USA; ಧರ್ಮಾಂಧತೆಯಲ್ಲಿ 7ರ ಬಾಲಕನ 26 ಬಾರಿ ಇರಿದು ಕೊಂದ!
Team Udayavani, Oct 16, 2023, 11:25 PM IST
ವಾಷಿಂಗ್ಟನ್: ಧರ್ಮದ ಮೇಲಿನ ಕಿಚ್ಚಿಗೆ 7 ವರ್ಷದ ಮುಸ್ಲಿಂ ಬಾಲಕನೊಬ್ಬನನ್ನು ಚೂರಿಯಿಂದ ಇರಿದು ಕೊಂದಿರುವ ಅಮಾನವೀಯ ಘಟನೆ ಅಮೆರಿಕದ ಷಿಕಾಗೋದಲ್ಲಿ ನಡೆದಿದೆ. ಮುಸ್ಲಿಂ ಕುಟುಂಬವೊಂದು ವಾಸವಿದ್ದ ಅಪಾರ್ಟ್ಮೆಂಟ್ಗೆ ಅದರ ಮಾಲಕ (71) ಏಕಾಏಕಿ ಲಗ್ಗೆ ಇಟ್ಟಿದ್ದಾನೆ. ಕೈನಲ್ಲಿ ಮಿಲಿಟರಿ ಬಳಕೆಯ ಚಾಕು ಹಿಡಿದು, ನೀವು ಮುಸ್ಲಿಮರು ಸಾಯಬೇಕು ಎಂದು ಚೀರುತ್ತಾ ದಾಳಿಗೆ ಮುಂದಾಗಿದ್ದಾನೆ.
ಮೊದಲಿಗೆ ಮನೆಯಲ್ಲಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಾರೆ. ಬಳಿಕ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಲು ಶೌಚಾಲಯಕ್ಕೆ ಓಡಿದ್ದಾರೆ. ಈ ವೇಳೆ ಆಕೆಯ 7 ವರ್ಷದ ಮಗ ವಾಡಿಯಾ ಅಲ್ಫಯೂಮ್ನನ್ನು ಮಾಲಕ ಚೂರಿಯಿಂದ 26 ಬಾರಿ ಇರಿದು ಕೊಂದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.