Indo-Canada: ಕೆನಡಾದಿಂದಲೂ ಹಸ್ತಕ್ಷೇಪ: ಭಾರತ ಆರೋಪ
ಕೆನಡಾ ರಾಜತಾಂತ್ರಿಕ ಅಧಿಕಾರಿಗಳ ಸಂಖ್ಯೆ ತಗ್ಗಿಸಲು ಸಮರ್ಥನೆ ಕೊಟ್ಟ ಕೇಂದ್ರ
Team Udayavani, Oct 5, 2023, 11:39 PM IST
ಹೊಸದಿಲ್ಲಿ: ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾದ ಹಸ್ತಕ್ಷೇಪ ಹೆಚ್ಚಾಗಿದ್ದರಿಂದಲೇ ಆ ದೇಶದ ರಾಜತಾಂತ್ರಿಕ ಅಧಿಕಾರಿ ಗಳ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ. ಹೀಗೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಭಗಿc ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ ಮಾತನಾಡಿದ ಅವರು ಹೊಸದಿಲ್ಲಿಯಲ್ಲಿ ಇರುವ ಆ ದೇಶದ ಹೈಕಮಿಷನ್ ಕಚೇರಿಯಲ್ಲಿ ಮಿತಿಗಿಂತ ಹೆಚ್ಚು ಅಧಿಕಾರಿಗಳಿದ್ದಾರೆ. ಅವರಿಗೆ ಹೆಚ್ಚಿನ ಸ್ಥಾನ, ಮಾನ್ಯತೆ ನೀಡಲಾಗಿತ್ತು. ಇದೀಗ 2 ದೇಶಗಳಿಗೂ ಸಮನಾಗಿರುವ ಸಂಖ್ಯೆ ಯಲ್ಲಿ ಅಧಿಕಾರಿಗಳನ್ನು ಹೊಂದುವ ಬಗ್ಗೆ ಮಾತುಕತೆ ನಡೆಸಲಾ ಗು ತ್ತಿದೆ ಎಂದು ಅವರು ಹೇಳಿದ್ದಾರೆ.
ರಾಯಭಾರ ಕಚೇರಿ ತಿರಸ್ಕಾರ: ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಹೊಸದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ತಮ್ಮ ತಂಡಕ್ಕೆ ಮುನ್ಸೂಚನೆ ನೀಡಿದ್ದರು ಎಂಬ ವಾದವನ್ನು ರಾಯಭಾರ ಕಚೇರಿ ತಿರಸ್ಕರಿಸಿದೆ. ಇದರಿಂದಾಗಿ ಅಮೆರಿಕ-ಭಾರತ ನಡುವಿನ ಬಾಂಧವ್ಯಕ್ಕೂ ಧಕ್ಕೆಯಾಗದು ಎಂದೂ ಹೇಳಿದೆ.
ವ್ಯಕ್ತಿ ಬಂಧನ: ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ಥಾನಿ ಉಗ್ರರು ಮಾರ್ಚ್‌ನಲ್ಲಿ ನಡೆಸಿದ್ದ ದಾಳಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನನ್ನು ಸ್ಕಾಟ್‌ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ.
ಟ್ರಾಡೊ ಅನುಚಿತ ವರ್ತನೆ
ಕೆನಡಾದ ಹೌಸ್‌ಆಫ್ ಕಾಮನ್ಸ್‌ನಲ್ಲಿ ಕಲಾಪ ನಡೆಯುತ್ತಿದ್ದಾಗ ಸ್ಪೀಕರ್ ಫರ್ಗುಸ್ ಟ್ರೂಡೊರನ್ನು ಗೌರವಾನ್ವಿತ ಪ್ರಧಾನಿ ಎಂದು ಸಂಬೋಧಿಸಿದ್ದಾರೆ ಈ ವೇಳೆ ಟ್ರಾಡೊ ಬಹು ಗೌರವಾನ್ವಿತ ಎಂದು ತಿದ್ದುಪಡಿ ಮಾಡಿ ಕಣ್ಣು ಮಿಟುಕಿಸಿ ನಾಲಿಗೆ ಕಚ್ಚಿಕೊಂಡು ನಕ್ಕಿದ್ದಾರೆ. ಪ್ರಧಾನಿ ಎಂಬುದನ್ನೇ ಮರೆತು ಅಸಂಸದೀಯವಾಗಿ ವರ್ತಿಸಿರುವ ಟ್ರಾಡೊ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.