Drought study: ಜಿಲ್ಲೆಯಲ್ಲಿ ಕೇಂದ್ರದಿಂದ ಬರ ಅಧ್ಯಯನ


Team Udayavani, Oct 9, 2023, 2:20 PM IST

tdy-9

ದೇವನಹಳ್ಳಿ: ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿತ್ತು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ತಂಡ ಹೊಲಗಳಿಗೆ ಮತ್ತು ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಳೆ ಕೊರತೆಯಿಂದ ರಾಜ್ಯ ಸರ್ಕಾರ ಜಿಲ್ಲೆ ನಾಲ್ಕು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಬೆಂ. ಗ್ರಾಮಾಂತರ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡವು ಜಿಲ್ಲೆಯಲ್ಲಿ ಕೆಲವು ಆಯ್ದ ಗ್ರಾಮಗಳಿಗೆ ಮಾತ್ರ ಭೇಟಿ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ದಿಷ್ಟ ಮತ್ತು ನೈಜ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿ ಹೆಚ್ಚಿನ ಪರಿಹಾರವನ್ನು ನೀಡುವಂತಾಗಬೇಕು. ಅನ್ನದಾತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ರೈತರು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ರಾಗಿ ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ರಾಗಿ ಬೆಳೆಯೇ ರೈತರ ಜೀವನಾಡಿಯಾಗಿದೆ. ರಾಗಿ ಪ್ರಮುಖ ಬೆಳೆಯಾಗಿದೆ. ಮಳೆ ಇಲ್ಲದೆ ರಾಗಿ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳದ್ದು, ಈ ಭಾಗದ ರೈತರ ನಷ್ಟವನ್ನು ತುಂಬಿ ಕೊಡುವ ಕೆಲಸ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ 49559. 57 ಹೆಕ್ಟರ್‌ ಬೆಳೆ ಹಾನಿ. ತಾಲೂಕಿನ ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಶ್ವನಾಥಪುರ ರಾಗಿ ಬೆಳೆ ಹಾನಿ, ಬ್ಯಾಡರಹಳ್ಳಿ ಗ್ರಾಮದಲ್ಲಿ ಹಾಗೂ ತಾಲೂಕಿನ ಅವತಿ ಗ್ರಾಮದಲ್ಲಿ ರಾಗಿ ಬೆಳೆಗಳನ್ನು ತಂಡ ವೀಕ್ಷಿಸಿತು. ದೊಡ್ಡಬಳ್ಳಾಪುರ ತಾಲೂಕಿನ ಒಬ್ಬದೇನಹಳ್ಳಿ, ಕೋಳೂರು, ಹೊನ್ನ ಘಾಟ ಗ್ರಾಮಗಳಲ್ಲಿ ರಾಗಿ ನವಣೆ ಮುಸುಕಿನ ಜೋಳ ಬೆಳೆ ಹಾನಿ ಪರೀಕ್ಷಿಸಿತು. ನೆಲಮಂಗಲ ತಾಲೂಕಿನ ಸೀರಗಾನಹಳ್ಳಿ ಹಾಗೂ ಕುಲುವೇನಹಳ್ಳಿ ಗ್ರಾಮಗಳಿಗೆ ಕೇಂದ್ರ ಬರ ತಂಡ ಭೇಟಿ ನೀಡಿತು. ಹೊಸಕೋಟೆ ತಾಲೂಕಿನ ಯನಗುಂಟೆ ಗ್ರಾಮದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿತು. ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್‌ ಕುಮಾರ್‌, ಎಂಎನ್‌ಸಿಎಫ್ಸಿಯ ಉಪ ನಿರ್ದೇಶಕ ಕರಣ್‌ ಚೌದರಿ, ಆಹಾರ ಇಲಾಖೆ ಕಾರ್ಯದರ್ಶಿ ಸಂಗೀತ್‌ ಕುಮಾರ್‌, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಹಿರಿಯ ಸಲಹೆಗಾರ ಡಾ. ಜಿಎಸ್‌ ಶ್ರೀನಿವಾಸ್‌ ರೆಡ್ಡಿ ತಂಡದಲ್ಲಿದ್ದರು.

ಜಿಲ್ಲಾಧಿಕಾರಿ ಡಾ.ಎನ್‌ ಶಿವಶಂಕರ್‌ ಮಾತನಾಡಿ ಜಿಲ್ಲೆಯಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ ಕುಂಠಿತವಾಗಿದೆ. ಎಂದು ಹೇಳಿದರು.

ವಿಶ್ವನಾಥಪುರದಲ್ಲಿ ರೈತರು ಅಂತರ್ಜಲ ಕುಸಿತ, ಕೊಳವೆ ಬಾವಿ ಪರಿಸ್ಥಿತಿ ವಿವರಿಸಿದರು. ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಬೆಳೆಹಾನಿ, ಬೆಳೆವಿಮೆ ಪಾವತಿ, ಬೀಜ-ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದಲೇ ಮಾಹಿತಿಯನ್ನು ಪಡೆದುಕೊಂಡರು. ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ, ಅಪರ ಜಿಲ್ಲಾಧಿಕಾರಿ ಅಮರೇಶ್‌.ಎಚ್‌, ಡಿವೈಎಸ್ಪಿ ರವಿ, ಉಪವಿಭಾಗಾಧಿಕಾರಿ ಶ್ರೀನಿವಾಸ, ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ, ಉಪ ನಿರ್ದೇಶಕಿ ವಿನುತಾ, ತೊಟಗಾರಿಕೆ ಉಪ ನಿರ್ದೇಶಕ ಗುಣವಂತ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್‌ , ತಹಶೀಲ್ದಾರ್‌ ಶಿವರಾಜ್‌, ತಾಪಂ ಇಒ ಶ್ರೀನಾಥ್‌ಗೌಡ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಸುಶೀಲಮ್ಮ, ತಾಲೂಕು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಇತರರಿದ್ದರು.

ಜಿಲ್ಲೆಯಲ್ಲಿ 49559 ಹೆಕ್ಟೇರ್‌ ಬೆಳೆಹಾನಿ: ಜಿಲ್ಲೆಯಲ್ಲಿ ಮಳೆಕೊರತೆಯಿಂದ 49559.57 ಹೆಕ್ಟೇರ್‌ ಬೆಳೆಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಅಪಾರ ಬೆಳೆಹಾನಿಯಾಗಿದೆ. ಆದರೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 85 ಕೋಟಿ ಆಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್‌ ತಿಳಿಸಿದರು. ರಾಗಿ 46003.44 ಹೆಕ್ಟೇರ್‌, ಮುಸುಕಿನ ಜೋಳ 3477.68 ಹೆಕ್ಟೇರ್‌, ತೊಗರಿ 68.95 ಹೆಕ್ಟೇರ್‌, ನೆಲಗಡಲೆ 9.50 ಹೆಕ್ಟೇರ್‌ ಸೇರಿದಂತೆ ಒಟ್ಟು 49559.57 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬಗೆಯ ಬೆಳೆಗಳು ಹಾನಿಯಾಗಿರುತ್ತವೆ ಎಂದು ತಿಳಿಸಿದರು.

ಮಳೆ ಇಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕೊಳವೆ ಬಾವಿ ಬತ್ತಿ ಹೋಗಿದೆ. ರಾಗಿ ಬೆಳೆಯುತ್ತಿದ್ದೇವೆ. ರಾಗಿಗೆ ಬೀಜ ಬಿತ್ತನೆ ರಸಗೊಬ್ಬರ ಸೇರಿದಂತೆ ಒಂದು ಎಕರೆಗೆ 30,000 ರೂ. – 40,000 ರೂ. ಖರ್ಚು ಮಾಡಲಾಗಿದೆ. ಮಳೆ ಕೈಕೊಟ್ಟಿರುವುದರಿಂದ ಸಾಕಷ್ಟು ಸಂಕಷ್ಟ ಎದುರಾಗಿದೆ. ಸರ್ಕಾರ ಸ್ಪಂದಿಸಬೇಕು. -ಪ್ರಕಾಶ್‌, ಅವತಿ ಗ್ರಾಮದ ರೈತ

ಟಾಪ್ ನ್ಯೂಸ್

Shabarimale

Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್‌ಲೈನ್‌ ನೋಂದಣಿ ಕಡ್ಡಾಯ

1-canda

Canada: ವೇಟರ್‌ ಕೆಲಸಕ್ಕೆ 3,000 ಭಾರತೀಯ ವಿದ್ಯಾರ್ಥಿಗಳ ಕ್ಯೂ!

Maldives Muizzu

Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

imran-khan

Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್‌ ಪರ ಭಾರೀ ಪ್ರತಿಭಟನೆ,ಹಿಂಸೆ

police crime

Bhopal;1,800 ಕೋ.ರೂ. ಡ್ರಗ್ಸ್‌ ವಶ!; ದಿಲ್ಲಿಯಲ್ಲಿ ಕೊಕೇನ್‌ ಪತ್ತೆ ಬೆನ್ನಲ್ಲೇ ಘಟನೆ

HDK (3)

NDA ಅಭ್ಯರ್ಥಿ ಗೆಲ್ಲಿಸುವ ಮಾತು ಕೊಡಿ: ಎಚ್‌ಡಿಕೆ ಪರೋಕ್ಷ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shabarimale

Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್‌ಲೈನ್‌ ನೋಂದಣಿ ಕಡ್ಡಾಯ

1-canda

Canada: ವೇಟರ್‌ ಕೆಲಸಕ್ಕೆ 3,000 ಭಾರತೀಯ ವಿದ್ಯಾರ್ಥಿಗಳ ಕ್ಯೂ!

Maldives Muizzu

Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

imran-khan

Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್‌ ಪರ ಭಾರೀ ಪ್ರತಿಭಟನೆ,ಹಿಂಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.