Israel-Hamas War ಇಸ್ರೇಲ್‌ನಿಂದ ದ. ಕ. ಮೂಲದ ಇಬ್ಬರು ತಾಯ್ನಾಡಿಗೆ
Team Udayavani, Oct 13, 2023, 11:22 PM IST
ಮಂಗಳೂರು: ಯುದ್ಧಗ್ರಸ್ತ ಇಸ್ರೇಲ್‌ನಿಂದ ಆಪರೇಷನ್ ಅಜಯ್ ಅಡಿಯಲ್ಲಿ ಮೊದಲ ವಿಮಾನ ಶುಕ್ರವಾರ ದಿಲ್ಲಿಗೆ ಬಂದಿದ್ದು, ಅದರಲ್ಲಿ ಇಬ್ಬರು ದಕ್ಷಿಣ ಕನ್ನಡ ಮೂಲದವರು ಇರುವ ಬಗ್ಗೆ ಮಾಹಿತಿ ಲಭಿಸಿದೆ.
ಇಸ್ರೇಲ್‌ನಲ್ಲಿರುವ ಹೆಚ್ಚಿನ ಮಂದಿ ಉದ್ಯೋಗಸ್ಥರಾಗಿದ್ದು, ಅವರು ಭಾರತಕ್ಕೆ ಮರಳುವ ಸಾಧ್ಯತೆ ಕಡಿಮೆ. ಬದಲಿಗೆ ಪ್ರವಾಸಿಗಳಾಗಿ ಹೋದವರು, ವಿದ್ಯಾರ್ಥಿಗಳು, ಉನ್ನತ ಮಟ್ಟದ ಉದ್ಯೋಗದಲ್ಲಿರುವವರು ಮಾತ್ರವೇ ಮರಳುವಂತೆ ಕಾಣುತ್ತಿದೆ.
ಲಭ್ಯ ಮಾಹಿತಿಯಂತೆ ಐವರು ಕನ್ನಡಿಗರು ಮೊದಲ ವಿಮಾನದಲ್ಲಿ ಏರ್‌ಲಿಫ್ಟ್ ಆಗಿದ್ದು, ಅದರಲ್ಲಿ ಮಂಗಳೂರಿನ ಜಯೇಶ್ ಹಾಗೂ ಅಶ್ವಿನಿ ಎಂಬವರು ತಾಯ್ನಾಡಿಗೆ ಮರಳಿದ್ದಾರೆ. ಇಸ್ರೇಲ್‌ನ ಅರಿಯಲ್ ಎಂಬಲ್ಲಿ ಸಂಶೋಧಕರಾಗಿದ್ದ ಅವರು ಮರಳಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಂಗಳೂರಿಗೆ ಮರಳುವ ಬದಲು ಇವರಿಬ್ಬರೂ ದಿಲ್ಲಿಯಿಂದ ಮುಂಬಯಿಗೆ ಸಂಬಂಧಿಕರಲ್ಲಿಗೆ ತೆರಳಿರುವುದಾಗಿ ತಿಳಿದುಬಂದಿದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಜಿಲ್ಲೆಗೆ ಇಸ್ರೇಲ್‌ನಿಂದ ಯಾರೂ ಮರಳಿರುವ ಮಾಹಿತಿ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.