Drought: ಅಪಾರ ಬೆಳೆ ಹಾನಿಗೆ ಅರೆಕಾಸಿನ ಪರಿಹಾರ
Team Udayavani, Oct 12, 2023, 4:33 PM IST
ರಾಮನಗರ: ಬರದಿಂದ ಕಂಗಾಲಾಗಿರುವ ಜಿಲ್ಲೆಯ ರೈತರು ಸರ್ಕಾರ ನೆರವು ನೀಡುತ್ತದೆ ಎಂಬ ನಿರೀಕ್ಷೆ ಇದ್ದು, ಸರ್ಕಾರ ದಿಂದ ದೊರೆಯಲಿರುವ ಪರಿ ಹಾರದ ಮೊತ್ತ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಹೌದು.., ಮುಂಗಾರು ವೈಫಲ್ಯದಿಂದಾಗಿ ಜಿಲ್ಲೆ ಯಲ್ಲಿ ಬರ ಆವರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 274 ಕೋಟಿ ರೂ. ಮೌಲ್ಯದ ಬೆಳೆ ಮಳೆ ಇಲ್ಲದೆ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಬರದ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ನಡೆಸಿರುವ ಅಧಿಕಾರಿಗಳ ತಂಡ, ಜಿಲ್ಲೆಯ ಐದು ತಾಲೂಕುಗಳಲ್ಲಿ 44128 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ.
ಈ ಪ್ರಮಾಣದ ಬೆಳೆ ಹಾನಿಯಾಗಿ ದ್ದರೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಜಿಲ್ಲೆಯ ರೈತರಿಗೆ ಬಿಡುಗಡೆಯಾಗಲಿರುವ ಅನುದಾನ ಕೇವಲ 32 ಕೋಟಿ ರೂ. ಮಾತ್ರ. ಇದು.., ಆಶ್ಚರ್ಯವಾದರೂ ನಂಬಲೇ ಬೇಕಾದ ಸತ್ಯ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿ ಆರ್‌ಎಫ್ ನಿಯಮಗಳ ಅನುಸಾರ ಅತಿವೃಷ್ಟಿ ಮತ್ತು ಅನಾ ವೃಷ್ಟಿಯಿಂದ ಬೆಳೆ ಹಾನಿಯಾದಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ 8500 ರೂ, ಮಳೆ ಆಶ್ರಿತ,17000 ಸಾವಿರ ರೂ. ನೀರಾವರಿ ಮತ್ತು 22500 ರೂ. ಬಹುವಾರ್ಷಿಕ ಬೆಳೆಗಳಿಗೆ ನೀಡಬೇಕು ಎಂಬ ನಿಯಮವಿದೆ.
ಆದರೆ ರೈತರಿಗೆ ಈ ಪರಿಹಾರದ ಮೊತ್ತ ಏನೇನೂ ಸಾಲದಾಗಿದ್ದು, ರೈತರು ಉಳುಮೆ ಮಾಡಲು ಮಾಡಿದ ಖರ್ಚಿಗೂ ಈ ಹಣ ಸಾಕಾಗುವುದಿಲ್ಲ. ಇನ್ನು ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಸ್ವಲ್ಪ ಮಟ್ಟಿನ ಹಣವನ್ನು ಇನ್‌ಪುಟ್ ಸಬ್ಸಿಡಿಯಾಗಿ ನೀಡಲು ಸೂಚಿಸಿದ್ದು, ಈ ಎಲ್ಲಾ ಮೊತ್ತವನ್ನು ಲೆಕ್ಕಾ ಹಾಕಿದರೆ ಜಿಲ್ಲೆಯಲ್ಲಿ ಹಾನಿಯಾಗಿರುವ ಬೆಳೆ ನಷ್ಟದ ಮೊತ್ತದ ಶೇ.15ರಷ್ಟು ಹಣವೂ ಪರಿಹಾರವಾಗಿ ರೈತರಿಗೆ ದೊರೆಯುವುದಿಲ್ಲ. ಈಗಾಗಲೇ ಮಳೆ ನಂಬಿ ರೈತರು ಸಾಲ ಸೋಲ ಮಾಡಿಕೊಂಡಿದ್ದು, ವರ್ಷ ಪೂರ್ತಿ ಜೀವನ ನಿರ್ವಹಣೆಗೆ ಏನು ಮಾಡುವುದು ಎಂಬ ಆತಂಕಕ್ಕೆ ಕೃಷಿ ನಂಬಿ ಜೀವನ ಸಾಗಿಸುತ್ತಿರು ವವರು ಸಿಲುಕಿದ್ದಾರೆ.
ಸಾಧಾರಣ ಬರಪೀಡಿತ ತಾಲೂಕುಗಳು: ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಪರಿಷ್ಕೃತ ಪರಪೀಡಿತ ತಾಲೂಕುಗಳ ಪಟ್ಟಿಯಲ್ಲೂ ಘೋಷಣೆ ಮಾಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ತೀವ್ರ ಬರಪೀಡಿತ ತಾಲೂಕುಗಳಾಗಿ ಕನಕಪುರ, ರಾಮನಗರ, ಹಾರೋಹಳ್ಳಿ ಯನ್ನು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಪಶುಗಳಿಗೆ ಮೇವು ಬ್ಯಾಂಕ್ ಸ್ಥಾಪನೆ, ಮಿನಿ ಕಿಟ್ಸ್ ಸರಬರಾಜು, ಔಷ ದೋಪಚಾರ ಹಾಗೂ ರೈತರಿಗೆ ಇನ್ಪುಟ್ ಸಬ್ಸಿಡಿ ವಿತರಿಸಲು ಅನುದಾದನ ಅಗತ್ಯವಿದೆ. ಬರಪೀಡಿತ ತಾಲೂಕು ಗಳಲ್ಲಿ ಬೆಳೆ ಹಾನಿ ಯಾಗಿರುವ ಸಂಬಂಧ ಸರ್ಕಾರದ ಸೂಚನೆಯಂತೆ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಬೆಳೆ ಹಾನಿ ಹಾಗೂ ಅದರಿಂದ ಆಗಿರುವ ನಷ್ಟದ ಅಂದಾಜನ್ನು ಮಾಡಲಾಗಿದೆ.
ಸಮೀಕ್ಷೆಯ ವಿಸ್ತೃತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 92655 ಹೆಕ್ಟೇರ್ ಬಿತ್ತನೆ ವಿಸ್ತೀರ್ಣದ ಗುರಿಗೆ ಆಗಸ್ಟ್ ತಿಂಗಳ ಅಂತ್ಯಕ್ಕೆ 46358 ಹೆಕ್ಟೇರ್ ಪ್ರದೇಶಧಲ್ಲಿ ಮಾತ್ರ ಶೇ.50.3ರಷ್ಟು ಬಿತ್ತನೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಒಟ್ಟು 74789 ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದ್ದು, ಈ ಪ್ರದೇಶದಲ್ಲಿ 42897 ಹೆಕ್ಟೇರ್ ಪ್ರದೇಶವನ್ನು ಹಾಗೂ 1231 ಹೆಕ್ಟೇರ್ ತೆಂಗು ಪ್ರದೇಶವನ್ನು ಶೇ.35ಕ್ಕಿಂತ ಹೆಚ್ಚಿನ ಬೆಳೆ ಹಾನಿಯೆಂದು ಸಮೀಕ್ಷೆ ನಡೆಸಿರುವ ಅಧಿಕಾರಿಗಳು ವರದಿ ಯಲ್ಲಿ ತಿಳಿಸಿದ್ದಾರೆ.
256 ಕೋಟಿ ರೂ.ಮೌಲ್ಯದ ರಾಗಿ ಬೆಳೆ ಹಾನಿ: ಕೃಷಿ, ಕಂದಾಯ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಆಪ್ ಆಧಾರಿತ ಜಂಟಿ ಸಮೀಕ್ಷೆ ನಡೆಸಿದ್ದು, ಈ ಸಮೀûಾ ವರದಿಯ ಪ್ರಕಾರ ಜಿಲ್ಲೆಯ ಪ್ರಮುಖ ಮಳೆ ಆಶ್ರಿತ ಬೆಳೆಯಾಗಿ ರುವ ರಾಗಿ ಬೆಳೆ 256 ಕೋಟಿ ರೂ. ನಷ್ಟು ಹಾನಿಯಾಗಿದೆ. ಇನ್ನು 10.15 ಕೋಟಿ ರೂ. ಮೌಲ್ಯದ ತೆಂಗುಬೆಳೆ, 3.15 ಕೋಟಿ ರೂ. ಮೌಲ್ಯದ ಮುಸುಕಿನ ಜೋಳ, 3.9 ಕೋಟಿ ರೂ. ಮೌಲ್ಯದ ನೆಲಗಡಲೆ, 1.14 ಕೋಟಿ ರೂ. ಮೌಲ್ಯದ ಹುರುಳಿ, 0.49 ಲಕ್ಷ ರೂ. ಮೌಲ್ಯದ ತೊಗರಿ ಬೆಳೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಹಾನಿಯಾಗಿದೆ ಎಂದು ಜಂಟಿ ಸಮೀಕ್ಷೆಯಲ್ಲಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.