KS.Eshwarappa: ರಾಗಿಗುಡ್ಡ ಪ್ರಕರಣವನ್ನು ಎನ್ಐಎಗೆ ಕೊಡಬೇಕು,ಇದೊಂದು ಪೂರ್ವ ನಿಯೋಜಿತ ಕೃತ್ಯ
"ರಾಗಿಗುಡ್ಡ ಘಟನೆಗೆ ಗೃಹ ಸಚಿವರು ನೇರವಾಗಿ ಬೆಂಬಲ ಕೊಟ್ಟಿದ್ದಾರೆ"
Team Udayavani, Oct 14, 2023, 2:34 PM IST
K.S.Eshwarappa: ರಾಗಿಗುಡ್ಡ ಪ್ರಕರಣವನ್ನು ಎನ್ಐಎಗೆ ಕೊಡಬೇಕು,ಇದೊಂದು ಪೂರ್ವ ನಿಯೋಜಿತ ಕೃತ್ಯ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ನಡೆದ ಮುಸ್ಲಿಂ ಗೂಂಡಾಗಿರಿ ಪೂರ್ವ ನಿಯೋಜಿತ ಕೃತ್ಯ. ರಾಗಿಗುಡ್ಡ ಪ್ರಕರಣವನ್ನು ಎನ್ಐಎಗೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪಿಎಫ್ಐ ಈಗಾಗಲೇ ಬ್ಯಾನ್ ಆಗಿದೆ. ಆ ಸಂಘಟನೆಯ ಏಳು ಜನ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಏಳು ಜನರಲ್ಲಿ ಮೂರು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನೂ ನಾಲ್ಕು ಜನ ತಪ್ಪಿಸಿಕೊಂಡಿದ್ದಾರೆ. ಅವರನ್ನು ಹುಡುಕುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಈ ವರದಿ ಗುಪ್ತಚರ ಇಲಾಖೆ ಮೂಲಕ ಸರ್ಕಾರಕ್ಕೆ ಹೋಗಿದೆ. ತಕ್ಷಣ ಶಿವಮೊಗ್ಗ ಎಸ್ಪಿ ಇಷ್ಟು ಜನರ ಮೇಲೆ ಚಾರ್ಜ್ ಶೀಟ್ ಹಾಕಿ. ಎನ್ಐಎ ಕೊಡುವ ತನಕ ಗಂಭೀರ ತನಿಖೆ ನಡೆಸಬೇಕು. ಇನ್ನೂ ಯಾರು ತಪ್ಪಿಸ್ಥರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಗೂಂಡಾಗಳು ನಡೆದುಕೊಂಡ ರೀತಿ ನೋಡಿದರೇ ರಾಜ್ಯ ಸರ್ಕಾರದ ಕೈವಾಡ ಇದೆ ಅಂತ ಅನುಮಾನ ಬರುತ್ತಿದೆ. ಅನೇಕ ಪೊಲೀಸರಿಗೂ ಗಾಯ ಆಗಿದೆ. ಆದರೆ ಅದನ್ನು ಮುಚ್ಚಿಡಲು ಕೇವಲ ಇಬ್ಬರು ಮೂರು ಜನರನ್ನು ಮಾತ್ರ ತೋರಿಸಿದ್ದಾರೆ. ಪೊಲೀಸರಿಗೆ ಪೆಟ್ಟಾಗಿರುವುದನ್ನು ರಾಜ್ಯ ಸರ್ಕಾರ ಮುಚ್ಚಿಡುವ ಕೆಲಸ ಆಗಿದೆ. ಎಸ್ಪಿನೇ ಗೂಂಡಾಗಳಿಂದ ತಪ್ಪಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಇದನ್ನೂ ಓದಿ: Thekkatte: ಕಳ್ಳರ ಜಾಡು ಹಿಡಿದು ಬೆನ್ನಟ್ಟಿ ಬಂದ ಅಟೋ ಚಾಲಕರ ತಂಡ
ಮಚ್ಚು,ಲಾಂಗು ಹಿಡಿದು ಅಲ್ಲಿನ ಹುಡುಗರು ಓಡಾಡಿದ್ದಾರೆ. ರಾಗಿಗುಡ್ಡ ಘಟನೆಗೆ ಗೃಹ ಸಚಿವರು ನೇರವಾಗಿ ಬೆಂಬಲಕೊಟ್ಟಿದ್ದಾರೆ. ಹಾಗಾಗಿ ಕೂಡಲೇ ಗೃಹ ಸಚಿವರು ರಾಜಿನಾಮೆ ನೀಡಬೇಕು. ದೇಶದ್ರೋಹಿ ಔರಂಗಜೇಬನ ಪೋಟೋ ಇಟ್ಟು ಸಾಬ್ರ ಸಾಮ್ರಾಜ್ಯ ಅನ್ನುವ ಕಟೌಟ್ ಹಾಕಿದ್ದಾರೆ. ಇಷ್ಟಾದರೂ ಪೊಲೀಸರ ಕಣ್ಣಿಗೆ ಇವು ಕಂಡಿಲ್ಲ. ಅಮಾಯಕ ಹಿಂದೂ ಯುವಕರ ಬಂಧನ ಆಗಿದೆ. ಶಿವಮೊಗ್ಗ ಭಯೋತ್ಪಾದಕ ತಾಣವಾಗುತ್ತಿದೆ. ಸಿಎಂ ಮಗನ ಕೊಲೆ ಹಾಗೂ ಡಿಸಿಎಂ ತಮ್ಮ ನ ಕೊಲೆ ಆದ್ರೆ ಏನು ಮಾಡುತ್ತಿದ್ದಿರಿ ಅಂತ ಅವತ್ತು ಹೇಳಿದ್ದೆ. ಇವತ್ತು ಇದನ್ನೆ ಪುನರುಚ್ಚಿಸುತ್ತೇನೆ ಎಂದರು.
ರಾಗಿಗುಡ್ಡದಲ್ಲಿ ಕೆಲವು ಮನೆಗಳಲ್ಲಿ ಇಪ್ಪತ್ತು,ಮೂವತ್ತು ಮಚ್ಚು ಸಿಕ್ಕಿದೆ. ಶಿವಮೊಗ್ಗದ ಮುಖಾಂತರ ಮತ್ತೆ ರಾಷ್ಟ್ರದ್ರೋಹಿ ಚಟುವಟಿಕೆ ನಡೆಯುತ್ತಿದೆ ಎಂದು ಹೇಳಿದರು.
ಭ್ರಷ್ಟಾಚಾರದ ಹಣದಲ್ಲಿ ಈ ಸರ್ಕಾರ ತೊಡಗಿಕೊಂಡಿದೆ. ರಾಜ್ಯದ ಜನರ ಹೀತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ವಿದ್ಯುತ್ ಇಲ್ಲ,ಕುಡಿಯಲು ನೀರಿಲ್ಲ. ಸಿಎಂ,ಡಿಸಿಎಂ ರಾಜ್ಯದ ಹಣ ಲೂಟಿ ಮಾಡುತ್ತಿದ್ದಾರೆ. ಇಬ್ಬರೇ ಲೂಟಿ ಮಾಡುತ್ತಿದ್ದಾರೆ ನಮಗೆ ಸಿಗುತ್ತಿಲ್ಲ ಅಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ ಎಂದರು.
ಮಾಜಿ ಕಾಂಗ್ರೆಸ್ ಕಾರ್ಪೊರೇಟ್ ಮನೆಯಲ್ಲಿ 42 ಕೋಟಿ ಹಣ ಸಿಕ್ಕಿದೆ. ಇದನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಇರುವ ಕಡೆ ಮಾತ್ರ ಐಟಿ ರೇಡ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಎಐಸಿಸಿಗೆ ಕೆಪಿಸಿಸಿ ಎಟಿಎಂ ಆಗುತ್ತದೆ ಅಂತ ಆಗಲೇ ಕೇಂದ್ರದ ನಾಯಕರು ಹೇಳಿದ್ದರು. ಕೆಂಪಣ್ಣ ಆಗ ನಮ್ಮ ಮೇಲೆ ಆರೋಪ ಮಾಡಿದ್ದರು. ಈಗ ಯಾಕೇ ಮಾತಾಡುತ್ತಿಲ್ಲ. ಈ ಹಣ ಸಿಎಂಗೆ ಸೇರಿದ್ದಾ ಡಿಸಿಎಂಗೆ ಸೇರಿದ್ದಾ? ಈ ಪ್ರಕರಣವನ್ನು ಸಿಬಿಐಗೆ ಕೋಡಬೇಕು. ಕೆಂಪಣ್ಣನನ್ನು ಅರೆಸ್ಟ್ ಮಾಡಿ ತನಿಖೆ ಮಾಡಬೇಕು . ಆಗ 42 ಕೋಟಿ ಯಾರದ್ದು ಅಂತ ಗೊತ್ತಾಗುತ್ತದೆ. ಒಂದು ಘಟನೆ ಹೊರಗೆ ಬಂದಿದೆ ಇನ್ನೂ ಎಷ್ಟು ಘಟನೆಗಳಿರಬಹುದು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.