![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 16, 2023, 7:37 AM IST
ಮೇಷ: ಅನುಕೂಲ ಪರಿಸ್ಥಿತಿ ನಿರ್ಮಾಣ. ಉದ್ಯೋಗದಲ್ಲಿ ಎಣಿಕೆಗೆ ಮೀರಿದ ಸಾಧನೆ. ಮೇಲಧಿಕಾರಿಗಳಿಂದ ಪ್ರಶಂಸೆ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ ನಿವಾರಣೆ.ಉತ್ಪನ್ನಗಳ ಗುಣಮಟ್ಟ ಸುಧಾರಿಸಿ ಗ್ರಾಹಕರ ಬಳಗ ವಿಸ್ತರಣೆ. ಸರಕಾರಿ ಕಚೇರಿಗಳಲ್ಲಿ ಕಾರ್ಯ ಸುಗಮ.
ವೃಷಭ: ಶುಭದಾಯಕ ದಿನ.ಉದ್ಯೋಗದಲ್ಲಿ ಉಲ್ಲೇಖಾರ್ಹ ಸಾಧನೆ. ದೇವತಾಕಾರ್ಯಗಳ ಸಂಭ್ರಮ. ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ. ಲಾಭ. ಕುಶಲಕರ್ಮಿಗಳಿಗೆ ಉತ್ತಮ ಆದಾಯ.
ಮಿಥುನ: ನಿತ್ಯವೂ ಸತ್ವಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಜನರಿಗೆ ಯಶಸ್ಸಿನ ಬಗ್ಗೆ ಆತಂಕ ಬೇಡ. ಉದ್ಯೋಗದಲ್ಲಿ ಹಂತಹಂತವಾಗಿ ಏಳಿಗೆ. ಅಸೂಯಾಪರರನ್ನು ನಿರ್ಲಕ್ಷಿಸಿ. ಸ್ವಂತ ಉದ್ಯಮದಲ್ಲಿ ನೌಕರರ ಕಡೆಯಿಂದ ಸಹಕಾರ. ಉತ್ಪನ್ನಗಳ ಗ್ರಾಹಕರ ಜಾಲ ವಿಸ್ತರಣೆ.
ಕರ್ಕಾಟಕ: ಸಕಾರಾತ್ಮಕ ಚಿಂತನೆಯಿಂದ ಬದುಕು ನಿರಾತಂಕ. ಧಾರ್ಮಿಕ ಕೇಂದ್ರದ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿಕೆ.ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಪ್ರತಿಭೆಗೆ ಪ್ರೋತ್ಸಾಹ. ಸ್ವಂತ ಉದ್ಯಮದ ಅಭಿವೃದ್ಧಿ ಸುಗಮ. ಕಟ್ಟಡ ನಿರ್ಮಾಣ, ಗಾರೆ, ಪೆಯಿಂಟಿಂಗ್ ಇತ್ಯಾದಿ ಕೆಲಸಗಳು ನಿಧಾನ.
ಸಿಂಹ: ಕಾರ್ಯಗಳೆಲ್ಲವೂ ಸುಗಮ. ಹೊಸ ಪದ್ಧತಿ ರೂಢಿಸಿಕೊಳ್ಳುವುದರಲ್ಲಿ ವಹಿಸಿದ ಮುತುವರ್ಜಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮದ ವಿಸ್ತರಣೆಗೆ ಪ್ರಯತ್ನ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ ವ್ಯಾಪಾರ.
ಕನ್ಯಾ: ಊರಿಗೆ ಊರೇ ಸಡಗರದಲ್ಲಿರುವಾಗ ಚಿಂತಿಸುತ್ತಾ ಕೂರುವುದು ಸಲ್ಲದು. ಉದ್ಯೋಗ ರಂಗ ಸ್ಥಿರ. ಸ್ವಂತ ಒಡೆತನದ ಉದ್ಯಮಕ್ಕೆ ಪೂರಕವಾದ ವಾತಾವರಣ. ಇಲಾಖೆಗಳಿಗೆ ಸಂಬಂಧಪಟ್ಟ ಕ್ರಿಯೆಗಳು ನಿರಾತಂಕ. ದೀರ್ಘಾವಧಿ ಹೂಡಿಕೆಗಳ ಲಾಭ ಕೈಗೆ ಬರುವ ಸಮಯ.
ತುಲಾ: ದುಸ್ವಪ್ನಗಳನ್ನೇ ಕಾಣುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಡಿ. ಆರಾಧಿಸುವ ಇಷ್ಟದೇವರ ಅನುಗ್ರಹದಿಂದ. ಆಪತ್ತುಗಳು ದೂರ. ಹೊಟ್ಟೆಯ ಆರೋಗ್ಯದ ಬಗ್ಗೆ ಎಚ್ಚರ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸ್ವಂತ ಉದ್ಯಮದಲ್ಲಿ ಉತ್ಪಾದನೆಗಿರುವ ತೊಡಕುಗಳು ದೂರ.
ವೃಶ್ಚಿಕ: ಸಂಸಾರಕ್ಕೆ ಸಂಬಂಧಪಟ್ಟಂತೆ ಶುಭ ಸಮಾಚಾರ.ಊರಿನ ದೇವಾಲಯ ಸಂದರ್ಶನ. ಉದ್ಯೋಗ ಕ್ಷೇತ್ರದಲ್ಲಿ ಹರ್ಷದ ವಾತಾವರಣ. ಹಬ್ಬದ ನಿಮಿತ್ತ ಮನೆಯಲ್ಲಿ ಸಂಭ್ರಮ. ನೆಂಟರ ಆಗಮನ. ಸ್ವಂತ ಉದ್ಯಮ ಸುಸ್ಥಿತಿಯಲ್ಲಿ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.
ಧನು: ಸಹನಾ , ಜಾಣ್ಮೆಗಳಿಂದ ಸುಲಭವಾಗಿ ಕಾರ್ಯಸಾಧನೆ. ಹತ್ತಿರದ ದೇವಾಲಯದಲ್ಲಿ ಪ್ರಾರ್ಥನೆ. ಗುರು ಅಥವಾ ಗುರು ಸಮಾನರಿಂದ ಸಕಾಲದಲ್ಲಿ ಮಾರ್ಗದರ್ಶನ.ಸ್ವೋದ್ಯೋಗದ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ಪ್ರಯತ್ನ ಯಶಸ್ವಿ.
ಮಕರ: ತರಾತುರಿಯ ದಿನಚರಿಯ ನಡುವೆ ದೇವತಾರಾಧನೆಗೆ ಪ್ರಯತ್ನ. ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಚಿಂತೆ. ಉದ್ಯೋಗ ಸ್ಥಾನದಲ್ಲಿ ಸಮಯಕ್ಕೆ ಸರಿಯಾಗಿ ನಿಗದಿತ ಕಾರ್ಯ ಮುಗಿಸುವ ಒತ್ತಡ.ಕಾರ್ಯಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ. ಗುರುಸಮಾನರಾದ ಹಿರಿಯರೊಬ್ಬರಿಂದ ವೈಯಕ್ತಿಕ ಜೀವನಕ್ಕೆ ಮಾರ್ಗದರ್ಶನ.
ಕುಂಭ: ನೆಂಟರ ಆಗಮನದಿಂದ ಕಳೆಗಟ್ಟಿದ ಹಬ್ಬ ಆಚರಣೆ.ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಅಧಿಕಾರಿ ವರ್ಗದವರಿಗೆ ಪದೋನ್ನತಿ ಸಂಭವ. ಉದ್ಯಮಿಗಳಿಗೆ ವ್ಯವಹಾರ ವಿಸ್ತರಣೆಗೆ ಅವಕಾಶ ಪ್ರಾಪ್ತಿ. ಧಾರ್ಮಿಕ ಕ್ಷೇತ್ರದಲ್ಲಿ ಸೇವಾವಕಾಶ.
ಮೀನ: ಹಬ್ಬ ಆಚರಣೆಯ ನಡುವೆ ಉದ್ಯೋಗ ಕ್ಷೇತ್ರದ ಕಡೆಗೆ ಗಮನ. ನಿಧಾನವಾಗಿ ಯಶಸ್ಸು ಪ್ರಾಪ್ತಿ. ಗುರುಗಳ ದರ್ಶನ ಪ್ರಾಪ್ತಿ. ದೇವಾಲಯದ ಸಂಭ್ರಮಗಳಲ್ಲಿ ಭಾಗಿಯಾಗಲು ಬಿಡುವು. ಸಾಮಾಜಿಕ ಕಾರ್ಯದಲ್ಲಿ ಹೆಚಿÌನ ಜವಾಬ್ದಾರಿ ವಹಿಸಲು ಆಹ್ವಾನ. ಸರಕಾರಿ ಕಾರ್ಯಾಲಯಗಳಲ್ಲಿ ಉತ್ತಮ ಸ್ಪಂದನೆಯಿಂದ ಕಾರ್ಯ ನಿರಾತಂಕ. ಕೃಷಿ , ಹೈನುಗಾರಿಕೆಯಿಂದ ಲಾಭ
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.