Magadi: ಆಸ್ತಿಕ ಭಕ್ತರಿಗೆ ನೆಮ್ಮದಿಯ ತಾಣ ಮಾಗಡಿ
Team Udayavani, Oct 16, 2023, 10:51 AM IST
ಮಾಗಡಿ: ಮಾಗಡಿ ಎಂದೊಡನೆಯೇ ಪ್ರತಿಯೊಬ್ಬರಲ್ಲೂ ಮೂಡುವುದು ಕೆಂಪೇ ಗೌಡರ ತವರು ಮಾಗಡಿ. ಮಾಗಡಿಯ ಸುತ್ತಮುತ್ತಲು ಅನೇಕ ಸುಂದರವಾದ ಆಕರ್ಷ ಣೀಯ ತಾಣಗಳನ್ನು ಕಾಣಬಹುದು. ಒಂದು ದಿನದ ವಿಕೆಂಡ್‌ಗೆ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ.
ಬೆಂಗಳೂರು ನಗರದಿಂದ ಪಶ್ವಿಮಕ್ಕೆ ಕೇವಲ 40 ರಿಂದ 50 ಕಿ.ಮೀ ಸಮೀಪವಿರುವ ಮಾಗಡಿ ಅಕ್ಷರಸಃ ಪ್ರವಾಸಿಗರ ಸ್ವರ್ಗ ಎಂದೇ ಹೇಳಬಹುದು. ಭಾರತ ರತ್ನ ಸರ್‌ಎಂ. ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ನಿರ್ಮಾಣ ಗೊಂಡಿರುವ ಪ್ರಸಿದ್ಧ ತಿಪ್ಪ ಗೊಂಡನಹಳ್ಳಿ ಜಲಾ ಶಯವಿದೆ. ಪ್ರಕೃತಿಯ ಮಡಲಿಲ್ಲ ಇರುವ ಈ ಜಲಾಶಯ ಪರಿಸರ ಪ್ರೇಮಿ ಗಳಿಗೆ ಸುಂದರ ತಾಣವಾಗಿದೆ. ಇಲ್ಲಿ ಬೀಸುವ ತಂಗಾಳಿಯನ್ನು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದನ್ನುನೋಡಿಕೊಂಡು ಮಾಗಡಿಗೆ ಬಂದರೆ ಮಾಗಡಿ ಪಟ್ಟಣದ ಒಂದು ಕಿ.ಮೀ ಸಮೀಪದಲ್ಲಿಯೇ ಮಾಂಡವ್ಯ ಮಹರ್ಷಿಗಳ ತಪೋಭೂಮಿ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನವಿದೆ. ಚೋಳರ ಕಾಲದ ಈ ದೇವಸ್ಥಾನ ಅತ್ಯಂತ ಸುಂದರವಾಗಿದೆ. ದೇವರ ಮುಂದೆ ಮಾಂಡವ್ಯ ಮಹರ್ಷಿಗಳು ಆರಾಧಿಸಿದ ಸಾಲಿ ಗ್ರಾಮವಿದೆ. ಇದಕ್ಕೆ ಎಷ್ಟೇ ಕೊಡ ನೀರು ಅಭಿಷೇಕ ನೆರವೇರಿಸಿದರೂ ಅದು ಎಲ್ಲಿ ಸೇರುತ್ತದೆ ಎಂಬುದೇ ನಿಗೂಢ. ಆಸ್ತಿಕ ಭಕ್ತರಿಗೆ ನೆಮ್ಮದಿಯ ತಾಣವಾಗಿದೆ. ಇದು ನಾಡಪ್ರಭು ಕೆಂಪೇಗೌಡರ ಆರಾಧ್ಯ ದೈವವೂ ಆಗಿತ್ತು.
ಚಾರಿತ್ರಿಕ ಕಲ್ಯಾಬೆಟ್ಟವಿದೆ: ಇಲ್ಲಿಂದ ಮುಂದೆ 1 ಕಿ.ಮೀ. ಸಾಗಿದರೆ ಚೋಳರ ಕಾಲದ ಸೋಮೇಶ್ವರ ಸ್ವಾಮಿ ದೇವಸ್ಥಾನವಿದೆ. ಸುಂದರ ವಾದ ಶಿವಲಿಂಗ ಮೂರ್ತಿ ಹಾಗೂ ಭ್ರಮರಾಂಭ ದೇವಿಯಿದೆ. ಈ ದೇಗುಲ ಅತ್ಯಂತ ಸುಂದರ ವಾಗಿದೆ. ಚಾರಿತ್ರಿಕ ಕಲ್ಯಾಬೆಟ್ಟವಿದೆ. ಪಟ್ಟಣದಲ್ಲಿಯೇ ಕೋಟೆ ಮಾರಮ್ಮದೇವಿ ಆಕರ್ಷಣಿಯವಾಗಿದ್ದು, ದಿನೇ ದಿನೇ ಭಕ್ತರನ್ನು ಆಕರ್ಷಿಸಿದೆ. ಕೆಂಪೇಗೌಡರು ಯಾವುದೇ ಕಾರ್ಯಕ್ಕೆ ತೆರಳುವ ಮುನ್ನಾ ಕೋಟೆ ಮಾರಮ್ಮನ ದರ್ಶನ ಪಡೆದು ಮುಂದೆ ತೆರಳುತ್ತಿದ್ದರು ಎನ್ನಲಾಗಿದ್ದು, ಶಕ್ತಿದೇವಿಯ ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬುದು ಭಕ್ತರಲ್ಲಿಯೂ ನಂಬಿಕೆಯೂ ಇದೆ.
ಪ್ರವಾಸಿಗರ, ಪರಿಸರ ಪ್ರೇಮಿಗಳ ಸ್ವರ್ಗ: ಮಾಗಡಿಯಿಂದ ದಕ್ಷಿಣಕ್ಕೆ ರಾಮನಗರ ಮಾರ್ಗವಾಗಿ ತೆರಳಿದರೆ ಪಟ್ಟಣದಿಂದ 12 ಕಿ.ಮೀ ಸಮೀಪ ದಲ್ಲಿಯೇ ಚಾರುಣಿಗರ ಹಾಗೂ ಪ್ರವಾಸಿಗರ, ಪರಿಸರ ಪ್ರೇಮಿಗಳ ಸ್ವರ್ಗ ಎಂದೇ ಖ್ಯಾತಿಗಳಿಸಿರುವ ಸುಂದರ ವಾದ ಪ್ರಕೃತಿ ಮಡಲಲ್ಲಿ ಇರುವ ಪ್ರವಾಸಿ ತಾಣ ಸಾವನದುರ್ಗ ಪ್ರವಾಸಿಗರ ಸ್ವರ್ಗ, ಈ ಸ್ವರ್ಗಕ್ಕೆ ಬಂದರೆ ವಾಪಸ್ಸು ತೆರಳುವುದನ್ನೇ ಮರೆತು ಬಿಡತ್ತಾರೆ. ಪಕ್ಕದಲ್ಲಿಯೇ ಸುಂದರವಾದ .ಮಂಚನಬೆಲೆ ಜಲಾಶಯವೂ ಇದೆ. ಇದನ್ನುನೋಡಿಕೊಂಡು ಏಷ್ಯ ಖಂಡದಲ್ಲಿಯೇ ಅತ್ಯಂತ ಬೃಹತ್ತಾದ ಸುಮಾರು 6 ಎಕರೆ ಪ್ರದೇಶದಲ್ಲಿ ಅಲದ ಮರ ಹಬ್ಬಿದೆ. ತುಂಬಾ ಆಕರ್ಷಣೀಯವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ವಿಕೆಂಡ್‌ನಲ್ಲಿ ಇಷ್ಟನ್ನು ನೋಡಿಕೊಂಡು ಸಂಜೆಗೆ ವಾಪಸ್ಸಾಗಬಹುದು. ಒಮ್ಮೆ ಭೇಟಿ ಕೊಡಿ ಸಂದವರವಾದ ಪ್ರಕೃತಿಯನ್ನು ಸವಿದು ಆನಂದಿಸಿರಿ.
ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು:
ದಸರಾ ರಜಾ ಬಂದಿದೆ. ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಪೋಷಕರು ಪ್ರವಾಸ ಕೈಗೊಳ್ಳುತ್ತಾರೆ. ಇದಕ್ಕಾಗಿ ಪ್ರವಾಸೋಧ್ಯಮ ಇಲಾಖೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸು ವುದು ಅತ್ಯಾವಶ್ಯಕ. ಪ್ರವಾಸೋಧ್ಯಮ ಇಲಾಖೆಯಿಂದ ಮೇಲ್ಕಂಡ ಎಲ್ಲ ಸ್ಥಳಗಳನ್ನು ಮತ್ತೂಷ್ಟು ಅಭಿವೃದ್ಧಿಪಡಿಸಬೇಕಿದೆ. ವಸತಿ, ಹೋಟೆಲ್ ಸೇರಿ ದಂತೆ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಮೂಲಕ ಸುಂದರವಾದ ಪ್ರವಾಸಿತಾಣವನ್ನಾಗಿಸಿದರೆ ಮತ್ತೂಷ್ಟು ಪ್ರವಾಸಿಗರನ್ನು ಆಕರ್ಷಿಸು ವುದರಲ್ಲಿ ಸಂದೇಶವಿಲ್ಲ ಎನ್ನುತ್ತಾರೆ ಪ್ರವಾಸಿಗರಾದ ರಮೇಶ, ಪ್ರಕಾಶ್, ವೆಂಕಟೇಶ್, ಕುಮಾರ್.
ಕೆಂಪೇಗೌಡರ ವೀರ ಸಮಾಧಿ ಕೆಂಪಾಪುರ ಅಭಿವೃದ್ಧಿಗೆ ಸಜ್ಜು: ಕೆಂಪೇಗೌಡರ ವೀರ ಸಮಾಧಿ ಕೆಂಪಾಪುರದಲ್ಲಿದ್ದು, ಇದನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಜ್ಜಾಗಿದ್ದು ಇದೊಂದು ಸುಂದರ ಪ್ರವಾಸಿ ತಾಣವನ್ನಾಗಿಸಲು ಸುಮಾರು 60 ಕೋಟಿ ರು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯಕ್ರಮ ರೂಪಗೊಂಡಿದೆ.
ಮಾಗಡಿ ತಾಲೂಕಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಪ್ರವಾಸೋ ಧ್ಯಮ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದೇನೆ. ಹಣ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈಗ ನಮ್ಮ ಕಾಂಗ್ರೆಸ್ ಸರ್ಕಾರ ವಿದ್ದು, ಅಭಿವೃದ್ಧಿಗೆ ಯಾವುದೇ ಅಡ್ಡಿ ಆತಂಕವಿಲ್ಲ. ಅಧಿಕಾರಿಗಳನ್ನು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲಿದ್ದಾರೆ. ಪ್ರವಾಸಿಗರ, ಭಕ್ತರ ಅನುಕೂಲಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.-ಎಚ್.ಸಿ.ಬಾಲಕೃಷ್ಣ , ಶಾಸಕ
ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.