Kulasekhara- Sanoor ಇನ್ನೂ ಅನಿಶ್ಚಿತತೆಯಲ್ಲಿ ರಾ.ಹೆ. 169 ಭೂಮಾಲಕರು
Team Udayavani, Oct 15, 2023, 7:06 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ- ಸಾಣೂರು ಚತುಷ್ಪಥ ಕಾಮಗಾರಿ ಗಾಗಿ ಭೂಮಿ ಕಳೆದುಕೊಂಡವರ ಸ್ಥಿತಿ ಇನ್ನೂ ಅನಿಶ್ಚಿತತೆಯಲ್ಲೇ ಮುಂದುವರಿದಿದೆ.
ಎರಡು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಕಚೇರಿ ಮಂಭಾಗದಲ್ಲಿ ಭೂ ಮಾಲಕರು ಒಂದು ವಾರ ಪ್ರತಿಭಟನೆಯನ್ನು ನಡೆಸಿ ತಮ್ಮ ಅಳಲು, ಅಹವಾಲುಗಳನ್ನು ಹೇಳಿ ಕೊಂಡಿದ್ದರು. ಇದಕ್ಕೆ ಸಮರ್ಪಕವಾಗಿ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿರಲಿಲ್ಲ.
ಜಿಲ್ಲಾಧಿಕಾರಿಯವರು ಆ. 30ರಂದು ಪ್ರಾಧಿಕಾರದ ಅಧಿಕಾರಿ ಗಳು, ಭೂಮಾಲಕರ ಹೋರಾಟ ಸಮಿತಿಯ ಸದಸ್ಯರನ್ನು ಕರೆಸಿ ಮಾತುಕತೆ ನಡೆಸಿದ್ದರು. ಅಲ್ಲದೆ ಪ್ರಾಧಿಕಾರದ ಅಧಿಕಾರಿಗಳಿಗೆ ಇನ್ನು ಮುಂದಾದರೂ ತ್ವರಿತ ಗತಿಯಲ್ಲಿ ಪ್ರಕ್ರಿಯೆಯನ್ನು ಮುಂದುವರಿಸಿ, ಭೂಸ್ವಾಧೀನ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿಯ ಕೆಲಸವ ನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕೆಂದು ಹೇಳಿದ್ದರು.
ವಿಶೇಷ ಭೂಸ್ವಾಧೀನ ಅಧಿಕಾರಿ ಯವರು ಆ ಪ್ರಕಾರ ತೆಂಕ ಮಿಜಾರು, ತೆಂಕ ಎಡಪದವು, ಬಡಗ ಎಡಪದವು, ತೆಂಕ ಉಳಿಪಾಡಿ, ತಿರುವೈಲು ಮತ್ತು ಕುಡುಪು ಗ್ರಾಮಗಳ 3ಜಿ ಅವಾರ್ಡ್ ಸಿದ್ಧಪಡಿಸಿ ಎನ್‌ಎಚ್‌ಎಐ ಯೋಜನಾಧಿಕಾರಿಗಳಿಗೆ ಕಳಿಸಿ ಐದಾರು ವಾರಗಳು ಕಳೆದಿವೆ. ಆದರೆ ಇದುವರೆಗೆ ಅದರಲ್ಲಿ ಯಾವ ಪ್ರಗತಿಯಾಗಿಲ್ಲ.
ಅದೇ ರೀತಿ, ಬೆಳುವಾಯಿ, ಮಾರ್ಪಾಡಿ, ಬಡಗಮಿಜಾರು ಮತ್ತು ಅಡೂರು ಗ್ರಾಮಗಳ ಭೂಮಾಲಕರು ಆರ್ಬಿಟ್ರೇಷನ್‌ಗಾಗಿ ಮನವಿ ಸಲ್ಲಿಸಿ ಇದಾಗಲೇ ಮೂರು ತಿಂಗಳು ಕಳೆದರೂ, ಆ ಪ್ರಕ್ರಿಯೆಯು ಇನ್ನೂ ಮುಂದುವರಿದಿಲ್ಲ. ಉಡುಪಿ ಜಿಲ್ಲೆ ವ್ಯಾಪ್ತಿಗೆ ಬರುವ ಸಾಣೂರಿನ ಭೂಮಾಲಕರು ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಆರ್ಬಿಟ್ರೇಷನಿಗೆ ಮನವಿ ಸಲ್ಲಿಸಿ ಐದು ತಿಂಗಳಾದರೂ, ಅದರ ನಿರ್ಣಯವೂ ಇನ್ನೂ ಬಂದಿಲ್ಲ.
ಹೈಕೋರ್ಟ್ ಆದೇಶ ಹೊರಡಿಸಿ ವರ್ಷದ ಮೇಲಾದರೂ ಹೆದ್ದಾರಿ ಪ್ರಾಧಿಕಾರದವರು ಇನ್ನೂ ಯಾವುದೇ
ಕ್ರಮವನ್ನು ಕೈಗೊಂಡಿಲ್ಲ ಎಂದು ಭೂಮಾಲಕರು ಕಳವಳ ವ್ಯಕ್ತಪಡಿ ಸಿದ್ದಾರೆ.
ಎಲ್ಲ ದಾಖಲೆಗಳೂ ಸರಿ ಇದ್ದು ಅವಾರ್ಡ್‌ಗಾಗಿ ಹೋಗುವ ಗ್ರಾಮಸ್ಥರಲ್ಲಿ ಎನ್‌ಎಚ್‌ಎಐಯ ಎಂಜಿನಿಯರ್‌ವೊಬ್ಬರು ಒಟ್ಟು ಪರಿಹಾರದ ಶೇ. 10 ಲಂಚ ಕೇಳಿದ್ದಾರೆ, ಇದನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಿದ್ದೇವೆ. ದೀಪಾವಳಿ ಒಳಗೆ ಎಲ್ಲರಿಗೂ ಪರಿಹಾರ ಸಿಗಲಿದೆ ಎಂಬ ಡಿಸಿಯವರ ಹಿಂದಿನ ಭರವಸೆಯನ್ನು ನಂಬಿ ಸದ್ಯ ಕುಳಿತಿದ್ದೇವೆ.
-ಮರಿಯಮ್ಮ ಥಾಮಸ್,
ಎನ್‌ಎಚ್ 169 ಭೂಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ
ಆರು ಗ್ರಾಮಗಳ 3ಜಿ ಅವಾರ್ಡ್ ಎಕ್ಸಾಮಿನೇಶನ್ ಕಮಿಟಿಯವರ ಪರಿಶೀಲನೆಯಲ್ಲಿದೆ, ಈ ಪ್ರಕ್ರಿಯೆಯ ಬಳಿಕ ಪ್ರಸ್ತಾವನೆ ಹೆದ್ದಾರಿ ಸಚಿವಾಲಯಕ್ಕೆ ಹೋಗಲಿದೆ, ಆದಷ್ಟೂ ಬೇಗನೆ ಪರಿಹಾರ ಸಿಗುವ ಪ್ರಯತ್ನ ಮಾಡಲಾಗುತ್ತದೆ.
– ಅಬ್ದುಲ್ಲ ಜಾವೇದ್ ಅಜ್ಮಿ,
ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.