Train ಮಡಗಾಂವ್‌-ಮಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ

ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Team Udayavani, Oct 10, 2023, 11:19 PM IST

TRAINTrain ಮಡಗಾಂವ್‌-ಮಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ

ಮಂಗಳೂರು: ಮಡಗಾಂವ್‌ ಹಾಗೂ ಕುಮಟಾ ನಡುವೆ ರೈಲ್ವೇ ಹಳಿಯ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಅ. 12ರಂದು ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಅ. 12ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 06602 ಮಂಗಳೂರು ಸೆಂಟ್ರಲ್‌-ಮಡಗಾಂವ್‌ ವಿಶೇಷ ರೈಲು ಕುಮಟಾ ನಿಲ್ದಾಣದಲ್ಲಿ ಕೊನೆಯಾಗಲಿದೆ. ಕುಮಟಾ-ಮಡಗಾಂವ್‌ ನಡುವೆ ಸಂಚಾರ ಭಾಗಶಃ ರದ್ದುಗೊಳ್ಳಲಿದೆ.

ಅ. 12ರಂದು ಮಡಗಾಂವ್‌ನಿಂದ ಮಂಗಳೂರಿಗೆ ಹೊರಡಬೇಕಿದ್ದ ರೈಲು ಸಂಖ್ಯೆ 06601 ಮಡಗಾಂವ್‌-ಮಂಗಳೂರು ಸೆಂಟ್ರಲ್‌ ವಿಶೇಷ ರೈಲು ಸೇವೆಯು ಮಡಗಾಂವ್‌ ಬದಲು ಕುಮಟಾದಿಂದ ಪ್ರಾರಂಭಗೊಳ್ಳಲಿದೆ. ಮಡಗಾಂವ್‌-ಕುಮಟಾ ನಡುವೆ ಬಹುತೇಕ ಸಂಚಾರ ರದ್ದುಗೊಳ್ಳಲಿದೆ. ಸಂಜೆ 4.01 ಗಂಟೆಗೆ ಕುಮಟಾದಿಂದ ಮಂಗಳೂರಿನತ್ತ ಪ್ರಯಾಣಿಸಲಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ
ಮಂಗಳೂರು: ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗದ ಕೆಲವು ಸೆಕ್ಷನ್‌ಗಳಲ್ಲಿ ಎಂಜಿನಿಯರಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಅ. 11ರಿಂದ 16ರ ವರೆಗೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಅ.11ರಂದು 22637 ಡಾ| ಎಂಜಿಆರ್‌ ಚೆನ್ನೈ ಸೆಂಟ್ರಲ್‌ – ಮಂಗಳೂರು ಸೆಂಟ್ರಲ್‌ ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ನ ಸೇವೆಯನ್ನು ಒಂದೂವರೆ ಗಂಟೆ, 22638 ಮಂಗಳೂರು ಸೆಂಟ್ರಲ್‌ – ಡಾ| ಎಂಜಿಆರ್‌ ಚೆನ್ನೈ ಸೆಂಟ್ರಲ್‌ ವೆಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು 20 ನಿಮಿಷ, 12283 ಎರ್ನಾಕುಲಂ-ನಿಜಾಮುದ್ದೀನ್‌ ಸಾಪ್ತಾಹಿಕ ದುರಂತೋ ಎಕ್ಸ್‌ಪ್ರೆಸ್‌ನ್ನು ಅರ್ಧಗಂಟೆ, 16159 ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್ಸನ್ನು 1 ಗಂಟೆ 20 ನಿಮಿಷ, 16160 ಮಂಗಳೂರು ಸೆಂಟ್ರಲ್‌ – ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ನ ಸೇವೆಯನ್ನು 15 ನಿಮಿಷ ಕಾಲ ನಿಯಂತ್ರಿಸಲಾಗುತ್ತದೆ.

ಅ. 12, 13ರಂದು 22638 ಮಂಗಳೂರು ಸೆಂಟ್ರಲ್‌ ಎಂಜಿಆರ್‌ ಚೆನ್ನೈ ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ 30 ನಿಮಿಷ ನಿಯಂತ್ರಿಸಲ್ಪಡುವುದು. 13ರಂದು 22637 ವೆಸ್ಟ್‌ಕೋಸ್ಟ್‌ 40 ನಿಮಿಷ ಕಾಲ ನಿಯಂತ್ರಿಸಲ್ಪಡುವುದು.

ಅ. 14ರಂದು 20910 ಪೋರಬಂದರ್‌ ಕೊಚ್ಚುವೇಲಿ ವೀಕ್ಲಿ ಸೂಪರ್‌ಫಾಸ್ಟ್‌ 30 ನಿಮಿಷ, 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಜಂಕ್ಷನ್‌ ಪರಶುರಾಮ ಎಕ್ಸ್‌ಪ್ರೆಸ್‌ 20 ನಿಮಿಷ, 12678 ಎರ್ನಾಕುಳಂ ಕೆಎಸ್‌ಆರ್‌ ಬೆಂಗಳೂರು ರೈಲನ್ನು 30 ನಿಮಿಷ ಕಾಲ ನಿಯಂತ್ರಿಸಲಾಗುತ್ತದೆ.

ಅ.15ರಂದು 22638 ವೆಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು 1.40 ಗಂಟೆ, 12618 ನಿಜಾಮುದ್ದೀನ್‌-ಎರ್ನಾಕುಳಂ ಮಂಗಳಾ ಲಕ್ಷದ್ವೀಪ್‌ 1.10 ಗಂಟೆ, 12224 ಎರ್ನಾಕುಳಂ-ಲೋಕಮಾನ್ಯ ತಿಲಕ್‌ ವೀಕ್ಲಿ ಎಕ್ಸ್‌ಪ್ರೆಸ್‌ 2.35 ಗಂಟೆ, 22637 ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು 1.40 ಗಂಟೆ ನಿಯಂತ್ರಿಸಲಾಗುವುದು.

ಅ. 16ರಂದು 22637 ವೆಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು 1.40 ಗಂಟೆ, ನಂ. 22638 ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ 1.40 ಗಂಟೆ, 12618 ನಿಜಾಮುದ್ದೀನ್‌ ಎರ್ನಾಕುಳಂ ಮಂಗಳಾ ಎಕ್ಸ್‌ಪ್ರೆಸ್‌ 1.10 ಗಂಟೆ, 16603 ಮಂಗಳೂರು ಸೆಂಟ್ರಲ್‌ ತಿರುವನಂತಪುರ ಸೆಂಟ್ರಲ್‌ ಮಾವೇಲಿ ಎಕ್ಸ್‌ಪ್ರೆಸ್‌ 1.10 ಗಂಟೆ, 12484 ಅಮೃತಸರ – ಕೊಚ್ಚುವೇಲಿ ವೀಕ್ಲಿ ಎಕ್ಸ್‌ಪ್ರೆಸ್‌ 30 ನಿಮಿಷ, 11098 ಎರ್ನಾಕುಳಂ – ಪುಣೆ ಜಂಕ್ಷನ್‌ ಪೂರ್ಣ ಎಕ್ಸ್‌ಪ್ರೆಸ್ಸನ್ನು 45 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.