Caste Census; ವಾಸ್ತವಕ್ಕೆ ದೂರವಾದ ಸಂಗತಿಗಳನ್ನು ಹರಡಲಾಗುತ್ತದೆ: ಸಚಿವ ಮಹದೇವಪ್ಪ


Team Udayavani, Oct 9, 2023, 2:17 PM IST

hc-mahadevappa

ಮೈಸೂರು: ಜಾತಿ ಗಣತಿಗೆ ಸಂಬಂಧಿಸಿದಂತೆ ಇದೀಗ ದೇಶದಲ್ಲಿ ಚರ್ಚೆಗಳು ಮೊದಲಾಗಿದ್ದು, ಜಾತಿ ಗಣತಿಯಿಂದಾಗಿ ಜಾತಿ ಜಾತಿಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಅತ್ಯಂತ ತಪ್ಪಾದ ಮತ್ತು ವಾಸ್ತವಕ್ಕೆ ದೂರವಾದ ಸಂಗತಿಯನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.

ಭಾರತವು ಸಂವಿಧಾನಾತ್ಮಕ ದೇಶವಾಗಿದ್ದರೂ ಸಹ ಇಲ್ಲಿ ಜಾತಿಯ ಮೇಲರಿಮೆ ಪ್ರಜ್ಞೆಯೇ ಮೇಲುಗೈ ಸಾಧಿಸಿರುವುದು ಅತಿದೊಡ್ಡ ವಾಸ್ತವವಾಗಿದ್ದು, ತುಳಿತಕ್ಕೆ ಒಳಪಟ್ಟ ವರ್ಗಗಳು ಅದೇ ರೀತಿ ಇರಬೇಕು ಎಂಬ ಮನಸ್ಥಿತಿಯು ಇವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಅಸಮಾನತೆಗಳ ಸಂದರ್ಭದಲ್ಲಿ ಸಮಾನ ಅವಕಾಶಗಳ ಸೃಷ್ಟಿ ಮಾಡುವುದು ಸಂವಿಧಾನದ ಆಶಯವಾಗಿದೆ ಎಂದಿದ್ದಾರೆ.

ಅದರಲ್ಲೂ ಸಾಮಾಜಿಕವಾಗಿ ಹಲವಾರು ಜಾತಿಯ ಅಸಮಾನತೆಗಳನ್ನು ಈಗಲೂ ಎದುರಿಸುತ್ತಿರುವ ಭಾರತದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಯಾವ ಜಾತಿಯ ಜನರ ಪರಿಸ್ಥಿತಿ ಏನಾಗಿದೆ, ಅವರ ಬದುಕಿನ ಸ್ಥಿತಿ ಗತಿ ಏನು? ಸಮಾನ ಮತ್ತು ಘನತೆಯ ಬದುಕಿಗಾಗಿ ಸರ್ಕಾರ ಅವರಿಗೆ ಯಾವ ರೀತಿಯಲ್ಲಿ ನೆರವಾಗಬಹುದು? ಜನರ ಹಕ್ಕುಗಳು ಮತ್ತು ಅವಕಾಶಗಳು ಅವರಿಗೆ ಸರಿಯಾದ ರೀತಿಯಲ್ಲಿ ಹಂಚಿಕೆ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಮಾಡುತ್ತಿರುವುದೇ ಈ ಜಾತಿ ಗಣತಿ. ಈ ಜಾತಿ ಗಣತಿಯಿಂದಾಗಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ ತುಳಿತಕ್ಕೆ ಒಳಪಟ್ಟ ಸಮುದಾಯಗಳ ಸ್ಥೂಲವಾದ ಚಿತ್ರಣವು ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಜಾತಿಯೇ ರಾಜಕೀಯಕ್ಕೆ ಪ್ರಬಲ ಅಸ್ತ್ರ ಆಗಿರುವ ಈ ವೇಳೆ, ತಳ ವರ್ಗಗಳ ಏಳಿಗೆಯ ಕುರಿತು ಆರೋಗ್ಯಕರವಾಗಿ ಚಿಂತಿಸದ ಕೆಲವು ಕುತ್ಸಿತ ಮನಸುಗಳು ಜಾತಿ ಗಣತಿಯ ಕುರಿತು ತಪ್ಪಾಗಿ ಬಿಂಬಿಸಲು ಹೊರಟಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಉತ್ತಮ ಉದ್ದೇಶ ಹೊಂದಿರುವ ಜಾತಿ ಗಣತಿಯನ್ನು ಮಾಡುವುದರಿಂದ ಜಾತಿಗಳ ನಡುವೆ ಕಂದರ ಹೆಚ್ಚಾಗುತ್ತದೆ ಎಂದು ಹೇಳುತ್ತಿರುವ ಜನರು ದಲಿತರ ಮೇಲೆ ದೌರ್ಜನ್ಯಗಳು ಆಗುವಾಗ, ಸಾಮಾಜಿಕ ಶೋಷಣೆಯ ಕಾರಣಕ್ಕೆ ಅವರ ಘನತೆಯ ಬದುಕುವ ವಾತಾವರಣ ಹಾಳಾದಾಗ ಎಲ್ಲಿರುತ್ತಾರೆ? ಹೀಗಾಗಿ ರಾಜಕೀಯದ ಕಾರಣಕ್ಕಾಗಿ ಯಾರು ಏನೇ ಹೇಳಿದರೂ ಕೂಡಾ ಜಾತಿ ಗಣತಿ ಎಂಬುದು ನಮ್ಮ ಸಮುದಾಯಗಳ ಸಾಮಾಜಿಕ ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಯನ್ನು ತಿಳಿದು ಅವರಿಗೆ ನೆರವಾಗಲು ಇರುವ ಸಮಾನ ಅವಕಾಶಗಳ ಕೀಲಿಕೈಯೇ ಹೊರತು, ಸಾಮಾಜಿಕ ವಿಭಜನೆಯ ಸಂಗತಿ ಅಲ್ಲ. ಇದನ್ನು ನಮ್ಮ ಜನ ಸಮುದಾಯಗಳು ಅರ್ಥ ಮಾಡಿಕೊಂಡು ಹೆಚ್ಚು ಗಟ್ಟಿಯಾದ ದನಿಯಲ್ಲಿ ಇದರ ಬಗ್ಗೆ ಮಾತನಾಡಬೇಕು ಎಂದು ಡಾ  ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.