![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 8, 2023, 5:04 PM IST
ಸಾಮಾನ್ಯವಾಗಿ ಸಿನಿಮಾದಲ್ಲಿ ಹೀರೋಯಿನ್ಸ್ ಸ್ಲಿಮ್ ಆಗಿಯೂ, ಗ್ಲಾಮರಸ್ ಆಗಿಯೂ ಇರುವಂಥ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿಯೇ ಅನೇಕ ನಾಯಕಿಯರು ಮದುವೆಯಾದ ನಂತರ ಅಥವಾ ಮಕ್ಕಳಾದ ನಂತರ ತೆರೆಮರೆಗೆ ಸರಿಯುತ್ತಾರೆ. ಆದರೆ ನಟಿ ಮಮತಾ ರಾಹುತ್ ಮಾತ್ರ ಈ ವಿಷಯದಲ್ಲಿ ವಿಭಿನ್ನ. ನಿಜ ಜೀವನದಲ್ಲಿ ತಾನು ಗರ್ಭಿಣಿಯಾಗಿದ್ದಾಗಲೇ ನಟಿ ಮಮತಾ ರಾಹುತ್, ತೆರೆಮೇಲೆ ಕೂಡ ಗರ್ಭಿಣಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ.
ಹೌದು, ಸಿದ್ದು ಪೂರ್ಣಚಂದ್ರ ನಿರ್ದೇಶನದ “ತಾರಿಣಿ’ ಗರ್ಭಿಣಿಯ ಕುರಿತಾದ ಕಥಾಹಂದರ ಹೊಂದಿದ ಸಿನಿಮಾ. ಈ ಸಿನಿಮಾದಲ್ಲಿ ಗರ್ಭಿಣಿಯಾಗಿದ್ದ ನಟಿ ಮಮತಾ ರಾಹುತ್, ತೆರೆಮೇಲೆ ಕೂಡ ಗರ್ಭಿಣಿ ಪಾತ್ರವನ್ನು ನಿಭಾಯಿಸಿದ್ದಾರೆ. ಈಗಾಗಲೇ “ತಾರಿಣಿ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣ ಗೊಂಡಿದ್ದು, ಇತ್ತೀಚೆಗೆ ಈ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆಯಾಯಿತು. ಹಿರಿಯ ಸಾಹಿತಿ, ಹೋರಾಟಗಾರ್ತಿ ಮತ್ತು ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್ ಸೇರಿದಂತೆ ಹಲವು ಗಣ್ಯರು “ತಾರಿಣಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ “ತಾರಿಣಿ’ ಸಿನಿಮಾದ ನಿರ್ದೇಶಕ ಸಿದ್ದು ಪೂರ್ಣಚಂದ್ರ, “ಇದೊಂದು ಗರ್ಭಿಣಿಯ ಸುತ್ತ ನಡೆಯುವ ಸಿನಿಮಾ. ನಾಯಕಿ ಮಮತಾ ರಾಹುತ್ ತುಂಬು ಗರ್ಭಿಣಿ ಇರುವಾಗಲೇ ಈ ಸಿನಿಮಾದ ಪಾತ್ರವನ್ನು ನಿರ್ವಹಿಸಿರು ವುದು ವಿಶೇಷ. ಅಷ್ಟೇ ಅಲ್ಲದೇ ಮಗುವಾದ ನಂತರದ ಸನ್ನಿವೇಶಗಳೂ ಈ ಸಿನಿಮಾ ದಲ್ಲಿದ್ದು, ಆ ದೃಶ್ಯಗಳಲ್ಲೂ ಮಮತಾ ರಾಹುತ್ ಮತ್ತು ಅವರ ಮಗು ಇಬ್ಬರೂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ’ ಎಂದು ತೆರೆಹಿಂದಿನ ಕಥೆ ವಿವರಿಸಿದರು.
“ನಿರ್ದೇಶಕರು ಹೇಳಿದ ಕಥೆ ಕೇಳಿ ತುಂಬ ಇಷ್ಟವಾಯಿತು. ಹಾಗಾಗಿ ಏಳು ತಿಂಗಳ ಗರ್ಭಿಣಿ ಇದ್ದಾಗಲೇ ಈ ಪಾತ್ರವನ್ನು ಮಾಡಬೇಕೆಂದು ನಿರ್ಧರಿಸಿದ್ದೆ. ಅದರಂತೆ ಶೂಟಿಂಗ್‌ನಲ್ಲೂ ಪಾಲ್ಗೊಂಡೆ. ಕೆಲವು ದಿನಗಳ ಚಿತ್ರೀಕರಣ ನಂತರ ನನಗೆ ಅವಧಿಗೂ ಮುನ್ನವೇ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದೆ’ ಎನ್ನುವುದು ನಟಿ ಮಮತಾ ರಾಹುತ್ ಮಾತು.
ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಸಾಮಾಜಿಕ ಸಂದೇಶವಿರುವ ಈ ಚಿತ್ರವನ್ನು ಮಮತಾ ರಾಹುತ್ ಪತಿ ಸುರೇಶ್ ಕೊಟ್ಯಾನ್ ಚಿತ್ರಾಪು “ಶ್ರೀಗಜನಿ ಪ್ರೊಡಕ್ಷನ್ಸ್’ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಮಮತಾ ರಾಹುತ್ ಜೊತೆಗೆ ರೋಹಿತ್, ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ. ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮೀ, ದೀಪಿಕಾ ಗೌಡ, ಸನ್ನಿ, ತೇಜಸ್ವಿನಿ, ಕವಿತಾ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜ, ಅರ್ಚನಾ ಗಾಯ ಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರಾ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾ ದವರು “ತಾರಿಣಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.