Udupi ಸ್ಥಿತಪ್ರಜ್ಞೆ,ಸಮಾಜಮುಖಿ ಸೇವೆ: ಕೃಷ್ಣಾಪುರ ಶ್ರೀ
ಶೀರೂರು ಶ್ರೀವೇದವರ್ಧನತೀರ್ಥ ಶ್ರೀಪಾದರ 18ನೇ ಜನ್ಮನಕ್ಷತ್ರ ಕಾರ್ಯಕ್ರಮ
Team Udayavani, Oct 11, 2023, 11:40 PM IST
ಉಡುಪಿ: ಶೀರೂರು ಮಠದ ಕೀರ್ತಿಶೇಷರಾದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಉತ್ತರಾಧಿಕಾರಿಗಳಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ 18ನೇ ಜನ್ಮನಕ್ಷತ್ರದ ಆಚರಣೆ ಮಠದ ಮುಂಭಾಗದ ರಥಬೀದಿಯ ಶ್ರೀ ಅನ್ನವಿಟ್ಠಲ ವೇದಿಕೆಯಲ್ಲಿ ಬುಧವಾರ ನೆರವೇರಿತು.
ವೇದವರ್ಧನತೀರ್ಥರಿಗೆ 18 ವರ್ಷ ತುಂಬಿದೆ ಎನ್ನುವ ಘೋಷಣೆಯ 18 ಎಂದು ಬರೆಯಲಾದ ಹೂವಿನ ಫಲಕವನ್ನು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮುಟ್ಟಿ ಅಧಿಕೃತಗೊಳಿಸಿದರು.
ಸನ್ಯಾಸಿಗಳಿಗೆ ಸಮಾಜದಲ್ಲಿ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ದೇವತಾರಾಧನೆಯೊಂದಿಗೆ ದೇವರ ಅನುಗ್ರಹ ಪಡೆದು, ಎಲ್ಲ ಕಡೆ, ಎಲ್ಲರಲ್ಲಿ ಯೂ ದೇವರಿದ್ದಾನೆ ಎಂಬುದನ್ನು ಪರಿಗಣಿಸಿ ಎಲ್ಲರನ್ನು ಸಮಾನ ಭಾವದಿಂದ ಕಾಣಬೇಕಾಗುತ್ತದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದೆನ್ನುವ ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಸಾಗಬೇಕಾದ ಜವಾಬ್ದಾರಿ ಇದೆ ಎಂದು ಶ್ರೀಗಳು ತಿಳಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಸಂತನಂತೆ ಬದುವವನಿಗೆ ಸಂಕಟವಿರದು. ಸನ್ಯಾಸ ತ್ಯಾಗದ ಸಂಕೇತ. ಅಂತಹ ಪವಿತ್ರವಾದ ಸನ್ಯಾಸದ ಮೂಲಕ ಕೀರ್ತಿ ಪಾತ್ರರಾಗಿರಿ ಎಂದು ಹಾರೈಸಿದರು.
ಶಾಸಕ ಗುರುರಾಜ ಗಂಟಿಹೊಳೆ ಅವರು, ಹಿಂದೂ ಸಮಾಜದ ರಕ್ಷಣೆ ಮತ್ತು ಮಾರ್ಗದರ್ಶನ ನೀಡುತ್ತಾ ಬಂದವರು ಸೈನಿಕರು ಮತ್ತು ಸಂತರು. ಇವರಿಬ್ಬರ ಬದುಕು ಸಮಾಜಕ್ಕೆ. ಅಂತಹ ಕಾರ್ಯ ನಡೆಯಲಿ, ತನ್ಮೂಲಕ ಲೋಕ ಕಲ್ಯಾಣವಾಗಲಿ ಎಂದು ಹಾರೈಸಿದರು.
ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್ ಮಾತನಾಡಿದರು. ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಕೀರ್ತಿಶೇಷರಾದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರನ್ನು ಸ್ಮರಿಸಿದರು.
ಪ್ರಮುಖರಾದ ಪುರುಷೋತ್ತಮ ಪಿ. ಶೆಟ್ಟಿ, ಮನೋಹರ ಎಸ್. ಶೆಟ್ಟಿ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಭುವನಾಭಿರಾಮ ಉಡುಪ, ಡಾ| ತಲ್ಲೂರು ಶಿವರಾಮ ಶೆಟ್ಟಿ, ರಂಜನ ಕಲ್ಕೂರ, ರಘುರಾಮ ಆಚಾರ್ಯ, ವೆಂಕಟರಮಣ ಮುಚ್ಚಿಂತ್ತಾಯ, ಗಿರೀಶ್ ಅಂಚನ್, ಅಮೃತಾ ಕೃಷ್ಣಮೂರ್ತಿ, ಬಾಲಕೃಷ್ಣ ಶೆಟ್ಟಿ, ಅದಮಾರು ಮಠದ ಗೋವಿಂದರಾಜ್, ಶೀರೂರು ಮಠದ ದಿವಾನರಾದ ಉದಯ ಸರಳತ್ತಾಯ ಉಪಸ್ಥಿತರಿದ್ದರು.
ವಾಸುದೇವ ರಂಗ ಭಟ್ಟರ ಸಾರಥ್ಯದಲ್ಲಿ ಪಾದುಕಾ ಪ್ರದಾನ ಮತ್ತು ಪಂಚವಟಿ ತಾಳಮದ್ದಳೆ ಪ್ರಸ್ತುತಗೊಂಡಿತು. ಶಾಸಕ ಯಶ್‌ಪಾಲ್ ಎ. ಸುವರ್ಣ ಸ್ವಾಗತಿಸಿದರು. ಹಿಂಜಾವೇ ಪ್ರಮುಖ ಶ್ರೀಕಾಂತ ಶೆಟ್ಟಿ ಪ್ರಸ್ತಾವನೆಗೈದರು. ಕಬ್ಬಿನಾಲೆ ಅಶ್ವತ್ಥ ಭಾರದ್ವಾಜ್ ನಿರೂಪಿಸಿದರು.
ಧರ್ಮದ ರಕ್ಷಣೆಗೆ ಮಠ,ಸಮಾಜ ಒಟ್ಟಾಗಬೇಕು
ಶ್ರೀ ವೇದವರ್ಧನತೀರ್ಥರು ಮಾತನಾಡಿ, “ಜನಸೇವೆಯೇ ಜನಾರ್ದನ ಸೇವೆ’ ಎನ್ನುವ ಧ್ಯೇಯದೊಂದಿಗೆ ಸಮಾಜ ಸೇವೆಯನ್ನೇ ಗುರಿಯನ್ನಾಗಿಸಿ ಬದುಕಬೇಕಾದ ಹೊಣೆಗಾರಿಕೆ ಸಂತರಿಗಿದೆ. ಮಧ್ವಾಚಾರ್ಯರು, ವಾದಿರಾಜರು ಇದನ್ನೇ ಸಾರಿದ್ದರು. ಈ ನೆಲೆಯಲ್ಲಿ ಮಠ ಮತ್ತು ಸಮಾಜ ಒಂದಾಗಿ ಕೆಲಸ ಮಾಡಬೇಕಾಗಿದೆ. ಭಕ್ತರಿಂದ ಬಂದ ಸಂಪತ್ತನ್ನು ದೇವರಿಗೆ ಸಮರ್ಪಿಸಿ ಮತ್ತೆ ಪ್ರಸಾದ ರೂಪವಾಗಿ ಸಮಾಜ ಸೇವಾ ಕಾರ್ಯಕ್ಕೆ ಬಳಸಬೇಕಾಗಿದೆ. ಸಜ್ಜನರಿಗೆ ಪರಮಾತ್ಮನ ದಯೆ ಇದ್ದೇ ಇರುತ್ತದೆ. ಸನಾತನ ಹಿಂದೂ ಧರ್ಮದ ಸಂರಕ್ಷಣೆಗೆ ಮಠ ಮತ್ತು ಸಮಾಜ ಒಟ್ಟಾಗಬೇಕಾಗಿದೆ ಎಂದರು.
ಸಮಾಜಮುಖಿ ಕಾರ್ಯಗಳಿಗೆ ಚಾಲನೆ
ಶೀರೂರು ಮಠದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯ ನಡೆಯಲಿದೆ ಎನ್ನುವ ನೆಲೆಯಲ್ಲಿ ಸುಧಾಕರ ಅವರಿಗೆ ಮನೆ ಕಟ್ಟಲು ಅನುಕೂಲವಾಗುವಂತೆ 50 ಸಾವಿರ ರೂ. ಸಹಾಯ ಧನದ ಚೆಕ್ ಅನ್ನು ಶೀರೂರು ಶ್ರೀಪಾದರು ನೀಡಿ ಹರಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.