World Cup Cricket; ಗೆಲುವಿನ ಹುಡುಕಾಟದಲ್ಲಿ ಇಂಗ್ಲೆಂಡ್‌

ಈ ವಿಶ್ವಕಪ್‌ನಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ

Team Udayavani, Oct 10, 2023, 6:50 AM IST

1-sdas-d

ಧರ್ಮಶಾಲಾ: ನ್ಯೂಜಿ ಲ್ಯಾಂಡ್‌ ಕೈಯಲ್ಲಿ ಬಲವಾದ ಏಟು ತಿಂದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 13ನೇ ವಿಶ್ವಕಪ್‌ನಲ್ಲಿ ಮೊದಲ ಗೆಲು ವಿನ ಹುಡುಕಾಟದಲ್ಲಿದೆ. ಮಂಗಳವಾರ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಂಗ್ಲರ ಪಡೆ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಈ ಬಾರಿ ಶಕಿಬ್‌ ಅಲ್‌ ಹಸನ್‌ ನೇತೃತ್ವದಲ್ಲಿ ಕಣಕ್ಕಿಳಿದಿರುವ ಬಾಂಗ್ಲಾ ದೇಶ ಈಗಾಗಲೇ ತನ್ನ ಆರಂಭಿಕ ಪಂದ್ಯವನ್ನು ಗೆದ್ದ ಸಂಭ್ರಮದಲ್ಲಿದೆ. ಅದು ಅಫ್ಘಾನಿಸ್ಥಾನ ವಿರುದ್ಧ 6 ವಿಕೆಟ್‌ ಜಯ ಸಾಧಿಸಿತ್ತು. ಹೀಗಾಗಿ ಬಾಂಗ್ಲಾದೇಶವೇ ಮಂಗಳವಾರದ ಮುಖಾಮುಖಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸದಲ್ಲಿರುವ ತಂಡ ಎನ್ನಲಡ್ಡಿಯಿಲ್ಲ.

ನ್ಯೂಜಿಲ್ಯಾಂಡ್‌ ವಿರುದ್ಧ ಅನುಭವಿ ಸಿದ ಸೋಲು ಇಂಗ್ಲೆಂಡ್‌ಗೆ ಮೊದಲ ಎಚ್ಚರಿಕೆಯ ಗಂಟೆಯಾಗಿದೆ. ಉದ್ಘಾಟನ ಪಂದ್ಯದಲ್ಲಿ 9ಕ್ಕೆ 282 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ಬಟ್ಲರ್‌ ಬಳಗ ವಿಫ‌ಲವಾಗಿತ್ತು. ಆಂಗ್ಲರ ಬೌಲಿಂಗ್‌ ದಾಳಿಯನ್ನು ಡೇವನ್‌ ಕಾನ್ವೇ-ರಚಿನ್‌ ರವೀಂದ್ರ ಇಬ್ಬರೇ ಸೇರಿಕೊಂಡು ಧ್ವಂಸಗೊಳಿಸಿದ್ದರು. ಇಂಥದೊಂದು ಆಘಾತದಿಂದ ಹೊರಬರುವುದು ಯಾವ ತಂಡಕ್ಕೂ ಸುಲಭವಲ್ಲ. ಅದರಲ್ಲೂ ಹಾಲಿ ಚಾಂಪಿಯನ್‌ ತಂಡಕ್ಕಂತೂ ಇದು ಬರಸಿಡಿಲು ಬಡಿದ ಅನುಭವವೇ ಸೈ. ಹೀಗಾಗಿ ಬಾಂಗ್ಲಾದಂಥ “ಸಾಮಾನ್ಯ’ ತಂಡ ಕೂಡ ಇಂಗ್ಲೆಂಡ್‌ ಪಾಲಿಗೆ ದೊಡ್ಡ ಸವಾಲಾಗಿ ಕಾಡುವ ಸಂಭವವಿದೆ.

ಇಂಗ್ಲೆಂಡ್‌ ಬೌಲಿಂಗ್‌ ಹೇಗೆ?
ಇಂಗ್ಲೆಂಡ್‌ ಸದ್ಯಕ್ಕೆ ತನ್ನ ಬೌಲಿಂಗ್‌ ವಿಭಾಗವನ್ನು ಸುಧಾರಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕು. ಕಿವೀಸ್‌ ತಂಡದ ಏಕೈಕ ವಿಕೆಟ್‌ ಉರುಳಿಸಿದ ಸ್ಯಾಮ್‌ ಕರನ್‌, ಮಾರ್ಕ್‌ ವುಡ್‌, ಕ್ರಿಸ್‌ ವೋಕ್ಸ್‌, ಮೊಯಿನ್‌ ಅಲಿ, ಆದಿಲ್‌ ರಶೀದ್‌, ಲಿಯಮ್‌ ಲಿವಿಂಗ್‌ಸ್ಟೋನ್‌ ತಮ್ಮ ಎಸೆತಗಳನ್ನು ಹರಿತಗೊಳಿಸದೆ ಹೋದರೆ ಬಾಂಗ್ಲಾ ಕೂಡ ಬಡಿದು ಹಾಕೀತು! ಬೌಲಿಂಗ್‌ ಸದಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದಿದ್ದರೆ ಡೇವಿಡ್‌ ವಿಲ್ಲಿ, ರೀಸ್‌ ಟಾಪ್ಲಿ ಅವಕಾಶ ಪಡೆಯಬಹುದು.

ಇಂಗ್ಲೆಂಡ್‌ ಈ ವಿಶ್ವಕಪ್‌ನಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಆದರೂ ಅಹ್ಮದಾಬಾದ್‌ನ ಸಂಪೂರ್ಣ ಲಾಭವೆತ್ತುವಲ್ಲಿ ವಿಫ‌ಲವಾಯಿತು. ಇಲ್ಲಿ ಮುನ್ನೂರರ ಗಡಿ ದಾಟಿ ಮುನ್ನಡೆಯುವುದು ಅಂಥ ಸಮಸ್ಯೆ ಆಗಿರಲಿಲ್ಲ. ಆದರೆ ಧರ್ಮಶಾಲಾದಲ್ಲಿ ರನ್‌ ಗಳಿಕೆ ಸುಲಭವಲ್ಲ. ಬಾಂಗ್ಲಾ ಇದೇ ಅಂಗಳದಲ್ಲಿ ಅಫ್ಘಾನ್‌ ತಂಡವನ್ನು 156ಕ್ಕೆ ಕೆಡವಿತ್ತು. ಆದರೆ ಇಂಗ್ಲೆಂಡ್‌ ವಿರುದ್ಧ ಇಂಥದೇ ಮ್ಯಾಜಿಕ್‌ ಸುಲಭವಲ್ಲ.

ಬಾಂಗ್ಲಾದ ಬ್ಯಾಟಿಂಗ್‌ ಅನುಭವಿ ಗಳಿಂದ ಕೂಡಿದ್ದು, ಬಲಿಷ್ಠವಾಗಿಯೇ ಇದೆ. ಇಲ್ಲಿ ಇಂಗ್ಲೆಂಡ್‌ ಮೇಲೆ ಇನ್ನಷ್ಟು ಮಾನಸಿಕ ಒತ್ತಡ ಹೇರುವಲ್ಲಿ ಯಶಸ್ವಿಯಾದರೆ ಬಾಂಗ್ಲಾದಿಂದ ಅಚ್ಚರಿ ನಿರೀಕ್ಷಿಸಬಹುದು.

 

ಟಾಪ್ ನ್ಯೂಸ್

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

Shindhe

Eknath Shinde; ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಹುತೇಕರಿಗೆ ಮಣೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC: 3 Test match in series mandatory?

WTC: ಸರಣಿಯಲ್ಲಿ 3 ಟೆಸ್ಟ್‌ ಪಂದ್ಯ ಕಡ್ಡಾಯ?

India Series: New Zealand Women’s Cricket Team announced

India Series: ನ್ಯೂಜಿಲ್ಯಾಂಡ್‌ ವನಿತಾ ಕ್ರಿಕೆಟ್‌ ತಂಡ ಪ್ರಕಟ

Glasgow Commonwealth Games: No place to Hockey, Cricket, Wrestling, Badminton

Glasgow Commonwealth Games: ಹಾಕಿ, ಕ್ರಿಕೆಟ್‌, ಕುಸ್ತಿ, ಬ್ಯಾಡ್ಮಿಂಟನ್‌ಗೆ ಖೋ

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

Ready to come out of retirement and play against India: Warner

David Warner: ನಿವೃತ್ತಿ ವಾಪಸ್‌ ಪಡೆದು ಭಾರತ ವಿರುದ್ಧ ಆಡಲು ಸಿದ್ಧ: ವಾರ್ನರ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

1

Sandalwood: ಸುಂದರ ರಾಕ್ಷಸಿ ಇವಳು!

Shindhe

Eknath Shinde; ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಹುತೇಕರಿಗೆ ಮಣೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.