World Cup ; ಅಫ್ಘಾನ್ ಎದುರು ರೋಹಿತ್ ಶರ್ಮ ಅಬ್ಬರ:ತೆಂಡೂಲ್ಕರ್, ಗೇಲ್ ದಾಖಲೆ ಪತನ
ಸ್ಪೋಟಕ ಶತಕ ಸಿಡಿಸಿ ಬ್ಯಾಟಿಂಗ್ ವೈಭವ ತೋರಿದ ಕಪ್ತಾನ
Team Udayavani, Oct 11, 2023, 7:51 PM IST
ಹೊಸದಿಲ್ಲಿ: ಇಲ್ಲಿ ಬುಧವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಫ್ಘಾನಿಸ್ಥಾನ ದ ಎದುರು ಅಬ್ಬರಿಸಿದ ಭಾರತ ತಂಡದ ಕಪ್ತಾನ ರೋಹಿತ್ ಶರ್ಮ ಹೊಸ ಹೊಸ ದಾಖಲೆಗಳನ್ನು ಬರೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ರೋಹಿತ್ ಶರ್ಮ ತನ್ನ ಹೆಸರಿಗೆ ಬರೆಸಿಕೊಂಡರು. 553 ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು. ಶಾಹಿದ್ ಅಫ್ರಿದಿ(476), ಬ್ರೆಂಡನ್ ಮೆಕಲಮ್(398), ಮಾರ್ಟಿನ್ ಗಪ್ಟಿಲ್( 383) ಆ ನಂತರದ ಸ್ಥಾನದಲ್ಲಿದ್ದಾರೆ.
ಭಾರತದ ಪರ ವಿಶ್ವಕಪ್‌ನಲ್ಲಿ ಸಾವಿರ ರನ್ ಗಳಿಸಿ ಭಾರತದ ಪರ ಅತಿ ಹೆಚ್ಚು ರನ್ ಆಗ್ರ ಐವರ ಪಟ್ಟಿಯಲ್ಲಿ ರೋಹಿತ್ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್(2278 ) ಅಗ್ರ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಆ ನಂತರ ವಿರಾಟ್ ಕೊಹ್ಲಿ(1115 ) ಸೌರವ್ ಗಂಗೂಲಿ(1006) ಬಳಿಕ ರಾಹುಲ್ ದ್ರಾವಿಡ್(860) ಅವರಿದ್ದಾರೆ.
ರೋಹಿತ್ ಶರ್ಮ ವಿಶ್ವಕಪ್‌ನಲ್ಲಿ ಕನಿಷ್ಠ ಇನ್ನಿಂಗ್ಸ್ ಗಳಲ್ಲಿ 1,000 ರನ್‌ಗಳಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.19 ಇನ್ನಿಂಗ್ಸ್ ನಲ್ಲಿ1,000 ರನ್ ಗಡಿ ದಾಟಿದರು. ಆಸೀಸ್ ನ ಡೇವಿಡ್ ವಾರ್ನರ್ 19 ಇನ್ನಿಂಗ್ಸ್ ನಲ್ಲಿ 1,000 ರನ್‌ಗಳಿಸಿದ ದಾಖಲೆ ಹೊಂದಿದ್ದರು. ಸಚಿನ್ ತೆಂಡೂಲ್ಕರ್(20 ), ಎಬಿ ಡಿವಿಲಿಯರ್ಸ್(20), ವಿವಿಯನ್ ರಿಚರ್ಡ್ಸ್(21) ಸೌರವ್ ಗಂಗೂಲಿ(21) ಆ ನಂತರದ ಸ್ಥಾನದಲ್ಲಿದ್ದಾರೆ.
ಅಫ್ಘಾನಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ನಾಯಕ ಹಶ್ಮತುಲ್ಲಾ ಶಾಹಿದಿ 80, ಅಜ್ಮತುಲ್ಲಾ ಒಮರ್ಜಾಯ್ 62 ರನ್ ಗಳಿಸಿ ಉತ್ತಮ ಆಟವಾಡಿದರು. ಭಾರತದ ಪರ ಬುಮ್ರಾ 4 ವಿಕೆಟ್ ಕಬಳಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ 2, ಕುಲದೀಪ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ವಿಶ್ವಕಪ್‌ನಲ್ಲಿ ಅತಿ ವೇಗದ ಶತಕಗಳು
ಐಡೆನ್ ಮಾರ್ಕ್ರಾಮ್ (SA) 49
ಕೆವಿನ್ ಒ’ಬ್ರೇನ್ (IRE)50 –
ಗ್ಲೆನ್ ಮ್ಯಾಕ್ಸ್‌ವೆಲ್ 51
ಡಿವಿಲಿಯರ್ಸ್ 52 –
ಇಯಾನ್ ಮಾರ್ಗನ್ 57
ರೋಹಿತ್ ಶರ್ಮ 63
ಭಾರತ ಪರ ಅತಿ ವೇಗದ ಏಕದಿನ ಶತಕಗಳು
ವಿರಾಟ್ ಕೊಹ್ಲಿ 52 ಆಸ್ಟ್ರೇಲಿಯ ವಿರುದ್ , ಜೈಪುರ, 2013
ವೀರೇಂದ್ರ ಸೆಹ್ವಾಗ್ 60 ವಿರುದ್ಧ ನ್ಯೂಜಿಲ್ಯಾಂಡ್ , ಹ್ಯಾಮಿಲ್ಟನ್, 2009
ವಿರಾಟ್ ಕೊಹ್ಲಿ 61 ಆಸ್ಟ್ರೇಲಿಯ ವಿರುದ್ಧ, ನಾಗ್ಪುರ, 2013
ಮೊಹಮ್ಮದ್ ಅಜರುದ್ದೀನ್ 62 ನ್ಯೂಜಿಲ್ಯಾಂಡ್ ವಿರುದ್ಧ ಬರೋಡಾ, 1988
ರೋಹಿತ್ ಶರ್ಮ 63 (ಇಂದು)
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು
7 – ರೋಹಿತ್ ಶರ್ಮಾ
6 – ಸಚಿನ್ ತೆಂಡೂಲ್ಕರ್
5 – ರಿಕಿ ಪಾಂಟಿಂಗ್
5 – ಕುಮಾರ್ ಸಂಗಕ್ಕಾರ
ಅತಿ ಹೆಚ್ಚು ಏಕದಿನ ಶತಕಗಳು
49 – ಸಚಿನ್ ತೆಂಡೂಲ್ಕರ್
47 – ವಿರಾಟ್ ಕೊಹ್ಲಿ
31 – ರೋಹಿತ್ ಶರ್ಮ
30 – ರಿಕಿ ಪಾಂಟಿಂಗ್
28 – ಸನತ್ ಜಯಸೂರ್ಯ
ಆರಂಭಿಕ ಆಟಗಾರನಾಗಿ ಅತಿ ಹೆಚ್ಚುಏಕದಿನ ಶತಕಗಳು
45 – ಸಚಿನ್ ತೆಂಡೂಲ್ಕರ್
29 – ರೋಹಿತ್ ಶರ್ಮ
28 – ಸನತ್ ಜಯಸೂರ್ಯ
27 – ಹಾಶಿಮ್ ಆಮ್ಲ
25 – ಕ್ರಿಸ್ ಗೇಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.