NIA ಅಧಿಕಾರಿಗಳ ದಾಳಿ: ಮನೆ ಬಾಗಿಲು ತೆರೆಯದೆ 6 ಗಂಟೆಗಳ ಕಾಲ ಕಾಯುವಂತೆ ಮಾಡಿದ!
PFI ನಂಟು ಹೊಂದಿದ್ದ ಮುಂಬೈನ ವ್ಯಕ್ತಿಯ ನಿವಾಸದ ಮೇಲೆ ದಾಳಿ
Team Udayavani, Oct 11, 2023, 6:15 PM IST
ಮುಂಬಯಿ: ಪಿಎಫ್‌ಐ ಸಂಬಂಧಿತ ಪ್ರಕರಣದಲ್ಲಿ ದಾಳಿ ನಡೆಸುತ್ತಿರುವ ಎನ್‌ಐಎ ತಂಡವು 7/11 ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸುವ ಮೊದಲು ಬುಧವಾರ ಉಪನಗರ ವಿಕ್ರೋಲಿಯ ಆತನ ನಿವಾಸಕ್ಕೆ ತೆರಳಿದ್ದು, ಈ ವೇಳೆ ಮನೆಯ ಬಾಗಿಲು ತೆರೆಯದ ಕಾರಣ ಆರು ಗಂಟೆಗಳಿಗೂ ಹೆಚ್ಚು ಕಾಲ ಮನೆಯ ಹೊರಗೆ ಕಾಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಪ್ರವಾಸದ ವೇಳೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಿಎಫ್‌ಐ ವಿರುದ್ಧ ದೇಶದ ಆರು ರಾಜ್ಯಗಳ ಹಲವು ಸ್ಥಳಗಳಲ್ಲಿ ನಡೆಸಿದ ದಾಳಿಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ರಮ ಕೈಗೊಂಡಿದೆ.
ಮುಂಬೈ ಪೊಲೀಸರೊಂದಿಗೆ ಎನ್‌ಐಎ ತಂಡವು 7/11 ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಬ್ದುಲ್ ವಾಹಿದ್ ಶೇಖ್ ನಿವಾಸವನ್ನು ಬೆಳಗ್ಗೆ 5 ಗಂಟೆಗೆ ತಲುಪಿತ್ತು ಆದರೆ ಶೇಖ್ ಆರು ಗಂಟೆಗಳಿಗೂ ಹೆಚ್ಚು ಕಾಲ ಬಾಗಿಲು ತೆರೆಯಲಿಲ್ಲ ಮತ್ತು ಅಧಿಕಾರಿಗಳನ್ನು ಹೊರಗೆ ಕಾಯುವಂತೆ ಮಾಡಿ ಸತಾಯಿಸಿದ ಎಂದು ಅಧಿಕಾರಿ ಹೇಳಿದರು.
ಮನೆಯೊಳಗಿಂದ, ಶೇಖ್ ಸರ್ಚ್ ವಾರಂಟ್ ತಂದಿದ್ದೀರಾ ಎಂದು ಎನ್‌ಐಎ ಅಧಿಕಾರಿಗಳನ್ನು ಕೇಳಿದ್ದು, ವಕೀಲರು ಮತ್ತು ಕೆಲವು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ತಲುಪಿದ ನಂತರ ಬೆಳಗ್ಗೆ 11.15 ರ ಸುಮಾರಿಗೆ ಬಾಗಿಲು ತೆರೆದ ಎಂದು ಅಧಿಕಾರಿಗಳು ಹೇಳಿದರು.
ಶೇಖ್ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬಂದಿಯನ್ನು ನಿಯೋಜಿಸಿ ಐದು ಗಂಟೆಗಳಿಗೂ ಹೆಚ್ಚು ಕಾಲ ಶೋಧ ನಡೆಸಲಾಗಿದೆ.
ಪೊಲೀಸರು ಮತ್ತು ಕೆಲವರು ಬೆಳಗ್ಗೆ 5 ಗಂಟೆಯಿಂದಲೇ ತಮ್ಮ ನಿವಾಸದ ಹೊರಗೆ ಜಮಾಯಿಸಿದ್ದಾರೆ ಎಂದು ಶೇಖ್ ವಾಟ್ಸಾಪ್‌ನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದ.“ನನ್ನ ಮನೆಗೆ ಪ್ರವೇಶಿಸಲು ಬಯಸಿ ಬಾಗಿಲು ಮುರಿದು ನನ್ನ ಮನೆಯ ಸಿಸಿಟಿವಿ ಕೆಮರಾವನ್ನು ಹಾನಿಗೊಳಿಸಿದರು. ಅವರು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅಥವಾ ಯಾವುದೇ ಎಫ್‌ಐಆರ್ ಅನ್ನು ನನಗೆ ತೋರಿಸುತ್ತಿಲ್ಲ, ”ಎಂದು ಆರೋಪಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.