Desi Swara: ವಿಜೃಂಭಣೆಯ 39ನೇ ಗಣೇಶೋತ್ಸವ ಆಚರಣೆ

ಧನ್ಯಾ ರತೀಶ್‌ ಮತ್ತು ತಂಡದ ವೀಣಾ ವಾದನವು ಜನರ ಮನಸ್ಸನ್ನು ಸೆಳೆಯಿತು.

Team Udayavani, Oct 7, 2023, 10:37 AM IST

Desi Swara: ವಿಜೃಂಭಣೆಯ 39ನೇ ಗಣೇಶೋತ್ಸವ ಆಚರಣೆ

ಮಸ್ಕತ್: ಇಲ್ಲಿನ ಗಣೇಶ ಸೇವಾ ಸಮಿತಿಯಿಂದ 39ನೇ ವರ್ಷದ ಗಣೇಶ ಚತುರ್ಥಿಯನ್ನು ಇಲ್ಲಿನ ಶಿವ ದೇವಾಲಯದಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಮುಖ್ಯ ಅರ್ಚಕರಾದ ಶಂಕರನಾರಾಯಣ ಅಡಿಗರು, ಗುರುದಾಸ್‌ ಪೆಜತ್ತಾಯ, ಎನ್‌. ಬಾಲಸುಬ್ರಹ್ಮಣ್ಯಂ, ವಿ. ರಾಮನ್‌, ರಾಜೇಶ್‌ ನಿಂಜೂರ್‌ ಮತ್ತು ಇನ್ನಿತರು ಅರ್ಚಕರ ಸಹಕಾರದೊಂದಿಗೆ ಮಂತ್ರಘೋಷಗಳೊಂದಿಗೆ, ವಿಧಿ ವಿಧಾನ ಬದ್ಧವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸುವುದರೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಓಂ ಶ್ರೀ ಗಣೇಶ ವೃಂದವು ಗಣಪತಿ ಸಹಸ್ರನಾಮವನ್ನು ಪಠಿಸಿ ಹಬ್ಬದ ವಾತಾವರಣಕ್ಕೆ ಕಳೆಕಟ್ಟಿದರು. ಹಲವು ಬಗೆಯ ಸೇವೆಗಳನ್ನು ಮೂರು ದಿನವೂ ಗಣಪನಿಗೆ ಭಕ್ತಿ ಪೂರ್ವಕವಾಗಿ ಸಲ್ಲಿಸಲಾಯಿತು.

ಪ್ರತಿಷ್ಠಾಪನೆಯಿಂದ ವಿಸರ್ಜನೆಯ ತನಕ ಗಣೇಶನ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆಗಳು, ನೃತ್ಯ ಸೇವೆಗಳು ನಿರಂತರವಾಗಿ ನಡೆದವು . ವೈದ್ಯನಾಥನ್‌ ಅವರ ಶಿಷ್ಯರಿಂದ ವೇದ ಪಠಣ, ಎ.ವಿ.ಮನೋಹರ್‌ ಅವರ ಶುಕ್ಲ ಯಜುರ್ವೇದ ಪಠಣಗಳನ್ನು ಪ್ರಸ್ತುತಪಡಿಸಲಾಯಿತು.

ಟವಲ್‌ ಎಂಜಿನಿಯರಿಂಗ್‌ ತಂಡ, ಆರಾಧನಾ ತಂಡ, ಚಿನ್ಮಯ ಬಾಲವಿಹಾರದ ತಂಡ, ಶ್ರೀಮತಿ ಮೀನಾಕ್ಷಿ/ ಪದ್ಮಜಾ ರಾಮಾನುಜಂ ಮತ್ತು ತಂಡ, ಹರೆ ಕೃಷ್ಣ ತಂಡ, ಮಾತಾ ಅಮೃತಾನಂದಮಯಿ ತಂಡ, ಶ್ರೀಮತಿ ಮುಕ್ತಕಲಾ ಅವರ ಗುಂಪು, ಡಿವೈನ್‌ ಸ್ಪಾರ್ಕ್‌ ತಂಡ, ಓಂಕಾರ ಮಹಿಳೆಯರ ಭಜನ ಗುಂಪು, ತ್ಯಾಗರಾಜ ಸಮಿತಿ, ಸಾಯಿ ಭಕ್ತರ ಗುಂಪು, ಜಿಎಸ್‌ಬಿ ಗುಂಪು, ನಳಿನಿ ಕಣ್ಣನ್‌ ಮತ್ತು ಶಿಷ್ಯರು, ಜಯಶ್ರೀ ಮತ್ತು ಶಿಷ್ಯರು, ಕಾಂತಿಬಾಯ್‌ ಮತ್ತು ಬಳಗ, ಒಮಾನ್‌ ಬಿಲ್ಲವ ಬಳಗ ಮುಂತಾದ ಭಜನ ಮಂಡಳಿಗಳು, ಸುದರ್ಶನ್‌ ಭಟ್‌ ಮೂಡುಬಿದಿರೆ ಮತ್ತು ಈ ಕಾರ್ಯಕ್ರಮಕ್ಕೆಂದೇ ಸ್ವದೇಶದಿಂದ ಆಗಮಿಸಿದ್ದ ಕರುಣಾಕರ್‌ ರಾವ್‌ ಅವರ ಹಾರ್ಮೋನಿಯಂನ ಅದ್ಭುತ ಸಹಕಾರದೊಂದಿಗೆ, ಡಾ| ಸಿ.ಕೆ. ಅಂಚನ್‌, ಸಚಿನ್‌ ಕಾಮತ್‌ರವರ ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮಗಳನ್ನು ಭಕ್ತಿ ಪೂರ್ವಕವಾಗಿ ವಿಘ್ನೇಶ್ವರನ ಚರಣಕ್ಕೆ ಸಮರ್ಪಿಸಿದರು.

ವಿದುಷಿ ತೀರ್ಥ ಕಟೀಲ್‌, ನಳಿನಿ ಕಣ್ಣನ್‌, ಪದ್ಮಿನಿ ಕೃಷ್ಣಮೂರ್ತಿ ಮತ್ತು ಪ್ರಮೀಳಾ ರಮೇಶ್‌ ಅವರ ತಂಡಗಳ ಭಕ್ತಿಪೂರ್ವಕ ನೃತ್ಯ ಸೇವೆಗಳನ್ನು ನೀಡಿದರು. ಧನ್ಯಾ ರತೀಶ್‌ ಮತ್ತು ತಂಡದ ವೀಣಾ ವಾದನವು ಜನರ ಮನಸ್ಸನ್ನು ಸೆಳೆಯಿತು.

ಮೂರು ದಿನದ ವಿಜೃಂಭಣೆಯ ಸಮಾರಂಭವು ಗಣೇಶ ವಿಸರ್ಜನೆಯೊಂದಿಗೆ ಸಾಂಪ್ರದಾಯಿಕ ಪೂಜೆಗಳು ಮತ್ತು ನೆರೆದ ಭಕ್ತ ಸಮೂಹದ ಒಕ್ಕೊರಲಿನ “ಗಣಪತಿ ಬಪ್ಪ ಮೊರೆಯ’ ನಾದದ ಮೂಲಕ ಕೊನೆಗೊಂಡಿತು.

ಒಮಾನ್‌ ದೇಶದ ಭಾರತದ ರಾಯಭಾರಿ, ಇಲ್ಲಿನ ಭಾರತೀಯ ಮೂಲದ ಉದ್ಯಮಿ ಶೇಕ್‌ ಅನಿಲ್‌ ಕಿಂಜಿ, ಅಶ್ವಿ‌ನ್ನಾನ್ಸಿ ಧಾರಾಂಸಿ, ಬಕುಲ್ಭಾಯೆ¾ಹ್ತಾ ಮುಂತಾದ ಗಣ್ಯರು ಉತ್ಸವದಲ್ಲಿ ಭಾಗವಹಿಸಿ ಉತ್ಸವದ ಕಳೆಯನ್ನು ಹೆಚ್ಚಿಸಿದರು.

ಒಮಾನ್‌ ಗಣೇಶೋತ್ಸವ ಸಮಿತಿಯು ಎಸ್‌. ಕೆ. ಪೂಜಾರಿಯವರ ನೇತೃತ್ವದಲ್ಲಿ ಶಶಿಧರ್‌ಶೆಟ್ಟಿ ಮಲ್ಲಾರ್‌, ಉಮೇಶ್‌ ಬಂಟ್ವಾಳ್‌, ನಾಗೈಶ್‌ ಶೆಟ್ಟಿ ಕಿನ್ನಿಗೋಳಿ, ಡಾ| ಸಿ.ಕೆ.ಅಂಚನ್‌, ರವಿ ಕಾಂಚನ್‌, ಗುರುದಾಸ್‌ ಪೆಜತ್ತಾಯ, ದೇವಾನಂದ್‌ ಅಮೀನ್‌, ಸುಕುಮಾರ್‌ ಅಂಚನ್‌, ಸಚಿನ್‌ ಕಾಮತ್‌, ರಮಾನಂದ್‌ ಕುಂದರ್‌ ಮತ್ತು ನೂರಾರು ಕಾರ್ಯಕರ್ತರು ಕಾರ್ಯಕ್ರಮವನ್ನು ಪದ್ಧತಿ ಪೂರ್ವಕವಾಗಿ ಜರಗಿಸಲು ಶ್ರಮಿಸಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.