Gaza: ಇನ್ನು ಗ್ರೌಂಡ್ ಆಪರೇಷನ್?- ಗಾಜಾ ಮೇಲೆ ಭೂಮಿ ಮೂಲಕ ಆಕ್ರಮಣಕ್ಕೆ ಇಸ್ರೇಲ್ ಸಿದ್ಧತೆ
Team Udayavani, Oct 12, 2023, 10:17 PM IST
ಟೆಲ್ ಅವಿವ್: ಗಾಜಾ ಪಟ್ಟಿಯ ಮೇಲೆ ನಿರಂತರ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸುವ ಮೂಲಕ ಹಮಾಸ್ ದಾಳಿಗೆ ಪ್ರತೀಕಾರ ತೀರಿಸುತ್ತಿರುವ ಇಸ್ರೇಲ್, ಈಗ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿ ಗಾಜಾದ ಜನರಿಗೆ ನರಕ ತೋರಿಸಲು ಮುಂದಾಗಿದೆ!
ಕಟ್ಟಡಗಳ ಅವಶೇಷಗಳ ನಡುವೆ, ಊಟ-ನೀರಿಲ್ಲದೇ, ಗಾಯಕ್ಕೆ ಚಿಕಿತ್ಸೆಯೂ ಇಲ್ಲದೆ ಕಗ್ಗತ್ತಲಲ್ಲೇ ರಾತ್ರಿಗಳನ್ನು ಕಳೆಯುತ್ತಿರುವ ಗಾಜಾದ ಜನರು ಇಲ್ಲಿಯವರೆಗೆ ಇಸ್ರೇಲ್‌ನಿಂದ ವೈಮಾನಿಕ ದಾಳಿಯನ್ನಷ್ಟೇ ಎದುರಿಸಿದ್ದರು. ಆದರೆ, ಈಗ ಇಸ್ರೇಲ್ ಸೇನೆಯು “ಗ್ರೌಂಡ್ ಆಪರೇಷನ್’ ಅಂದರೆ ಭೂ ಆಕ್ರಮಣ ನಡೆಸಲು ಚಿಂತನೆ ನಡೆಸಿದೆ. ಇನ್ನೂ ಸರ್ಕಾರದಿಂದ ಇದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ. ಸಿಕ್ಕಿದ್ದೇ ಆದಲ್ಲಿ ಗಾಜಾದ ಮನೆ ಮನೆಗೆ ನುಗ್ಗಿ ಸೇನೆ ದಾಳಿ ಆರಂಭಿಸಲಿದೆ. ಆಗ ಸಾವು-ನೋವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಭೀತಿಯಿದೆ.
ಇದೇ ವೇಳೆ, ಅಂಗಡಿಗಳಲ್ಲಿನ ಅವಶ್ಯಕ ವಸ್ತುಗಳು ಖಾಲಿ ಆಗುವುದರೊಳಗಾಗಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳೋಣ ಎಂದು ಗಾಜಾದ ಜನರು ದಿನಸಿ ಅಂಗಡಿಗಳು, ಬೇಕರಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಇನ್ನೊಂದೆಡೆ, ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ವಿದ್ಯುತ್ ಕೂಡ ಇಲ್ಲದ ಕಾರಣ ಇನ್‌ಕುÂಬೇಟರ್‌ಗಳಲ್ಲಿರುವ ನವಜಾತ ಶಿಶುಗಳು ಮತ್ತು ಐಸಿಯುನಲ್ಲಿರುವ ರೋಗಿಗಳ ಜೀವಕ್ಕೆ ಅಪಾಯ ಉಂಟಾಗಿದೆ. ಕಿಡ್ನಿ ಡಯಾಲಿಸಿಸ್, ಎಕ್ಸ್ ರೇ ಪ್ರಕ್ರಿಯೆಗಳೇ ನಡೆಯುತ್ತಿಲ್ಲ. ಕರೆಂಟ್ ಇಲ್ಲದೇ ಆಸ್ಪತ್ರೆಗಳೆಲ್ಲ ಶವಾಗಾರಗಳಾಗಿ ಬದಲಾಗುವ ಅಪಾಯ ಹೆಚ್ಚಿದೆ ಎಂದು ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ ಕಳವಳ ವ್ಯಕ್ತಪಡಿಸಿದೆ.
ನುಚ್ಚುನೂರು ಮಾಡುವ ಶಪಥ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಉಗ್ರರನ್ನು ಐಸಿಸ್‌ಗೆ ಹೋಲಿಸಿದ್ದು, “ಐಸಿಸ್ ಅನ್ನು ಹೇಗೆ ನಿರ್ಮೂಲನೆ ಮಾಡಿದೆವೋ, ಅದೇ ರೀತಿ ಹಮಾಸ್ ಅನ್ನೂ ನುಚ್ಚುನೂರು ಮಾಡುತ್ತೇವೆ’ ಎಂದು ಶಪಥ ಮಾಡಿದ್ದಾರೆ. ಅಮೆರಿಕದ ವಿದೇಶಾಂಗ ಸಚಿವ ಬ್ಲಿಂಕನ್ ಅವರ ಇಸ್ರೇಲ್ ಭೇಟಿ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಹಮಾಸ್ ಉಗ್ರರು ಸಣ್ಣ ಮಕ್ಕಳನ್ನೂ ಬಿಡುತ್ತಿಲ್ಲ. ಅವರು ಇಷ್ಟೊಂದು ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಮಕ್ಕಳು ಮತ್ತು ಮಹಿಳೆಯರ ಕೈಗಳಿಗೆ ಕೋಳ ತೊಡಿಸಿ ಹತ್ಯೆಗೈಯ್ಯಲಾಗುತ್ತಿದೆ. ಗಾಜಾ ಪಟ್ಟಿಯ ದೃಶ್ಯಗಳು “ಝೋಂಬಿ ಸಿನಿಮಾ’ ದೃಶ್ಯಗಳಂತೆ ಗೋಚರಿಸುತ್ತಿವೆ ಎಂದು ಇಸ್ರೇಲ್ ರಕ್ಷಣಾ ಪಡೆ ಆರೋಪಿಸಿದೆ.
ಈವರೆಗೆ ಹಮಾಸ್ ದಾಳಿಗೆ ಇಸ್ರೇಲ್‌ನಲ್ಲಿ 22 ಅಮೆರಿಕನ್ನರು ಬಲಿಯಾಗಿದ್ದು, 17 ಮಂದಿ ನಾಪತ್ತೆಯಾಗಿದ್ದಾರೆ. ಈ ಮಧ್ಯೆ, ಹಮಾಸ್ ಜತೆ ನಂಟಿರುವ ನೂರಾರು ಖಾತೆಗಳನ್ನು “ಎಕ್ಸ್'(ಟ್ವಿಟರ್)ನಿಂದ ತೆಗೆದುಹಾಕಲಾಗಿದೆ ಎಂದು ಸಂಸ್ಥೆಯ ಸಿಇಒ ಲಿಂಡಾ ಯಕ್ಕಾರಿನೋ ಹೇಳಿದ್ದಾರೆ.
ರಾಯಭಾರ ಕಚೇರಿಗೆ ಥ್ಯಾಂಕ್ಸ್:
ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆದ ದಿನ ಇಸ್ರೇಲ್‌ನಲ್ಲಿದ್ದ ಕೇರಳದ ಯಾತ್ರಿಗಳು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಯುದ್ಧ ಭೂಮಿಯಿಂದ ಪಾರಾಗುವಲ್ಲಿ ನೆರವಾದ ಭಾರತದ ರಾಯಭಾರ ಕಚೇರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಹಮಾಸ್‌ನವರು ಪ್ಯಾಲೆಸ್ತೀನಿಗಳೂ ಅಲ್ಲ, ಇಸ್ಲಾಂ ಧರ್ಮ ಅನುಸರಿಸುವವರೂ ಅಲ್ಲ. ಅವರೆಲ್ಲರೂ ಬ್ರೈನ್ ವಾಶ್ ಆದವರು. ಅಂಥವರಷ್ಟೇ ಮಕ್ಕಳು ಮರಿಗಳೆಲ್ಲದೆ ಬೀಭತ್ಸ ಕ್ರೌರ್ಯ ಮೆರೆಯಲು ಸಾಧ್ಯ. ಹಮಾಸ್ ಅನ್ನು ಈ ಭೂಮಿಯಿಂದಲೇ ನಿರ್ನಾಮ ಮಾಡಿ.
– ರಾಮ್ ಮಾಲ್ಕಾ, ಭಾರತದಲ್ಲಿದ್ದ ಇಸ್ರೇಲ್‌ನ ಮಾಜಿ ರಾಯಭಾರಿ
ಬಿಡುಗಡೆ ಮಾಡಿದ್ರೆ ಟ್ಯಾಪ್ ಓಪನ್:
ಇದೇ ವೇಳೆ, ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ನೀರಿನ ನಲ್ಲಿಗಳನ್ನು ಓಪನ್ ಮಾಡುವುದಿಲ್ಲ ಎಂದೂ ಇಸ್ರೇಲ್ ಎಚ್ಚರಿಸಿದೆ. ಈಗಾಗಲೇ ಗಾಜಾಗೆ ಕುಡಿಯುವ ನೀರು, ಆಹಾರ ಸೇರಿದಂತೆ ಎಲ್ಲ ಅವಶ್ಯಕ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದ್ದು, ಅಲ್ಲಿನ ಜನರು ಹಸಿವಿನಿಂದಲೇ ಸಾಯುವಂಥ ಸ್ಥಿತಿ ಎದುರಾಗಿದೆ. ಹೀಗಾಗಿ, ಇಂಥದ್ದೊಂದು ಸಂದೇಶ ರವಾನಿಸಿರುವ ಇಸ್ರೇಲ್, ಒತ್ತೆಯಾಳುಗಳೆಲ್ಲರೂ ಮರಳಿದ ಬಳಿಕವೇ ನೀರಿನ ಟ್ಯಾಪ್ ಓಪನ್ ಆಗುತ್ತದೆ, ವಿದ್ಯುತ್ ಸ್ವಿಚ್ ಆನ್ ಆಗುತ್ತದೆ, ಇಂಧನದ ಟ್ರಕ್ ಒಳಗೆ ಪ್ರವೇಶಿಸುತ್ತದೆ ಎಂದು ಹೇಳಿದೆ.
ಸಿರಿಯಾದ ಏರ್‌ಪೋರ್ಟ್ ಮೇಲೆ ದಾಳಿ
ಗುರುವಾರ ಸಿರಿಯಾದ ಎರಡು ಪ್ರಮುಖ ಏರ್‌ಪೋರ್ಟ್‌ಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್‌ನ ಕ್ಷಿಪಣಿಗಳು ಅಪ್ಪಳಿಸಿವೆ. ಇದರಿಂದ ರನ್‌ವೇಗಳಿಗೆ ಹಾನಿಯಾಗಿವೆ. ಸಿರಿಯಾದಿಂದ ಹೊರಡುವ ಮತ್ತು ಬರುವ ಎಲ್ಲ ವಿಮಾನಗಳನ್ನೂ ರದ್ದು ಮಾಡಲಾಗಿದೆ ಎಂದು ಸಿರಿಯಾ ಸರ್ಕಾರ ತಿಳಿಸಿದೆ.
“ಉಗ್ರ ನನ್ನನ್ನು ಕೊಲ್ಲುತ್ತಾನೆ”
ಇಸ್ರೇಲಿನ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುವಾಗ ಎಷ್ಟೋ ಮಂದಿಗೆ, ಆ ಕ್ಷಣಕ್ಕೆ ನೆನಪಿನ ಪಲ್ಲಟದಲ್ಲಿ ಸುಳಿದಿದ್ದು ಅವರ ಕುಟುಂಬಗಳು ಮಾತ್ರ! ಈ ಸಾಲಿಗೆ ಯೋಧರೂ ಹೊರತಲ್ಲ. ಹಮಾಸ್ ಉಗ್ರರ ಗುಂಡೇಟಿಗೆ ಉಸಿರು ಚೆಲ್ಲಿದ ಮಹಿಳಾ ಸೈನಿಕರೊಬ್ಬರು ತನ್ನ ಮನೆಯವರಿಗೆ ಕೊನೆಯ ಸಂದೇಶ ಕಳುಹಿಸಿದ್ದು, ಅದರಲ್ಲಿ ” ನನ್ನ ಕಣ್ಣೆದುರಿರುವ ಉಗ್ರನೀಗ ನನ್ನನ್ನು ಕೊಲ್ಲುತ್ತಾನೆ! ಅದಕ್ಕೂ ಮುಂಚೆ ಹೇಳುತ್ತಿದ್ದೇನೆ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಬರೆದಿದ್ದಾರೆ. ತಲೆಗೆ ತೀವ್ರವಾಗಿ ಪೆಟ್ಟುಬಿದ್ದು, ಬಳಿಕ ಜಾಗವೊಂದರಲ್ಲಿ ಅವಿತು ಆಕೆ ಈ ಸಂದೇಶ ಕಳುಹಿಸಿದ್ದಾರೆ. ಕೂಗಳತೆಯಲ್ಲಿ ಉಗ್ರನಿರುವ ಬಗ್ಗೆ ವಿಷಯ ತಿಳಿಸಿದ್ದ ಆಕೆ ಬಳಿಕ ಉಗ್ರರ ಗುಂಡೇಟಿಗೆ ಬಲಿಯಾಗಿ ಜೀವತೆತ್ತಿದ್ದಾರೆ.
ವಿಶ್ವಸಂಸ್ಥೆ ವರದಿ
ಗಾಜಾದಲ್ಲಿ ಸಾವಿನ ಸಂಖ್ಯೆ – 1,100
ಮೃತ ಮಹಿಳೆಯರು- 171
ಮೃತಪಟ್ಟ ಮಕ್ಕಳು- 326
ಗಾಯಾಳುಗಳು- 5,000
ನಿರಾಶ್ರಿತರಾದವರು- 3 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.