Moodabidri ಆಳ್ವಾಸ್ ಪ್ರಗತಿ:1,871 ಮಂದಿಗೆ ಉದ್ಯೋಗ: 3,259 ಜನರು ಮುಂದಿನ ಹಂತಕ್ಕೆ ಆಯ್ಕೆ
Team Udayavani, Oct 7, 2023, 11:58 PM IST
ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ನಡೆದ ಎರಡು ದಿನಗಳ “ಆಳ್ವಾಸ್ ಪ್ರಗತಿ’ಯ 13ನೇ ಆವೃತ್ತಿಯಲ್ಲಿ 1,871 ಮಂದಿ ವಿವಿಧ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶುಕ್ರವಾರ, ಶನಿವಾರ ನಡೆದ ಮೇಳದಲ್ಲಿ ಪಾಲ್ಗೊಂಡಿದ್ದ 198 ಕಂಪೆನಿಗಳ ಪೈಕಿ 174 ಕಂಪೆನಿಗಳು 3,259 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಮೇಳದ ಎರಡನೇ ದಿನ 2,284 ಉದ್ಯೋಗಾರ್ಥಿಗಳ ಸಹಿತ ಒಟ್ಟು ಎರಡು ದಿನಗಳಲ್ಲಿ 10,252 ಅಭ್ಯರ್ಥಿಗಳು ಭಾಗವಹಿಸಿದ್ದರು.
ವಾರ್ಷಿಕ ವೇತನದ ಹುದ್ದೆಗಳಿಗೆ ಆಯ್ಕೆ
ಅಮೆರಿಕ ಮೂಲದ ಫ್ಯಾಕ್ಟ್ಸೆಟ್ ಸಿಸ್ಟಮ್ಸ್ ಇಂಡಿಯಾ ಪ್ರೈ. ಲಿ. ಕಂಪೆನಿಯು ನಿಟ್ಟೆ ಕೆ.ಎಸ್. ಹೆಗ್ಡೆ ಕಾಲೇಜಿನ ಎಂಬಿಎ ಪದವೀಧರ, ಸಿದ್ದಕಟ್ಟೆಯ ಗೌರವ್ ಡಿ’ಕೋಸ್ಟ ಅವರನ್ನು ವಾರ್ಷಿಕ 7.1 ಲಕ್ಷ ರೂ. ವೇತನಕ್ಕೆ ಹಾಗೂ 20 ಅಭ್ಯರ್ಥಿಗಳನ್ನು ಸಂಶೋಧನ ವಿಶ್ಲೇಷಕರ ಹುದ್ದೆಗೆ ತಲಾ 3.4 ಲಕ್ಷ ರೂ. ವೇತನಕ್ಕೆ ಆರಿಸಿದೆ.
ಇಎಕ್ಸ್‌ಎಲ್ ಕಂಪೆನಿ ಆಯ್ಕೆ ಮಾಡಿರುವ 39 ಅಭ್ಯರ್ಥಿಗಳ ಪೈಕಿ ಒಬ್ಬರಿಗೆ ವಾರ್ಷಿಕ 7 ಲಕ್ಷ ರೂ., 38 ಮಂದಿಗೆ ವಾರ್ಷಿಕ ತಲಾ4 ಲಕ್ಷ ರೂ. ವೇತನದ ಭರವಸೆ ನೀಡಿದೆ.
ಬ್ಲೂ ಸ್ಟೋನ್ ಜುವೆಲರಿ (16 ಮಂದಿ-5 ಲ.ರೂ.), ಆರೋಗ್ಯ ರಂಗದ ಕಲ್ಟ್ಫಿಟ್ ಕಂಪೆನಿ (6 ಮಂದಿ- ತಲಾ 4 ಲ.ರೂ.) ಅಜೆಕ್ಸ್ ಕಂಪೆನಿ (22 ಮಂದಿ-ತಲಾ 3.5 ಲ.ರೂ. ), ಸ್ವಿಚ್‌ಗಿಯರ್ ಕಂಪೆನಿ (36 ಮಂದಿ-ತಲಾ3.2 ಲ.ರೂ.), ಟ್ರಿಪ್ ಫ್ಯಾಕ್ಟರಿ (37 ಮಂದಿ – ತಲಾ 3 ಲ.ರೂ.), ಸ್ನೆಡರ್ ಎಲೆಕ್ಟ್ರಿಕ್ ಇಂಡಿಯಾ ಕಂಪೆನಿ (18 ಮಂದಿ-ತಲಾ 2.5 ಲ.ರೂ.) ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿವೆ.
ಆಳ್ವಾಸ್ ಪ್ರಗತಿ ಅತ್ಯಂತ ಶಿಸ್ತು ಬದ್ಧವಾಗಿದ್ದು, ಸುವ್ಯವಸ್ಥಿತ. ಕಲರ್ ಕೋಡಿಂಗ್ ವ್ಯವಸ್ಥೆ, ಸ್ವಯಂಸೇವಕರ ಸಹಕಾರ ಎಲ್ಲವೂ ತುಂಬಾ ಖಷಿ ನೀಡಿತು.
-ಗೌರವ್ ಡಿಕೋಸ್ಟಾ , ಸಿದ್ಧಕಟ್ಟೆ
ಮಧ್ಯಮ ವರ್ಗದ, ಕೃಷಿ ಕುಟುಂಬದವಳಾದ ನಾನು ಆಳ್ವಾಸ್ ಸೇರಿದಾಗ ಬಾವಿಯಿಂದ ತೆಗೆದು ಸಮುದ್ರಕ್ಕೆ ಹಾಕಿದಂತಾಯಿತು. ಇಲ್ಲಿನ ಗುಣಮಟ್ಟದ ಶಿಕ್ಷಣ, ತರಬೇತಿ ಕಾರ್ಪೊರೆಟ್ ವ್ಯವಸ್ಥೆಯ ಕಂಪೆನಿ ಸಂದರ್ಶನ ಎದುರಿಸುವ ಆತ್ಮವಿಶ್ವಾಸ ಗಟ್ಟಿಗೊಳಿಸಿದೆ.
-ಆಶ್ವಿನಿ, ಆಳ್ವಾಸ್ ಎಂಬಿಎ ವಿದ್ಯಾರ್ಥಿನಿ
ಬೆಳಗಾವಿಯ ರಾಯಭಾಗ್‌ನ ನಾನು ಕ್ರೀಡಾ ದತ್ತು ಯೋಜನೆ ಮೂಲಕ ಆಳ್ವಾಸ್‌ಗೆ ಸೇರಿದೆ. ಬಳಿಕ ಮಲ್ಲಕಂಬದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದೇನೆ. ಇಲ್ಲಿನ ಶಿಕ್ಷಣ ಹಾಗೂ ಕ್ರೀಡಾ ತರಬೇತಿ ನಮ್ಮ ವ್ಯಕ್ತಿತ್ವ ಅಭಿವೃದ್ಧಿಗೆ ಸಹಕಾರಿ. ಟ್ರಸ್ಟಿ ವಿವೇಕ್ ಆಳ್ವರ ಮಾರ್ಗದರ್ಶನದಲ್ಲಿ ಸಮರ್ಪಕವಾಗಿ ಸಿದ್ಧಗೊಂಡಿದ್ದೆ.
– ವೀರಭದ್ರ ಎನ್. ಮುಧೋಳ್, ಆಳ್ವಾಸ್ ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.