World Cup 2023; ಹಿಂದೂ ನಿಂದನೆ ಟ್ವೀಟ್ ಗೆ ಕ್ಷಮೆ ಕೋರಿದ ಪಾಕ್ ನಿರೂಪಕಿ ಜೈನಾಬ್ ಅಬ್ಬಾಸ್
Team Udayavani, Oct 13, 2023, 1:09 PM IST
ಹೊಸದಿಲ್ಲಿ: 2023 ರ ಕ್ರಿಕೆಟ್ ವಿಶ್ವಕಪ್ ವರದಿಗಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರು ಕೆಲವು ವರ್ಷಗಳ ಹಿಂದೆ ಮಾಡಿದ ವಿವಾದಾತ್ಮಕ ಟ್ವೀಟ್‌ಗಳ ಕಾರಣದಿಂದ ಭಾರೀ ಟ್ರೋಲ್ ಗಳಿಗೆ ಒಳಗಾಗಿದ್ದರು. ಇದಾದ ಬಳಿಕ ಜೈನಬ್ ದೇಶವನ್ನು ತೊರೆದಿದ್ದಾರೆ ಎಂಬ ವರದಿಗಳು ನಂತರ ಹೊರಬಂದವು.
ಆದರೆ, ಜೈನಬ್ ಭಾರತವನ್ನು ಏಕೆ ತೊರೆದರು ಮತ್ತು ಅವರು ಪಾಕಿಸ್ತಾನಕ್ಕೆ ಮರಳಿದರೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಭಾರತೀಯ ಅಧಿಕಾರಿಗಳು ಆಕೆಯನ್ನು ಗಡೀಪಾರು ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿತ್ತು. ಅಲ್ಲದೆ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ ನಂತರ ಆಕೆ ಪಾಕ್ ಗೆ ಓಡಿಹೋಗಿದ್ದಾರೆ ಎಂದೂ ವರದಿಗಳಾಗಿದ್ದವು. ಇದೀಗ ಸ್ವತಃ ಜೈನಾಬ್ ಅಬ್ಬಾಸ್ ಪರಿಸ್ಥಿತಿಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ವಿವಾದಾತ್ಮಕ ಪೋಸ್ಟ್ ಗಳ ಬಗ್ಗೆ ಜೈನಾಬ್ ಅವರು ಒಪ್ಪಿಕೊಂಡರು ಆದರೆ ಅದಕ್ಕೆ ಇಂದು ಯಾವುದೇ ಬೆಲೆಯಿಲ್ಲ ಎಂದು ಹೇಳಿದ್ದಾರೆ. ಪೋಸ್ಟ್‌ನಿಂದ ನೋಯಿಸಿದವರಿಗೆ ಕ್ಷಮೆಯಾಚಿಸಿದ ಜೈನಾಬ್ ಅವರು, ಪೋಸ್ಟ್‌ಗಳಿಂದ ಉಂಟಾದ ನೋವನ್ನು ‘ಅರ್ಥಮಾಡಿಕೊಂಡಿದ್ದಾರೆ’ ಮತ್ತು ‘ಆಳವಾಗಿ ವಿಷಾದಿಸುತ್ತೇನೆ’ ಎಂದು ಹೇಳಿದರು.
ಐಸಿಸಿಗಾಗಿ ಕಾರ್ಯಕ್ರಮಗಳನ್ನು ಕವರ್ ಮಾಡುವ ಪಾಕಿಸ್ತಾನದ ಟಿವಿ ನಿರೂಪಕಿ ಜೈನಾಬ್, ಆಕೆಯನ್ನು ಭಾರತ ತೊರೆಯಲು ಅಥವಾ ಗಡೀಪಾರು ಮಾಡಲು ಹೇಳಲಿಲ್ಲ ಎಂದು ಹೇಳಿದರು.
— zainab abbas (@ZAbbasOfficial) October 12, 2023
“ನನ್ನ ವಾಸ್ತವ್ಯದ ಸಮಯದಲ್ಲಿ ಪ್ರತಿಯೊಬ್ಬರೊಂದಿಗಿನ ನನ್ನ ಒಡನಾಟವು ನಿರೀಕ್ಷಿಸಿದಂತೆ ಉತ್ತಮವಾಗಿತ್ತು. ನನ್ನನ್ನು ತೊರೆಯಲು ಕೇಳಲಿಲ್ಲ ಅಥವಾ ನನ್ನನ್ನು ಗಡೀಪಾರು ಮಾಡಲಿಲ್ಲ. ಆದರೆ, ಆನ್‌ಲೈನ್ ನಲ್ಲಿ ಪ್ರತಿಕ್ರಿಯೆಯಿಂದ ನಾನು ಭಯಭೀತಳಾಗಿದ್ದೆ. ನನ್ನ ಸುರಕ್ಷತೆಗೆ ತಕ್ಷಣದ ಬೆದರಿಕೆ ಇಲ್ಲದಿದ್ದರೂ, ಗಡಿಯ ಎರಡೂ ಬದಿಗಳಿಂದ ನನ್ನ ಕುಟುಂಬ ಮತ್ತು ಸ್ನೇಹಿತರು ಕಾಳಜಿ ವಹಿಸಿದ್ದರು. ನನಗೆ ನನ್ನದೆ ಅವಕಾಶ ಬೇಕಿತ್ತು” ಎಂದು ಜೈನಾಬ್ ಬರೆದುಕೊಂಡಿದ್ದಾರೆ.
ಜೈನಾಬ್ ಅವರ ಪೋಸ್ಟಿಗ್ ಭಾರತೀಯ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ಅವರ ಕ್ಷಮೆಯನ್ನು ಒಪ್ಪಿಕೊಂಡರೆ, ಕೆಲವರು ಇದು ಸಾಕಾಗದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.