Bantwal 2 ಗಂಟೆ ಈಜಾಡಿ ಜೀವ ಉಳಿಸಿಕೊಂಡ ಯುವಕ!
Team Udayavani, Oct 8, 2023, 12:42 AM IST
ಬಂಟ್ವಾಳ: ತುಂಬೆ ಡ್ಯಾಂ ಬಳಿ ಯುವಕನೋರ್ವ ಮೀನಿಗೆ ಗಾಳ ಹಾಕುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದು, ಕೊನೆಗೂ ಜೀವ ಸಹಿತ ಪಾರಾಗಿದ್ದಾರೆ. ಅವರು ಡ್ಯಾಂನಿಂದ ಹೊರಕ್ಕೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಸಿಲುಕಿ ಸುಮಾರು 2 ತಾಸುಗಳ ಕಾಲ ಈಜಾಡಿ ಕೊನೆಗೆ ಡ್ಯಾಂ ಸಿಬಂದಿ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರ ನೆರವಿನಿಂದ ಮೇಲಕ್ಕೆ ಬಂದಿರುವ ಘಟನೆ ಅ. 2ರಂದು ನಡೆದಿದೆ.
ಯುವಕನನ್ನು ಬೋಳಂತೂರು ಭಾಗದ ಇರ್ಷಾದ್ ಎಂದು ಗುರುತಿಸ ಲಾಗಿದೆ. ಡ್ಯಾಂನ 30 ಗೇಟ್‌ಗಳ ಪೈಕಿ 5 ಗೇಟ್‌ಗಳಿಂದ ನೀರು ಹೊರಕ್ಕೆ ಹೋಗುತ್ತಿದ್ದು, ಹೀಗಾಗಿ ನೀರಿನ ರಭಸವೂ ಹೆಚ್ಚಿತ್ತು ಎನ್ನಲಾಗಿದೆ.
ಬಿದ್ದಿರುವ ಯುವಕನಿಗೆ ಈಜು ಬರುತ್ತಿದ್ದು, ಆದರೆ ನೀರಿನ ರಭಸದಿಂದ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ. ರಾತ್ರಿ ಸುಮಾರು 8 ಗಂಟೆಗೆ ನೀರಿಗೆ ಬಿದ್ದಿರುವ ಆತ 2 ಗಂಟೆಗಳ ಕಾಲ ಈಜಿ ಜೀವ ಉಳಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಡ್ಯಾಂ ಸಿಬಂದಿಗೆ ಎಲ್ಲಿಂದಲೋ ಬೊಬ್ಬೆ ಕೇಳಿದ್ದು, ಹೋಗಿ ನೋಡಿದಾಗ ವ್ಯಕ್ತಿಯೋರ್ವ ನೀರಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂತು.
ಕೂಡಲೇ ಡ್ಯಾಂ ಸಿಬಂದಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಎಲ್ಲರೂ ಸೇರಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.