Doddaballapur: ತಾಲೂಕಿಗೂ ಇಣುಕಿದ ಸೈಬರ್ ಕಳ್ಳರ ಹಾವಳಿ
Team Udayavani, Oct 12, 2023, 4:46 PM IST
ದೊಡ್ಡಬಳ್ಳಾಪುರ: ದಾಖಲೆ ದೃಢೀಕರಿಸಲು ನೀಡಿದ ಬಯೋಮೆಟ್ರಿಕ್ ದಾಖಲೆಗಳೇ ಮುಳುವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗುತ್ತಿರುವ ಘಟನೆಗಳು ತಾಲೂಕಿನಲ್ಲಿ ಹೆಚ್ಚುತ್ತಿದ್ದು, ಗ್ರಾಹಕರು ಆತಂಕಕ್ಕೊಳಗಾಗಿದ್ದರೆ, ಬ್ಯಾಂಕ್ ಸಿಬ್ಬಂದಿ ಗಳಿಗೆ ತಲೆ ಬಿಸಿಯಾಗುತ್ತಿದೆ. ಇತ್ತೀಚೆಗಷ್ಟೇ ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣ ನಿಗಾವಣೆ ಘಟಕ ತೆರೆಯಲಾಗಿದೆ.
ತಾಲೂಕಿನಲ್ಲಿ ಇತ್ತೀಚೆಗೆ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸೈಬರ್ ಅಪರಾಧಗಳ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ. ತಿಂಗಳ ಹಿಂದೆಯಷ್ಟೇ ಉಪ ನೋಂದಣಿ ಕಚೇರಿಯಲ್ಲಿ ಬಯೋಮೆಟ್ರಿಕ್ ನೀಡಿದ್ದೆ. ಇದಾದ ಎರಡು ದಿನ ಗಳಲ್ಲಿ ನಮಗರಿವವಿಲ್ಲದೆಯೇ ಬ್ಯಾಂಕ್ ನಲ್ಲಿ ನನ್ನ ಖಾತೆಯಿಂದ ದಿನ ಬಿಟ್ಟು ದಿನ 10 ಸಾವಿರದಂತೆ ಒಟ್ಟು 40 ಸಾವಿರ ರೂ.ಗಳು ಖಾಲಿಯಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬ್ಯಾಂಕ್ ನವರು ಗ್ರಾಹಕರ ಕೆವೈಸಿ ಮೊದಲಾಗಿ ಎಲ್ಲಾ ದಾಖಲೆ ಗ ಳನ್ನು ಪಡೆದಿ ರುತ್ತಾರೆ. ಆದರೆ ಸೈಬರ್ ಕಳ್ಳರ ಖಾತೆ ಯಾರದ್ದು, ವ್ಯಕ್ತಿ ಯಾರು ಎಂದು ಪತ್ತೆ ಹಚ್ಚಲು ಏಕೆ ಕ್ರಮ ವಹಿಸಲು ಸಹಕರಿಸುವುದಿಲ್ಲ ಎನ್ನುತ್ತಾರೆ ತೂಬಗೆರೆ ಪೇಟೆ ನಿವಾಸಿ ಸಿದ್ದಪ್ಪ.
10 ಸಾವಿರ ಗರಿಷ್ಠ: ಸೈಬರ್ ಕ್ರಿಮಿನಲ್ ಗಳು ವ್ಯಕ್ತಿಯೊಬ್ಬನ ಬೆರಳಚ್ಚುಗಳನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಗ್ರಾಹಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಶನಿವಾರ, ಭಾನುವಾರ ಅಥವಾ ಬ್ಯಾಂಕ್ ರಜೆ ಇರುವುದನ್ನು ಗಮನಿಸಿ ಕೃತ್ಯವೆಸಗುತ್ತಿದ್ದು, 10 ಸಾವಿರ ರೂಗಳಂತೆ ಪದೆ ಪದೇ ಹಣ ದೋಚುತ್ತಿದ್ದಾರೆ. ಏಕೆಂದರೆ ಈ ವ್ಯವಸ್ಥೆಯಲ್ಲಿ ಒಂದು ದಿನಕ್ಕೆ ಗರಿಷ್ಠ 10 ಸಾವಿರ ರೂ. ಮಾತ್ರ ಹಿಂತೆಗೆದುಕೊಳ್ಳಬಹುದಾಗಿದೆ. ಈ ಕುರಿತಂತೆ ಬ್ಯಾಂಕ್ ನವರಿಗೆ ಕೇಳಿದರೆ ಸೈಬರ್ ಕ್ರೈಮ್‌ಗೆ ದೂರು ನೀಡಿ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ.
ಬ್ಯಾಂಕ್ ಖಾತೆ ಎಷ್ಟು ಸುರಕ್ಷಿತ ಎಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ. ಸೈಬರ್ ವಂಚಕರ ವಂಚನೆಯ ಹೊಸದಾರಿ ಇದೀಗ ಆಧಾರ್ ಬಯೋಮೆಟ್ರಿಕ್. ಸೈಬರ್ ಅಪರಾಧಿಗಳು ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಂಚನೆಗಳು ಸಿಲಿಕಾನ್ ಫಿಂಗರ್ ಪ್ರಿಂಟ್‌ಗಳು ಮತ್ತು ಅನಧಿಕೃತ ಬಯೋಮೆಟ್ರಿಕ್ ಸಾಧನಗಳ ಮೂಲಕ ವ್ಯಕ್ತಿಗಳ ಆಧಾರ್-ಸಂಯೋಜಿತ ಬಯೋ ಮೆಟ್ರಿಕ್‌ಗಳನ್ನು ತೆಗೆದುಕೊಂಡು ಬ್ಯಾಂಕ್ ಖಾತೆಗಳಿಂದ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ.
ಬ್ಯಾಂಕ್ ವಹಿವಾಟು ಪರಿಶೀಲನೆ: ಯಾವುದೇ ಅನಧಿಕೃತ ವಹಿವಾಟುಗಳಿಗಾಗಿ ಬಳಕೆದಾರರು ತಮ್ಮ ಬ್ಯಾಂಕ್ ವಹಿವಾಟುಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ಯಾವುದೇ ಅನುಮಾನಾಸ್ಪದ ಚಟು ವಟಿಕೆಯನ್ನು ಬ್ಯಾಂಕ್‌ಗೆ ತ್ವರಿತವಾಗಿ ವರದಿ ಮಾಡಬೇಕು.
ಬ್ಯಾಂಕ್ ವಹಿವಾಟುಗಳ ಮೇಲೆ ಕಣ್ಣಿಡಿ: ಬಳಕೆದಾರರು ತಮ್ಮ ಬ್ಯಾಂಕ್‌ಗಳೊಂದಿಗೆ ವಹಿವಾಟು ಎಚ್ಚರಿಕೆ ಯಿಂದ ಮೇಲ್ವಿಚಾರಣೆ ಮಾಡುತ್ತಿರಬೇಕು. ಇದು ಅವರ ಖಾತೆಯಲ್ಲಿನ ಯಾವುದೇ ಚಟುವಟಿಕೆಯ ಬಗ್ಗೆ ಅವರಿಗೆ ತಿಳಿಸುತ್ತದೆ, ಅನುಮಾನಾಸ್ಪದ ವಹಿವಾಟುಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಪರಿಹರಿಸಲು ಅವರಿಗೆ ಅನುವು ಮಾಡಿಕೊಡುತ್ತದೆ ಎನ್ನುತ್ತಾರೆ ಬ್ಯಾಂಕ್ ಸಿಬ್ಬಂದಿ.
ಯುಐಡಿಎಐ ಮತ್ತು ಬ್ಯಾಂಕ್ ನೀಡುವ ಇತ್ತೀಚಿನ ಭದ್ರತಾ ವೈಶಿಷ್ಟ್ಯಗಳ ಬಗ್ಗೆ ಜನರು ಅರಿವು ಹೊಂದಿರ ಬೇಕು. ಈ ಬಗ್ಗೆ ಮಾಹಿತಿ ವಂಚನೆಯಂತಹ ಸಂಕಷ್ಟಗಳಿಂದ ನಮ್ಮನ್ನು ತಪ್ಪಿಸುತ್ತದೆ. ಕೃತ್ಯ ನಡೆದ ತಕ್ಷಣ ದೂರು ನೀಡಬೇಕಿದೆ ಎಂದು ಪೊಲೀಸರು ಕರೆ ನೀಡಿದ್ದಾರೆ.
ಬಯೋಮೆಟ್ರಿಕ್ ಲಾಕ್ ಮಾಡಬೇಕು: ಬಳಕೆದಾರರಿಗೆ ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು ಹಾಗೂ ಅನ್‌ಲಾಕ್ ಮಾಡಲು ಅವಕಾಶ ನೀಡಲಾಗಿದೆ.ಇದರಿಂದಾಗಿ ಆಧಾರ್ ಕಾರ್ಡ್‌ದಾರರ ಬಯೋಮೆಟ್ರಿಕ್ ಡೇಟಾ ಸುರಕ್ಷತೆ ನಡೆಸಬಹುದು. ಆಧಾರ್ ಕಾರ್ಡ್ ಅನ್ನು ಹೊಂದಿರುವವರು ಈ ಸೇವೆಯ ಪ್ರಯೋಜನವನ್ನು ಪಡೆಯಬಹುದು. ಈ ಫೀಚರ್ ಆಧಾರ್ ಕಾರ್ಡ್‌ದಾರರಿಗೆ ಬಯೋಮೆಟ್ರಿಕ್ ಡೇಟಾವನ್ನು ರಕ್ಷಣೆ ಮಾಡಲು ಅವಕಾಶ ನೀಡುತ್ತದೆ. ಬಳಕೆದಾರರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಲು ಅಧಿಕೃತ ಯುಐಡಿಎಐ ವೆಬ್‌ಸೈಟ್ ಅನ್ನು ಬಳಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಅನಧಿಕೃತ ದೃಢೀಕರಣಕ್ಕಾಗಿ ಬಳಕೆದಾರರ ಬೆರಳಚ್ಚುಗಳು ಮತ್ತು ಇತರ ಬಯೋಮೆಟ್ರಿಕ್ ಮಾಹಿತಿ ದುರ್ಬಳಕೆಯಾಗದಂತೆ ಇದು ತಡೆಯುತ್ತದೆ.
ಆಧಾರ್ ಮಾಹಿತಿ ರಕ್ಷಣೆ: ಆಧಾರ್ ಪ್ರಸ್ತುತ ಪ್ರಮುಖ ದಾಖಲೆಯಾಗಿದ್ದು, ದೇಶದಲ್ಲಿ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಫಿಂಗರ್ ಪ್ರಿಂಟ್ಸ್ , ಐರಿಸ್ ಸ್ಕ್ಯಾನ್, ಫೋಟೋ ಸೇರಿದಂತೆ ಆಧಾರ್ ಕಾರ್ಡ್‌ನಲ್ಲಿ ನಮ್ಮ ವೈಯಕ್ತಿಕ ದಾಖಲೆಗಳು ಇರುತ್ತದೆ. ಹೀಗಾಗಿ ಆಧಾರ್ ಕಾರ್ಡ್ ರಕ್ಷಣೆ ಮಾಡುವುದು ಮುಖ್ಯವಾಗಿದೆ. ಆಧಾರ್ ಮಾಹಿತಿಯನ್ನು ರಕ್ಷಿಸಲು ಮತ್ತು ಅಂತಹ ವಂಚನೆಗೆ ಬಲಿಯಾಗುವುದನ್ನು ತಡೆಯಲು, ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಬಯೋಮೆಟ್ರಿಕ್ ಲಾಕ್ ಮಾಡಬೇಕು: ಬಳಕೆದಾರರಿಗೆ ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು ಹಾಗೂ ಅನ್‌ಲಾಕ್ ಮಾಡಲು ಅವಕಾಶ ನೀಡಲಾಗಿದೆ.ಇದರಿಂದಾಗಿ ಆಧಾರ್ ಕಾರ್ಡ್‌ದಾರರ ಬಯೋಮೆಟ್ರಿಕ್ ಡೇಟಾ ಸುರಕ್ಷತೆ ನಡೆಸ ಬಹುದು. ಆಧಾರ್ ಕಾರ್ಡ್ ಅನ್ನು ಹೊಂದಿರುವವರು ಈ ಸೇವೆಯ ಪ್ರಯೋಜನವನ್ನು ಪಡೆಯಬಹುದು. ಈ ಪೀಚರ್ ಆಧಾರ್ ಕಾರ್ಡ್‌ದಾರರಿಗೆ ಬಯೋಮೆಟ್ರಿಕ್ ಡೇಟಾವನ್ನು ರಕ್ಷಣೆ ಮಾಡಲು ಅವಕಾಶ ನೀಡುತ್ತದೆ. ಬಳಕೆದಾರರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಲು ಅಧಿಕೃತ ಯುಐಡಿಎಐ ವೆಬ್‌ಸೈಟ್ ಅನ್ನು ಬಳಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಅನಧಿಕೃತ ದೃಢೀಕರಣಕ್ಕಾಗಿ ಬಳಕೆದಾರರ ಬೆರಳಚ್ಚುಗಳು ಮತ್ತು ಇತರ ಬಯೋಮೆಟ್ರಿಕ್ ಮಾಹಿತಿ ದುರ್ಬಳಕೆಯಾಗದಂತೆ ಇದು ತಡೆಯುತ್ತದೆ.
-ಡಿ.ಶ್ರೀಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.