World Cup 2023; ನಮ್ಮನ್ನು ನಾಶಗೊಳಿಸಿದ ಭಾರತ ಕಪ್ ಗೆಲ್ಲಲು ಅರ್ಹ: ಶೋಯಿಬ್ ಅಖ್ತರ್
Team Udayavani, Oct 16, 2023, 10:09 AM IST
ಲಾಹೋರ್: ಒಂದೆಡೆ ರಮೀಜ್ ರಾಜ ಪಾಕಿಸ್ಥಾನದ ನಿರ್ವಹಣೆಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಅವರದೇ ನಾಡಿನ ಮಾಜಿ ವೇಗಿ ಶೋಯಿಬ್ ಅಖ್ತರ್, ಭಾರತ 2011ರ ಸಾಧನೆಯನ್ನು ಪುನರಾವರ್ತಿಸಿ ಕಪ್ ಗೆಲ್ಲಲು ಅರ್ಹವಾಗಿದೆ ಎಂದಿದ್ದಾರೆ.
“ನಮ್ಮ ತಂಡವನ್ನು ನಾಶಗೊಳಿಸಿದ ಭಾರತದ ಮೇಲೀಗ ನಂಬಿಕೆ ಮೂಡಲಾರಂಭಿಸಿದೆ. ಅದು 2011ರ ಇತಿಹಾಸವನ್ನು ಪುನರಾವರ್ತಿಸಲಿದೆ ಎಂಬುದು ನನ್ನ ಅನಿಸಿಕೆ. ರೋಹಿತ್ ಪಡೆ ಸೆಮಿಫೈನಲ್‌ನಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ಇದ್ದಲ್ಲಿ ಈ ವಿಶ್ವಕಪ್ ಖಂಡಿತ ಗೆಲ್ಲಲಿದೆ’ ಎಂಬುದಾಗಿ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದರು.
“ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಅವರು ನಮ್ಮನ್ನು ನಿರಾಸೆಗೊಳಿಸಿದರಷ್ಟೇ ಅಲ್ಲ, ನಮ್ಮನ್ನು ನಾಶಗೊಳಿಸಿದರು. ಭಾರತಕ್ಕೆ ಪಾಕ್ ತಂಡ ಶಾಲಾ ಮಕ್ಕಳ ತಂಡದಂತೆ ಕಂಡಿತು. ಪಾಕ್ ಆಟವನ್ನು ಕಂಡು ನನಗೆ ಸಹಿಸಲಾಗಲಿಲ್ಲ. ರೋಹಿತ್ ಶರ್ಮ ನಿರ್ದಯವಾಗಿ ಆಡಿದರು’ ಎಂದು ಶೋಯಿಬ್ ನೇರ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋತ ಮೇಲೆ ಬಿಸಿಸಿಐ ಮೇಲೆ ಗೂಬೆ: ತೀರಾ ಕಳಪೆ ಪ್ರದರ್ಶನ ನೀಡಿದ ಪಾಕಿಸ್ಥಾನ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಆಡಿದ ಎಲ್ಲ 8 ಪಂದ್ಯಗಳಲ್ಲಿ ಸೋಲಿನ ನಂಟನ್ನು ಬೆಳೆಸಿದ್ದು ಈಗ ಇತಿಹಾಸ. ಈ ಸೋಲಿನ ಬಳಿಕ ಪಾಕಿಸ್ಥಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಬಿಸಿಸಿಐ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.
ಪಾಕಿಸ್ಥಾನ ವೀಕ್ಷಕರ ಅನುಪಸ್ಥಿತಿ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುವ ವೇಳೆ ಅವರು ಬಿಸಿಸಿಐ ಮೇಲೆ ವಾಗ್ಧಾಳಿ ನಡೆಸಿದರು.
“ಇದು ಐಸಿಸಿ ಟೂರ್ನಿಯಂತೆ ಇರಲಿಲ್ಲ, ಬಿಸಿಸಿಐ ಆಯೋಜಿಸಿದ ದ್ವಿಪಕ್ಷೀಯ ಸರಣಿಯಂತಿತ್ತು. ಪಾಕಿಸ್ಥಾನದ ಅಭಿಮಾನಿಗಳಿಗೆ ಭಾರತಕ್ಕೆ ಆಗಮಿಸಲು ವೀಸಾ ನೀಡಲಿಲ್ಲ. ಇದು ತಂಡದ ಪ್ರದರ್ಶನಕ್ಕೆ ತುಸು ಹಿನ್ನಡೆ ಉಂಟುಮಾಡಿತು. ಹಾಗಂತ ಇದೊಂದು ಸಬೂಬಲ್ಲ. ತವರಿನ ಪ್ರೇಕ್ಷಕರ ಉಪಸ್ಥಿತಿಯೂ ತಂಡದ ಪ್ರದರ್ಶನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಮ್ಮವರ ಆಟವನ್ನು ನಾನು ಕ್ಷಮಿಸುವು ದಿಲ್ಲ’ ಎಂಬುದಾಗಿ ಆರ್ಥರ್ ಪ್ರತಿಕ್ರಿಯಿಸಿದರು. ಪಾಕಿಸ್ಥಾನ ನಿರ್ಭೀತ ಪ್ರದರ್ಶನ ನೀಡಲು ವಿಫಲವಾಯಿತು ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.