Bigg Boss-10: ದಾಖಲೆ ಬರೆದ ಕಿಚ್ಚ ಸುದೀಪ್
Team Udayavani, Oct 9, 2023, 12:25 PM IST
ಕಲರ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ -10 ಅದ್ಧೂರಿಯಾಗಿ ಆರಂಭವಾಗಿದೆ. ಕಲರ್‌ಫುಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮಾತನಾಡಿಸಿ ಮನೆಯೊಳಗೆ ಕಳುಹಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಯೂ ವಿವಿಧ ಕ್ಷೇತ್ರಗಳ ಮಂದಿಯನ್ನು ಈ ಶೋಗೆ ಆಯ್ಕೆ ಮಾಡಲಾಗಿದೆ. ಕಾಂಟ್ರಾವರ್ಸಿ ಮೂಲಕ ಸುದ್ದಿಯಾದವರು ಕೂಡಾ ಬಿಗ್‌ಬಾಸ್ ಮನೆ ಹೊಕ್ಕಿದ್ದು, ಅಸಲಿ ಆಟ ತೋರಿಸಲಿದ್ದಾರೆ.
ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಡ್ರೋನ್ ಮೂಲಕ ಸುದ್ದಿಯಾದ ಡ್ರೋನ್ ಪ್ರತಾಪ್, ರೈತ ವರ್ತೂರು ಸಂತೋಷ್, ಪತ್ರಕರ್ತ ಗೌರೀಶ್ ಅಕ್ಕಿ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ಸ್ನೇಹಿತ್ ಗೌಡ, ಇಶಾನಿ, ವಿನಯ್, ಮೈಕಲ್, ಭಾಗ್ಯಶ್ರಿ, ಸಿರಿ, ನೀತು ವನಜಾಕ್ಷಿ, ಸ್ನೇಕ್ ಶ್ಯಾಮ್, ಸಂತೋಷ್, ತನಿಷಾ, ಕಾರ್ತಿಕ್ ಮಹೇಶ್ ಸೇರಿದಂತೆ ಅನೇಕರು ಈ ಬಾರಿ ಬಿಗ್‌ಬಾಸ್ ಮನೆ ಹೊಕ್ಕಿದ್ದಾರೆ. ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಕಾಣಲಿದೆ.
ಸುದೀಪ್ ದಾಖಲೆ
ಭಾರತದಾದ್ಯಂತ ಬಿಗ್‌ಬಾಸ್ ಶೋಗಳು ಆಯೋಜನೆಯಾಗಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಕಡೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಎಲ್ಲ ಶೋಗಳಲ್ಲೂ ನಿರೂಪಕರು ಬದಲಾಗಿದ್ದಾರೆ. ಆದರೆ, ಮೊದಲ ಸೀಸನ್ ನಿಂದ ಈವರೆಗೂ ಕನ್ನಡದಲ್ಲಿ ನಿರೂಪಕರು ಬದಲಾಗಿಲ್ಲ. ಸುದೀಪ್ ಅವರೇ ಹತ್ತೂ ಸೀಸನ್‌ಗಳನ್ನು ನಡೆಸಿಕೊಂಡು ಬಂದು ದಾಖಲೆ ಬರೆದಿದ್ದಾರೆ. ಇಂತಹ ದಾಖಲೆಯನ್ನು ಬೇರೆ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದು ವಿಶೇಷ.
ಅತೀ ದೊಡ್ಡ ಬಿಗ್‌ಬಾಸ್ ಮನೆ
ಈ ಬಾರಿಯ ಬಿಗ್‌ಬಾಸ್ ಹಲವು ಕಾರಣಗಳಿಂದಾಗಿ ವಿಶೇಷ ಅನಿಸಿದೆ. ಕಾರ್ಯಕ್ರಮವು ಹೇಗೆ ವಿಭಿನ್ನವಾಗಿ ರೂಪಿತವಾಗುತ್ತಿದೆಯೋ, ಹಾಗೆಯೇ ಬಿಗ್‌ಬಾಸ್ ಮನೆ ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಲವು ವರ್ಷಗಳ ಕಾಲ ಬಿಗ್‌ಬಾಸ್ ಮನೆಯನ್ನು ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಸಣ್ಣ ಮಟ್ಟದಲ್ಲಿ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವರ್ಷ ಎಲ್ಲವೂ ಬದಲಾಗಿದೆ. ಈ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯ ಬದಲಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಮನೆಯನ್ನು ಹೊಸದಾಗಿ ಸುಮಾರು 12 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಗ್‌ಬಾಸ್ ಮನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
ಪ್ರತಿ ಸಲವೂ ಬಿಗ್ ಬಾಸ್ ಗೆದ್ದವರಿಗೆ ಟ್ರೋಫಿ ಮತ್ತು ಭಾರೀ ಮೊತ್ತದ ಹಣವನ್ನೇ ಬಹುಮಾನವಾಗಿ ನೀಡಲಾಗುತ್ತದೆ. ಜೊತೆಗೆ ಇತರ ಬಹುಮಾನಗಳು ಕೂಡ ಇರಲಿವೆ. ಈ ಬಾರಿ ಬಿಗ್ ಬಾಸ್ ಗೆದ್ದವರಿಗೆ ಐವತ್ತು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಜೊತೆಗೆ ಇತರ ಬಹುಮಾನಗಳು ಕೂಡ ಮುಂದುವರೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.