State Govt ಉದ್ಯೋಗಾರ್ಥಿ- ಉದ್ಯೋಗದಾತರ ಮಾಹಿತಿ ಸೇತು
ಸರಕಾರದಿಂದ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್
Team Udayavani, Oct 9, 2023, 12:06 AM IST
ಉಡುಪಿ: ಪದವಿ ಅಥವಾ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾ ಭ್ಯಾಸ ಮುಗಿಯುತ್ತಿದ್ದಂತೆ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ರಾಜ್ಯ ಸರಕಾರ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ರೂಪಿಸಿದೆ.
ಉದ್ಯೋಗ, ಇಂಟರ್ನ್ಶಿಪ್, ಪ್ರಾಜೆಕ್ಟ್ ಹಾಗೂ ಕೋರ್ಸ್ ಹೀಗೆ 4 ಆಯಾಮಗಳನ್ನು ಇರಿಸಿಕೊಂಡು 2026ರ ವೇಳೆಗೆ 1 ಕೋಟಿ ಅವ ಕಾಶ ಸೃಷ್ಟಿಸುವ ಉದ್ದೇಶ ಇದೆ. ಜತೆಗೆ ವೃತ್ತಿ ಬೆಳವಣಿಗೆಗೆ ಉತ್ತೇಜನ, ಸೈಕೋಮೆಟ್ರಿಕ್ ಪರೀಕ್ಷೆ, ತಾಂತ್ರಿಕ ಕೌಶಲದ ಮೌಲ್ಯಮಾಪನ, ಸ್ಕಿಲ್ ಗ್ಯಾಪ್ ವಿಶ್ಲೇಷಣೆ ಮಾಡಲಿದೆ.
ರಾಜ್ಯದ ಯುವ ಜನತೆ ತಮ್ಮ ವಿದ್ಯಾ ರ್ಹತೆಗೆ ಸೂಕ್ತವಾದ ವೃತ್ತಿ, ಉದ್ಯೋಗ ಮಾರ್ಗದರ್ಶನ, ಕೌಶಲ, ಅಪ್ರಂಟಿಸ್‌ಶಿಪ್ ಅವಕಾಶ, ಉದ್ಯೋಗಾವಕಾಶದ ಮಾಹಿತಿ ನೋಂದಾಯಿಸಿ ಪಡೆಯಬಹುದು. ಎಂಎಸ್‌ಎಂಇ, ಸ್ಟಾರ್ಟ್‌ಅಪ್ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಇಂಡಸ್ಟ್ರಿ ಹೆಸರಿನಡಿ ನೋಂದಾಯಿಸಿಕೊಂಡು ತಮಗೆ ಬೇಕಾದ ರೀತಿಯ ಉದ್ಯೋಗಾ ಕಾಂಕ್ಷಿಗಳನ್ನು ಪಡೆಯಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೌಶಲ ಉನ್ನತೀಕರಿಸಲು, ವೃತ್ತಿಪೂರಕ ಪಠ್ಯಕ್ರಮ ಗಳು, ಪ್ರಾಯೋಗಿಕ ಪಠ್ಯ, ಸಂಯೋಜಿತ ಕಲಿಕಾ ನಿರ್ವಹಣ ವ್ಯವಸ್ಥೆ, ಉದ್ದಿಮೆ ಯೋಜನೆ ರೂಪಿಸಿ ಶಿಕ್ಷಣ ಸಂಸ್ಥೆಯಾಗಿ ನೋಂದಣಿ ಮಾಡಿಕೊಳ್ಳಬೇಕು.
ಅನುಭವಿ ವೃತ್ತಿಪರರು ಉದ್ಯೋಗಾ ಕಾಂಕ್ಷಿಗಳಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳು ತರಬೇತುದಾರರು/ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರ್ಗ ತೋರಿಸಲು ತರಬೇತುದಾರರು https://skillconnect.kaushalkar.com/ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಕೌಶಲಾಧಿಕಾರಿಗಳಿಗೆ ಜವಾಬ್ದಾರಿ
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಮಟ್ಟದ ಕೌಶಲಾಧಿಕಾರಿಗಳು ತಮ್ಮ ತಂಡದೊಂದಿಗೆ ಕಾಲೇಜುಗಳಿಗೆ ಭೇಟಿ ನೀಡಿ ಪೋರ್ಟಲ್‌ನ ಅನುಕೂಲ ಹಾಗೂ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಇದರಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿ ನೀಡಲಿದ್ದಾರೆ.
ನೇರ ಆಯ್ಕೆ
ಅಭ್ಯರ್ಥಿಗಳು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ತಮಗೆ ಬೇಕಾದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಇದೆಯೇ ಎಂದು ಪರಿಶೀಲಿಸಬಹುದು. ಸಂಸ್ಥೆಗಳು ಅಗತ್ಯವಿರುವ ಅಭ್ಯರ್ಥಿಗಳನ್ನು ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ಈ ವೆಬ್‌ಸೈಟ್‌ನಲ್ಲಿ ತಮ್ಮ ವಿದ್ಯಾರ್ಹತೆ, ಸ್ಕಿಲ್‌ಗಳ ಮಾಹಿತಿ ಒದಗಿಸುವುದರಿಂದ ಸಂಸ್ಥೆಗಳು ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ನೇಮಕಾತಿ ಮಾಡಿಕೊಳ್ಳಲಿವೆ.
ಒಂದೇ
ಸೂರಿನಡಿ ಅವಕಾಶ
ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ಸದ್ಯ 538ಕ್ಕೂ ಅಧಿಕ ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ 22,457 ಉದ್ಯೋಗಾವಕಾಶ, 1,125 ಇಂಟರ್ನಶಿಪ್ ಅವಕಾಶ, 270 ಅಪ್ರಂಟಿಸ್‌ಶಿಪ್ ಅವಕಾಶ ಹಾಗೂ 68 ವಿಶ್ವವಿದ್ಯಾನಿಲಯ/ ಕಾಲೇಜುಗಳ ಮಾಹಿತಿಯಿದೆ.
ಕರ್ನಾಟಕ ಸ್ಕಿಲ್
ಕನೆಕ್ಟ್ ಪೋರ್ಟಲ್‌ನಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಇರುವ ಅವಕಾಶಗಳನ್ನು ತಿಳಿಸಲು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದೇವೆ. ಉದ್ಯೋಗ ಹುಡು ಕುವವರು ಮತ್ತು ಉದ್ಯೋಗ ನೀಡುವವರ ಮಧ್ಯೆ ಸಂಪರ್ಕ ಕಲ್ಪಿಸುವ ಪೋರ್ಟಲ್ ಇದಾಗಿದೆ.
– ಅರುಣ್ ಎಚ್., ಸತ್ಯಲತಾ,
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳು, ಉಡುಪಿ ಮತ್ತು ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.