Kushtagi:ನಜರ್ ಚೂಕ್ ನಿಂದ ಎನ್.ಎ. ಭೂಮಿ ಇನ್ನೊಬ್ಬರ ಹೆಸರಿಗೆ ; ಉಪನೊಂದಣಾಧಿಕಾರಿ ಕರಾಮತ್ತು
Team Udayavani, Oct 6, 2023, 9:44 AM IST
ಕುಷ್ಟಗಿ: ತಾಲೂಕಿನ ಕಂದಕೂರು ಗ್ರಾಮದಲ್ಲಿ 20 ಗುಂಟೆ ಎನ್.ಎ. ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿದ ಜಾಗವನ್ನು ಬೇರೊಬ್ಬರ ಹೆಸರಿಗೆ ಇಲ್ಲಿನ ಉಪ ನೊಂದಣಾಧಿಕಾರಿಗಳ ನಜರ್ ಚೂಕ್ ಹಾಗೂ ಕಾರ್ಯದ ಒತ್ತಡದಿಂದ ಇನ್ನೊಬ್ಬರ ಹೆಸರಿಗೆ ಅಕ್ರಮ ರೆಜಿಸ್ಟೇಷನ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕಂದಕೂರು ಸೀಮಾದ ಸ.ನಂ. 130, ಬಿ ಹಿಸ್ಸಾ 20 ಗುಂಟೆ ಜಮೀನಿನಲ್ಲಿ ಈಗಾಗಲೇ 1984ರಲ್ಲಿ ಎನ್.ಎ. ಆಗಿದ್ದು, ಇದರಲ್ಲಿ 8 ಜನರ ಪೈಕಿ 5 ಜನ ಮನೆ ನಿರ್ಮಿಸಿಕೊಂಡಿದ್ದು ಮೂವರ ಹೆಸರಿನಲ್ಲಿ ನಿವೇಶನಗಳಿರುವುದು ವಾಸ್ತವ ಸ್ಥಿತಿ. ಈರಪ್ಪ ಕಡಿವಾಲ, ಶರಣಪ್ಪ ಕಾಮನೂರು, ರುದ್ರಪ್ಪ ಚಕ್ರಸಾಲಿ, ಕೃಷ್ಟಚಾರ ಯಂಕಪ್ಪಾಚಾರಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.
ಬಸವರಾಜ ತಾವರಗೇರಾ ಇವರ 2 ನಿವೇಶನ ಹಾಗೂ ಶರಣಪ್ಪ ಸಿಂಪಿಗೇರ 1 ನಿವೇಶನದ ಖಾಲಿ ಜಾಗೆ ಇದೆ. ಈ ಸ್ಥಿತಿಯಲ್ಲಿರುವ 20 ಗುಂಟೆ ಜಮೀನು ಕಳೆದ ಸೆ.21ರಂದು ಕುಷ್ಟಗಿ ಉಪ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ತರಾತುರಿಯಲ್ಲಿ ರೆಜಿಸ್ಟೇಶನ್ ಪ್ರಕ್ರಿಯೆ ನಡೆದಿದೆ.
ಇದಾದ ಏಳೆಂಟು ದಿನಗಳಲ್ಲಿ ಅಂದರೆ ಸೆ.29ರಂದು ಶರಣಬಸವ ಕುಟಗಮರಿ, ನಾಗರಾಜ ಹೊಟ್ಟೇರ್ ಎಂಬವರ ಹೆಸರಿನಲ್ಲಿ ಪಹಣಿ ಪತ್ರ ಸಿದ್ದವಾಗಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿವೇಶನದ ಹಕ್ಕುದಾರರು, ಇಲ್ಲಿನ ಪ್ರಭಾರಿ ಉಪನೊಂದಣಾಧಿಕಾರಿ ನಾಗೇಂದ್ರಪ್ಪ ಮಣೂರು ಅವರನ್ನು ವಿಚಾರಿಸಿದರೆ ಕಣ್ತಪ್ಪಿನಿಂದ ಪ್ರಮಾದವಾಗಿರುವ ಎಂದು ದೂರುದಾರರ ಮುಂದೆ ಸಮಾಜಾಯಿಷಿ ತರಾತುರಿಯಲ್ಲಿ ಈ 20 ಗುಂಟೆ ಜಮೀನಿನ ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳಲು ಮುಂದಾಗಿರುವುದು ಸದರಿ ಜಮೀನಿನ ವಾರಸುದಾರರನ್ನು ಕೆರಳಿಸಿದೆ.
ಸ.ನಂ. 130 ಹಿಸ್ಸಾ ಬಿ 20 ಗುಂಟೆ ಕ್ಷೇತ್ರದ ಜಮೀನು 1984ರಲ್ಲಿ ಎನ್.ಎ. ಆಗಿರುವ ಪಹಣಿ ಕಲಂ 11 ರ ಋಣಗಳು ಕಾಲಂ ನಲ್ಲಿ ದಾಖಲಾಗಿದೆ. ಎನ್.ಎ. ಆಗಿರುವುದನ್ನು ಮರೆಮಾಚಿ ಸದರಿ ಜಮೀನಿನಲ್ಲಿ 5 ಮನೆಗಳು ಮೂರು ಖಾಲಿ ನಿವೇಶನಗಳು ಇದ್ದಾಗ್ಯೂ ಈ ಜಮೀನು ಖರೀಧಿಸಿ ವ್ಯವಸ್ಥಿತವಾಗಿ ಅಕ್ರಮವಾಗಿ ನೊಂದಣಿ ಮಾಡಿಸಿಕೊಂಡಿದ್ದಾರೆ.
ಮನೆಗಳಿರುವ ಜಮೀನು ಯಾವುದೇ ಕಾರಣಕ್ಕೂ ಪರಭಾರೆ ಮಾಡುವುದು ಅಸಿಂಧು ಆಗಿದ್ದಾಗ್ಯೂ ಉಪ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ರೆಜಿಸ್ಟೇಷನ್ ಸಂಧರ್ಭದಲ್ಲಿ ಕಂದಾಯ ಭೂಮಿ ಎಂದು ಅದೇ ಗ್ರಾಮದ ಇಬ್ಬರ ಹೆಸರಿಗೆ ನೊಂದಣಿಯನ್ನು ಟಿ. ಬಸವರಾಜ್, ಚನ್ನಮ್ಮ ಗುತ್ತೂರು, ಶಿವಪ್ಪ ಬಿಜಕಲ್, ಈರಪ್ಪ ಕಡಿವಾಲ, ಶರಣ್ಪಪ ಶಿವಸಿಂಪರ್, ಕಳಕಪ್ಪ ಕುಂಬಾರ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಉಪ ನೊಂದಣಾಧಿಕಾರಿ ದಾಖಲೆ ಪರಿಶೀಲಿಸದೇ ನೊಂದಣಿ ಮಾಡಿಸಿಕೊಂಡಿದ್ದು ಈ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಮ್ಮ ಎಸ್ ಡಿಎ ರೇವಮ್ಮ ಶಿವಣಗಿ ಅವರು ಪ್ರಭಾರಿ ಸೇವೆಯಲ್ಲಿದ್ದಾಗ ಸದರಿ ಕಂದಾಯ ಕುಷ್ಕಿ ಭೂಮಿ 20 ಗುಂಟೆ ಜಮೀನು ಸಂಗಮ್ಮ ಪ್ರಭುಲಿಂಗಯ್ಯ ಹಿರೇಮಠ ಎಂಬುವರಿಂದ ಶರಣಪ್ಪ ಕುಟುಗಮರಿ, ನಾಗರಾಜ ಹೊಟ್ಟೇರ್ ಖರೀಧಿಸಿದ್ದು, ಸದರಿಯವರ ಹೆಸರಿಗೆ ರೆಜಿಸ್ಟೇಷನ್ ಆಗಿದೆ. ಕೆಲಸದ ಒತ್ತಡದಲ್ಲಿ ಋಣಭಾರ ಗಮನಿಸದೇ ಕಣ್ತಪ್ಪಿನಿಂದ ಆಗಿದೆ. ಇದೀಗ ಕಣ್ತಪ್ಪಿನ ಅರಿವು ಗಮನಕ್ಕೆ ಬಂದಿದ್ದು 46 ಎ ಅನ್ವಯ ಜಿಲ್ಲಾ ನೊಂದಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಅವರಿಂದ ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳುವೆ.
ಈ ಪ್ರಕರಣದಲ್ಲಿ ನೈಜ ಸ್ಥಿತಿ ಮರೆ ಮಾಚಲಾಗಿದೆ. ಖರೀದಿದಾರರು ಭೌತಿಕವಾಗಿ ಗೊತ್ತಾಗಿಯೇ ಸದರಿ ಜಮೀನು ಖರೀಧಿಸಿದ್ದು, ಖರೀಧಿದಾರರಿಗೆ ನೋಟೀಸ್ ಜಾರಿ ಮಾಡಿ, ಅವರಿಂದ ಸಂದಾವಾಗಬೇಕಾದ ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳುವೆ. –ನಾಗೆಂದ್ರಪ್ಪ ಮಣೂರು ಪ್ರಭಾರಿ ನೊಂದಣಾಧಿಕಾರಿ ಉಪ ನೊಂದಣಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.