World Cup; ಕಾಂಗರೂ, ಹರಿಣಗಳ ಹಣಾಹಣಿ; ಯಾರಿಗೆ ಲಕ್ನೋ ಲಕ್‌?

ದಕ್ಷಿಣ ಆಫ್ರಿಕಾ ಅಬ್ಬರದ ಫಾರ್ಮ್... ಆಸ್ಟ್ರೇಲಿಯಕ್ಕೆ ಸ್ಪಿನ್‌ ನಿಭಾವಣೆಯ ಚಿಂತೆ

Team Udayavani, Oct 12, 2023, 6:37 AM IST

1-wqqewq

ಲಕ್ನೋ: ಭಾರತದ ವಿರುದ್ಧ ಮುಗ್ಗರಿಸಿದ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ವಿರುದ್ಧ ದಾಖಲೆಯ ಮೊತ್ತ ಪೇರಿಸಿ ಗೆದ್ದು ಬಂದ ದಕ್ಷಿಣ ಆಫ್ರಿಕಾ ಗುರುವಾರ ಲಕ್ನೋ ಅಂಗಳದಲ್ಲಿ ಮುಖಾಮುಖಿಯಾಗಲಿವೆ. ಇದು ವಿಶ್ವಕಪ್‌ ಟೂರ್ನಿಯ ಮಹಾಸಮರ ಎನಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ.

ಆಸ್ಟ್ರೇಲಿಯ ಅತ್ಯಧಿಕ 5 ಸಲ ವಿಶ್ವಕಪ್‌ ಗೆದ್ದಿರುವ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ದಕ್ಷಿಣ ಆಫ್ರಿಕಾಕ್ಕೆ ಈವರೆಗೆ ವಿಶ್ವಕಪ್‌ ಫೈನಲ್‌ ಕೂಡ ತಲುಪಲಾಗಲಿಲ್ಲ ಎಂಬುದೂ ಸತ್ಯವೇ. ಆದರೆ ಇಲ್ಲಿ ಗತ ಇತಿಹಾಸ ಕಟ್ಟಿಕೊಂಡು ಏನೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ಕೂಡ “ಫ್ರೆಶ್‌ ಗೇಮ್‌’. ಆಸ್ಟ್ರೇಲಿಯ ಹೇಗೆ ಸಿಡಿದು ನಿಂತು ತಿರುಗಿ ಬಿದ್ದೀತು, ದಕ್ಷಿಣ ಆಫ್ರಿಕಾ ತನ್ನ ಲಯವನ್ನು ಹೇಗೆ ಕಾಯ್ದುಕೊಂಡು ಬಂದೀತು ಎಂಬುದಷ್ಟೇ ಇಲ್ಲಿ ಮುಖ್ಯ.

ಶ್ರೀಲಂಕಾವನ್ನು ಪುಡಿಗಟ್ಟಿದ ರೀತಿಯನ್ನು ಕಂಡಾಗ ದಕ್ಷಿಣ ಆಫ್ರಿಕಾ ಕೂಡ ಟ್ರೋಫಿ ರೇಸ್‌ನಲ್ಲಿರುವ ಬಲವಾದ ಸ್ಪರ್ಧಿ ಎಂಬುದು ಸಾಬೀತಾಗಿದೆ.

ಕ್ವಿಂಟನ್‌ ಡಿ ಕಾಕ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಐಡನ್‌ ಮಾರ್ಕ್‌ರಮ್‌ ಸೆಂಚುರಿ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಆಳವನ್ನು ಪರಿಚಯಿಸಿದ್ದಾರೆ. ನಾಯಕ ಟೆಂಬ ಬವುಮ, ಡೇವಿಡ್‌ ಮಿಲ್ಲರ್‌, ಹೆನ್ರಿಕ್‌ ಕ್ಲಾಸೆನ್‌ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳಬಲ್ಲ ಛಾತಿ ಹೊಂದಿರುವವರೇ.
ದಕ್ಷಿಣ ಆಫ್ರಿಕಾ ಸಿಡಿದು ನಿಂತದ್ದು ಹೊಸದಿಲ್ಲಿಯ ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲಿ ಎಂಬುದು ಕೂಡ ನಿಜವೇ. ಚೇಸಿಂಗ್‌ ವೇಳೆ ಶ್ರೀಲಂಕಾ ಕೂಡ ಬೆನ್ನಟ್ಟಿಕೊಂಡು ಬಂದು ಮುನ್ನೂರರ ಗಡಿ ದಾಟಿತ್ತು. ಹೀಗಾಗಿ ಇಲ್ಲಿ ಬೌಲಿಂಗ್‌ ವೈಫ‌ಲ್ಯದತ್ತ ಬೆಟ್ಟು ಮಾಡುವ ಹಾಗಿಲ್ಲ. ಗುರುವಾರದ ಪಂದ್ಯ ನಡೆಯುವುದು ಲಕ್ನೋದಲ್ಲಿ. ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ಲಕ್ನೋದಲ್ಲಿ ಆಡಲಾಗುವ ಮೊದಲ ಪಂದ್ಯ. ಹೀಗಾಗಿ ಇಲ್ಲಿನ ಪಿಚ್‌ ಹೇಗೆ ವರ್ತಿಸೀತು ಎಂಬ ಕುತೂಹಲವಿದೆ.

ಒಂದು ವೇಳೆ ಲಕ್ನೋ ಪಿಚ್‌ ಕೂಡ ಸ್ಪಿನ್ನಿಗೆ ನೆರವಾದರೆ ಆಸ್ಟ್ರೇಲಿಯವನ್ನು ಹೆದರಿಸಲು ಕೇಶವ್‌ ಮಹಾರಾಜ್‌, ತಬ್ರೇಜ್‌ ಶಮಿ ಇದ್ದಾರೆ. ಆದರೆ ಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಒಂಟಿ ಸ್ಪಿನ್ನರ್‌ನನ್ನು ದಾಳಿಗೆ ಇಳಿಸಿತ್ತು. ಆಸೀಸ್‌ ಪಡೆ ಭಾರತದ ಸ್ಪಿನ್ನಿಗೆ ಬೆದರಿದ್ದನ್ನು ಕಂಡು ಹೆಚ್ಚುವರಿ ಸ್ಪಿನ್ನರ್‌ನನ್ನು ಕಣಕ್ಕಿಳಿಸುವುವ ಯೋಜನೆಯಲ್ಲಿದೆ. ಹಾಗೆಯೇ ಹರಿಣಗಳ ವೇಗದ ಬೌಲಿಂಗ್‌ ಕೂಡ ಘಾತಕ. ರಬಾಡ, ಎನ್‌ಗಿಡಿ, ಜಾನ್ಸೆನ್‌ ಇಲ್ಲಿನ ಹುರಿಯಾಳುಗಳು.

ದಕ್ಷಿಣ ಆಫ್ರಿಕಾಕ್ಕೆ ಇಲ್ಲಿ ಮತ್ತೊಂದು ಎಡ್ವಾಂಟೇಜ್‌ ಇದೆ. ವಿಶ್ವಕಪ್‌ಗ್ೂ ಮುನ್ನ ಆಸ್ಟ್ರೇಲಿಯ ವಿರುದ್ಧ ಆಡಲಾದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 0-2 ಹಿನ್ನಡೆಯಲ್ಲಿದ್ದ ಹರಿಣಗಳ ಪಡೆ ಕೊನೆಯ ಮೂರೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿ ಸರಣಿಯನ್ನು 3-2ರಿಂದ ವಶಪಡಿಸಿಕೊಂಡಿತ್ತು. ಅದು ಲಂಕೆಯನ್ನು ಮಣಿಸಿದ್ದನ್ನು ಗಮನಿಸಿದಾಗ ವಿಶ್ವಕಪ್‌ನಲ್ಲೂ ಇದೇ ಲಯದಲ್ಲಿದ್ದಂತೆ ಭಾಸವಾಗುತ್ತಿದೆ.

ಗ್ರೀನ್‌ ಬದಲು ಸ್ಟೋಯಿನಿಸ್‌?
ಭಾರತದ ವಿರುದ್ಧ ನಲವತ್ತರ ಗಡಿ ದಾಟಿದ ಆಸೀಸ್‌ ಆಟಗಾರರೆಂದರೆ ವಾರ್ನರ್‌ ಮತ್ತು ಸ್ಮಿತ್‌ ಮಾತ್ರ. ವಿಶ್ವಕಪ್‌ಗೆ ಕೊನೆಯ ಗಳಿಗೆಯಲ್ಲಿ ಸೇರ್ಪಡೆಗೊಂಡ ಲಬುಶೇನ್‌, ಮಾರ್ಷ್‌, ಮ್ಯಾಕ್ಸ್‌ವೆಲ್‌, ಕ್ಯಾರಿ, ಗ್ರೀನ್‌ ಅವರೆಲ್ಲ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾಗಿ ದ್ದರು. ಗುರುವಾರದ ಪಂದ್ಯಕ್ಕೆ ಗ್ರೀನ್‌ ಬದಲು ಮಾರ್ಕಸ್‌ ಸ್ಟೋಯಿನಿಸ್‌ ಆಡಲಿಳಿಯಬಹುದು. ಅವರು ಐಪಿಎಲ್‌ನಲ್ಲಿ ಲಕ್ನೋ ಪರ ಆಡಿದ್ದು, ಇಲ್ಲಿನ ಟ್ರ್ಯಾಕ್‌ ಬಗ್ಗೆ ಅರಿತಿರುವುದೇ ಇದಕ್ಕೆ ಕಾರಣ.

ಆಸೀಸ್‌ ಬಲಿಷ್ಠ, ಆದರೆ…
ಆಸ್ಟ್ರೇಲಿಯದ ಬ್ಯಾಟಿಂಗ್‌, ಬೌಲಿಂಗ್‌ ಸರದಿಯೆರಡೂ ಬಲಿಷ್ಠ. ಒಂದು ಪಂದ್ಯದಲ್ಲಿ ಸೋತಿತು ಅಂದಮಾತ್ರಕ್ಕೆ ಮಾನಸಿಕ ಒತ್ತಡಕ್ಕೆ ಸಿಲುಕಿ ಝರ್ಜರಿತಗೊಳ್ಳುವ ತಂಡ ಇದಲ್ಲ. ಈ ತಂಡಕ್ಕಿರುವಷ್ಟು ಫೈಟಿಂಗ್‌ ಸ್ಪಿರಿಟ್‌ ಬೇರೆ ಯಾವುದೇ ತಂಡಕ್ಕಿಲ್ಲ ಎಂಬುದು ಸತ್ಯ. ಪಂದ್ಯಾವಳಿಯ ನಿರ್ಣಾಯಕ ಘಟ್ಟದಲ್ಲಿ ಹೇಗೆ ತಿರುಗಿ ಬೀಳಬೇಕು ಎಂಬ ವಿದ್ಯೆ ಆಸೀಸ್‌ಗೆ ಚೆನ್ನಾಗಿ ಕರಗತ. ಆದರೆ ಸ್ಪಿನ್‌ ನಿಭಾವಣೆಯಲ್ಲಿ ಯಶಸ್ವಿಯಾದರೆ ಮಾತ್ರ!

ಬೇಕಾಗಿದ್ದಾರೆ ಮತ್ತೋರ್ವ ಸ್ಪೆಷಲಿಸ್ಟ್‌ ಸ್ಪಿನ್ನರ್‌
ಆಸ್ಟ್ರೇಲಿಯ ಭಾರತದ ಸ್ಪಿನ್‌ ದಾಳಿಗೆ ನೆಲಕಚ್ಚಿತ್ತು. ಜಡೇಜ, ಕುಲದೀಪ್‌ ಮತ್ತು ಅಶ್ವಿ‌ನ್‌ ಕಾಂಗರೂಗಳಿಗೆ ಕಂಟಕವಾಗಿ ಕಾಡಿದ್ದರು. ಇನ್ನೊಂದೆಡೆ ಆಸೀಸ್‌ ಬಳಿ ಆ್ಯಡಂ ಝಂಪ ಹೊರತುಪಡಿಸಿದರೆ “ಸೆಕೆಂಡ್‌ ಫ್ರಂಟ್‌ಲೈನ್’ ಸ್ಪಿನ್ನರ್‌ ಇರಲಿಲ್ಲ. ಆಫ್ರಿಕಾ ವಿರುದ್ಧ ಈ ಕೊರತೆ ನೀಗಿಸಿಕೊಳ್ಳಬೇಕಿದೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.