ಯೋಜನೆ ಗಗನಯಾನದತ್ತ ಇಸ್ರೋ ಗಮನ ನೆಟ್ಟಿದ್ದು, ಮಾಸಾಂತ್ಯದಲ್ಲಿ ಯೋ ಜನೆಗೆ ಸಂಬಂಧಿಸಿದಂತೆ ಕ್ರ್ಯೂ ಎಸ್ಕೇಪ್ ಸಿಸ್ಟಮ್ನ ಪರೀಕ್ಷೆ ನಡೆ ಸಲು ಯೋಜಿಸಿದೆ.
ಈ ಸಂಬಂಧಿಸಿದಂತೆ ವಿಕ್ರಮ್ ಸಾರಾ ಭಾಯಿ ಸ್ಪೇಸ್ ಸೆಂಟರ್ (ವಿಎಸ್ಎಸ್ಸಿ) ನಿರ್ದೇಶಕ ಎಸ್. ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿ ನಲ್ಲಿ ಮಾತನಾಡಿದ ಅವರು ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ಒಳಗಿದ್ದಂತೆಯೇ ಇನ್ಫ್ಲೈಟ್ ಅಬಾರ್ಟ್ ನಡೆಸಲು ಸಾಧ್ಯವಿದೆಯೇ ಎಂದು ಪರೀಕ್ಷಿಸುವ ನಿಟ್ಟಿನಲ್ಲಿ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಅನ್ನು ಪರೀಕ್ಷಿಸಬೇಕಿದೆ. ಇದಕ್ಕಾಗಿ ಟೆಸ್ಟ್ ವೆಹಿಕಲ್ಗಳನ್ನೂ ಅಭಿವೃದ್ಧಿಪಡಿಸಲಾಗಿದ್ದು, ಅವುಗಳೆಲ್ಲವೂ ಉಡಾವಣೆಗಾಗಿ ಶ್ರೀ ಹರಿಕೋಟಾವನ್ನು ತಲುಪಿದ್ದಾಗಿದೆ. ಉಡಾ ವಣೆಗಾಗಿ ಸಿದ್ಧತೆಗಳು ನಡೆ ಯುತ್ತಿದ್ದು, ಮಾಸಾಂತ್ಯದಲ್ಲಿ ಈ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ ಎಂದು ಗುರುವಾರ ಹೇಳಿದ್ದಾರೆ.
ಕ್ರೂ ಎಸ್ಕೇಪ್ ಸಿಸ್ಟಮ್ ಗಗನಯಾನ ಯೋಜನೆಯ ಬಹುದೊಡ್ಡ ಅಂಶ ವಾಗಿದ್ದು, ಡೈನಮಿಕ್ ಪ್ರಶೆರ್ ಹಾಗೂ ಟ್ರಾನ್ಸಾನಿಕ್ ಕಂಡಿಶನ್ಗಳಲ್ಲಿಯೂ ಈ ವ್ಯವಸ್ಥೆ ಕಾರ್ಯ ನಿರ್ವಹಿಸುವುದು ಅತ್ಯಗತ್ಯ ವಾಗಿದೆ. ಅದರ ಕಾರ್ಯ ನಿರ್ವಹಣೆಯನ್ನು ಖಾತರಿ ಪಡಿಸಿ ಕೊಳ್ಳುವ ಉದ್ದೇಶವನ್ನು ಪರೀಕ್ಷಾರ್ಥ ಉಡಾವಣೆ ಹೊಂದಿದೆ. ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಲಿದ್ದು, ಈ ಮಾಸಾಂತ್ಯದಲ್ಲಿ ಟಿವಿ-ಡಿ1 ಎನ್ನುವ ಪರೀಕ್ಷಾರ್ಥ ವಾಹನ ಉಡಾವಣೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.