BIG BOSS10: 11+6 ಸ್ಪರ್ಧಿಗಳು ಮನೆಗೆ ಎಂಟ್ರಿ; ಸ್ನೇಕ್ ಶ್ಯಾಮ್,ಮೈಕಲ್, ನೀತು ಆಕರ್ಷಣೆ
ಈ ಬಾರಿ ಹಲವು ಆಕರ್ಷಣೆಗಳು.. ಸುದ್ದಿ ಮಾಡಲಿರುವ ಅಕ್ಕಿ...ಡ್ರೋನ್ ಪ್ರತಾಪ್ ಕಥೆ ಏನು?
Team Udayavani, Oct 9, 2023, 6:15 AM IST
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ”ಬಿಗ್ ಬಾಸ್” ಸೀಸನ್ 10 ಕ್ಕೆ ಅಂತಿಮವಾಗಿ ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯನ್ನು ಪ್ರವೇಶಿಸಿದ್ದಾರೆ.
ಹನ್ನೊಂದು ಮಂದಿ ವೋಟಿಂಗ್ ನಲ್ಲಿ ಆಯ್ಕೆಯಾಗಿ ನೇರವಾಗಿ ಮನೆಯನ್ನು ಪ್ರವೇಶಿಸಿದ್ದಾರೆ. ಆ ಪೈಕಿ ಸ್ನೇಕ್ ಶ್ಯಾಮ್, ಪತ್ರಕರ್ತ ಗೌರೀಶ್ ಅಕ್ಕಿ, ‘ಪುಟ್ಟಗೌರಿ ಮದುವೆ’, ‘ನಾಗಿಣಿ- 2’ ಧಾರಾವಾಹಿಗಳ ನಟಿ ನಮ್ರತಾ ಗೌಡ, ‘ನಮ್ಮನೆ ಯುವರಾಣಿ’ ಧಾರವಾಹಿ ನಟ ಸ್ನೇಹಿತ್ ಗೌಡ, ಕನ್ನಡ ರ‍್ಯಾಪರ್ ಊರ್ಮಿಳಾ ಇಶಾನಿ, ಕಿರುತೆರೆಯ ‘ಶಿವ’ ಖ್ಯಾತಿಯ ನಟ ವಿನಯ್ ಗೌಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು(ತುಕಾಲಿ ಸಂತು), ಮಿಸ್ ಟ್ರ್ಯಾನ್ಸ್ ಕ್ವೀನ್ ಇಂಡಿಯಾ 2019, ಭಾರತದ ಮೊದಲ ಟ್ರ್ಯಾನ್ಸ್ ಜಂಡರ್ ಟ್ಯಾಟೂ ಆರ್ಟಿಸ್ಟ್, ಉದ್ಯಮಿ ನೀತು ವನಜಾಕ್ಷಿ, ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅನುಭವಿ ನಟಿ ಸಿರಿ, ‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ, ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ 81% ಮತಗಳನ್ನು ಪಡೆದು ನೇರ ಪ್ರವೇಶ ಪಡೆದರು. ನೈಜೀರಿಯನ್ ಕನ್ನಡಿಗ ಮೈಕಲ್ ಬಿಗ್ ಬಾಸ್ ಮನೆಯ ಕೇಂದ್ರ ಬಿಂದುವಾಗಿದ್ದಾರೆ.
ಡ್ರೋನ್ ಪ್ರತಾಪ್ ಹೋಲ್ಡ್ ನಲ್ಲಿ
ಲೈವ್ ಆಡಿಯೆನ್ಸ್ ಕಡೆಯಿಂದ 80 % ಕ್ಕಿಂತ ಕಡಿಮೆ ವೋಟ್ ಪಡೆದ ಡ್ರೋನ್ ಪ್ರತಾಪ್ ಸೇರಿ ಆರು ಮಂದಿಯನ್ನು ವೇಯ್ಟಿಂಗ್ ಲಿಸ್ಟ್‌ನಲ್ಲಿ ಇಟ್ಟು ಕೊನೆಯಲ್ಲಿ ಹೋಲ್ಡ್ ಮಾಡಿ ಒಂದು ವಾರದ ಅವಕಾಶ ನೀಡಿ ಮನೆಯೊಳಗೇ ಪ್ರವೇಶ ನೀಡಲಾಗಿದೆ. ಡ್ರೋನ್ ಪ್ರತಾಪ್ ಪ್ರೇಕ್ಷಕರ 41% ವೋಟ್ ಮಾತ್ರ ಪಡೆದರು.
‘ಮಂಗಳಗೌರಿ ಮದುವೆ’,’ಇಂತಿ ನಿಮ್ಮ ಆಶಾ’ ಸೇರಿ ಧಾರಾವಾಹಿಗಳಲ್ಲಿ ನಟಿಸಿದ್ದ ತನಿಷಾ ಕುಪ್ಪಂಡ 68% ವೋಟ್ ಪಡೆದು ಹೋಲ್ಡ್ ನಲ್ಲಿದ್ದಾರೆ.
ದಿ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್, 53% ವೋಟ್ಸ್ ಪಡೆದು ಹೋಲ್ಡ್ ನಲ್ಲಿದ್ದಾರೆ. 777 ಚಾರ್ಲಿ ಸಿನಿಮಾ ನಟಿ ಸಂಗೀತಾ ಶೃಂಗೇರಿ ಹೋಲ್ಡ್ ನಲ್ಲಿದ್ದಾರೆ.ನಟ ಕಾರ್ತಿಕ್ ಮಹೇಶ್, ರೈತ, ಕೃಷಿಕ ವರ್ತೂರು ಸಂತೋಷ್ ಲೈವ್ ಆಡಿಯೆನ್ಸ್ ಕಡೆಯಿಂದ 78% ವೋಟ್ಸ್ ಪಡೆದು ಹೋಲ್ಡ್ ನಲ್ಲಿದ್ದಾರೆ. ಆರು ಮಂದಿಗೆ ಸಾಮರ್ಥ್ಯ ತೋರಲು ಒಂದು ವಾರದ ಅವಕಾಶ ನೀಡಿ ನಿರೂಪಕ ಕಿಚ್ಚ ಸುದೀಪ್ ಮನೆಯೊಳಗೆ ಪ್ರವೇಶ ನೀಡಿದ್ದಾರೆ. ಮುಂದಿನ ಶನಿವಾರ ಆರು ಮಂದಿಯಲ್ಲಿ ಯಾರೆಲ್ಲ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇಬ್ಬರಿಗೆ ನಿರಾಸೆ
ಸಾಮಾಜಿಕ ತಾಣದ ಜನಪ್ರಿಯತೆ ಹೊಂದಿರುವ ಸುರಸುಂದರ ಅವಿನಾಶ್ 27% ವೋಟ್ ಪಡೆದು ಔಟಾಗಿದ್ದಾರೆ. ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ 38% ಲೈವ್ ವೋಟ್ ಪಡೆದು ಔಟಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.