Bigg Boss10: ದೊಡ್ಮನೆ ಆಟಕ್ಕೆ ಸ್ನೇಕ್‌ ಶ್ಯಾಮ್‌ ಎಂಟ್ರಿ? ಕುತೂಹಲಕ್ಕೆ ನಾಳೆ ತೆರೆ

Team Udayavani, Oct 7, 2023, 6:37 PM IST

Bigg Boss10: ದೊಡ್ಮನೆ ಆಟಕ್ಕೆ ಸ್ನೇಕ್‌ ಶ್ಯಾಮ್‌ ಎಂಟ್ರಿ? ಕುತೂಹಲಕ್ಕೆ ನಾಳೆ ತೆರೆ

ಬೆಂಗಳೂರು: ಕನ್ನಡದ ಬಿಗ್‌ ಬಾಸ್‌ ಸೀಸನ್‌ 10 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಇದುವರೆಗೆ ಯಾರೆಲ್ಲಾ ಸ್ಪರ್ಧಿಗಳು ಎನ್ನುವುದರ ಬಗ್ಗೆ ಅಧಿಕೃತವಾಗಿ ಗೊತ್ತಾಗಿಲ್ಲ. ಒಂದಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿದೆ.

ರಕ್ಷಿತ್‌ ಶೆಟ್ಟಿ ಅವರ ʼ777ಚಾರ್ಲಿʼ ಸಿನಿಮಾದ ಚಾರ್ಲಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿದೆ ಎನ್ನುವುದನ್ನು ವಾಹಿನಿಯೇ ಹೇಳಿದೆ. ಇದರ ಜೊತೆ ಮತ್ತೊಬ್ಬರು ದೊಡ್ಮನೆ ಆಟಕ್ಕೆ ರೆಡಿ ಆಗಿದ್ದಾರೆ. ಕಳೆದ 40 ವರ್ಷಗಳಲ್ಲಿ(1981 ರಿಂದ) ಹಾವುಗಳನ್ನು ಹಿಡಿದು, ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುವ ಸರಳ, ಸಜ್ಜನಿಕೆಯ ಸ್ನೇಕ್‌ ಶ್ಯಾಮ್‌ ಎಂದೇ ಖ್ಯಾತರಾಗಿರುವ ಬಾಲಸುಬ್ರಹ್ಮಣ್ಯ(ಮೂಲ ಹೆಸರು) ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಲಿದ್ದಾರೆ ಎನ್ನಲಾಗಿದೆ.

15-16 ಮಂದಿ ವಿವಿಧ ಕ್ಷೇತ್ರದಿಂದ ಬಿಗ್‌ ಬಾಸ್‌ ಮನೆಗೆ ಪ್ರತಿಬಾರಿ ಎಂಟ್ರಿ ಕೊಡುತ್ತಾರೆ. ಈ ಬಾರಿಯೂ ಅಷ್ಟೇ ಮಂದಿ ಸ್ಪರ್ಧಿಗಳಾಗಲಿದ್ದಾರೆ.

ಉರಗ ರಕ್ಷಕ ಸ್ನೇಕ್‌ ಶ್ಯಾಮ್‌ ಅವರು ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ತನ್ನ ಜೀವನದ ಬಹುತೇಕ ದಿನಗಳನ್ನು ಹಾವುಗಳ ರಕ್ಷಣೆ ಮಾಡುತ್ತಲೇ ಕಳೆದ ಸ್ನೇಕ್‌ ಶ್ಯಾಮ್‌ ಅವರು, ಮೈಸೂರು ಮಾತ್ರವಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾವುಗಳ ರಕ್ಷಣೆಯ ಕಾರ್ಯದಿಂದ ಖ್ಯಾತರಾಗಿರಾಗಿದ್ದಾರೆ. ಬಾಲ್ಯದಿಂದಲೇ ಹಾವುಗಳನ್ನು ಹಿಡಿದು ಕರಗತ ಮಾಡಿಕೊಂಡಿರುವ ಅವರಿಗೆ ಈಗಾಗಲೇ ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.

ಹಾವುಗಳ ಬಗೆಗಿರುವ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಸ್ನೇಕ್‌ ಶ್ಯಾಮ್‌ ಮಾಡುತ್ತಿದ್ದಾರೆ.

ಬಿಗ್‌ ಬಾಸ್‌ ಮನೆಗೆ ಅವರು ಹೋಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗೆಗಿನ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ನಾಳೆ ಸಂಜೆ(ಅ.8 ರಂದು) ಬಿಗ್‌ ಬಾಸ್‌ ಕಾರ್ಯಕ್ರಮ ಪ್ರಮಿಯರ್‌ ಆಗಲಿದೆ.

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

15

Nice Road Kannada Movie: ನೈಸ್‌ ರೋಡ್‌ ಅಲ್ಲ,ನೈಟ್‌ ರೋಡ್‌!

14

Rummy Aata Movie: ಸೆ.20ರಿಂದ ರಮ್ಮಿ ಆಟ ಶುರು

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೋಡಳ್ಳಿ ಶಿವರಾಮ್‌ ವಿಧಿವಶ

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೋಡಳ್ಳಿ ಶಿವರಾಮ್‌ ವಿಧಿವಶ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.