ISRO Gaganyaan: 21 ಕ್ಕೆ ಪರೀಕ್ಷಾರ್ಥ ನೌಕೆ ಉಡಾವಣೆ
Team Udayavani, Oct 17, 2023, 12:16 AM IST
ಹೊಸದಿಲ್ಲಿ: ಭಾರತದ ಬಹುನಿರೀಕ್ಷಿತ ಮಾನವಸಹಿತ ಗಗನಯಾನಕ್ಕೂ ಮುಂಚೆ ನಡೆಯುವ ಮಾನವರಹಿತ ಗಗನಯಾನದ ಪರೀಕ್ಷಾರ್ಥ ಪ್ರಯೋಗವು ಸದ್ಯದಲ್ಲೇ ಆರಂಭವಾಗಲಿದೆ. ಅದಕ್ಕೆ ಪೂರಕವೆಂಬಂತೆ, ಇದೇ 21ರಂದು ಬೆಳಗ್ಗೆ 7ರಿಂದ 9ರ ನಡುವೆ ಶ್ರೀಹರಿಕೋಟದಿಂದ ಪರೀಕ್ಷಾರ್ಥ ನೌಕೆಯ ಉಡಾವಣೆಯಾಗಲಿದೆ. ಇದು “ಕ್ರ್ಯೂ ಎಸ್ಕೇಪ್ ಸಿಸ್ಟಂ’ (ತುರ್ತು ಸಂದರ್ಭದಲ್ಲಿ ಗಗನಯಾನಿಗಳ ರಕ್ಷಣಾ ವ್ಯವಸ್ಥೆ)ನ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಪ್ರಕ್ರಿಯೆಯಾಗಲಿದೆ ಎಂದು ಇಸ್ರೋ ಸೋಮವಾರ ಹೇಳಿದೆ. ಅ.21ರ ಟಿವಿ-ಡಿ1 ಪರೀಕ್ಷಾರ್ಥ ಪ್ರಯೋಗದ ಬಳಿಕ ಮತ್ತೆ ಮೂರು ಬಾರಿ ಇದೇ ಮಾದರಿಯ ಉಡಾವಣೆ ನಡೆಯಲಿದೆ.
ಏನಿದು ಪರೀಕ್ಷೆ?
ಒಂದು ವೇಳೆ, ಗಗನಯಾನ ನೌಕೆಯು ಉಡಾವಣೆಯಾದ ಬಳಿಕ ತುರ್ತಾಗಿ ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದರೆ, ಗಗನಯಾತ್ರಿಗಳನ್ನು ಒಳಗೊಂಡ ಕ್ರ್ಯೂ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸಲು ಇರುವಂಥ ತುರ್ತು ಎಸ್ಕೇಪ್ ವ್ಯವಸ್ಥೆಯನ್ನೇ “ಕ್ರ್ಯೂ ಎಸ್ಕೇಪ್ ಮಾಡ್ಯೂಲ್’ ಎಂದು ಕರೆಯುತ್ತಾರೆ. ಇದರ ಪರೀಕ್ಷೆಗಾಗಿ ಇಸ್ರೋ ಒತ್ತಡವಿಲ್ಲದ ಕ್ರ್ಯೂ ಮಾಡ್ಯೂಲ್(ಸಿಎಂ)ವೊಂದನ್ನು ಅಭಿವೃದ್ಧಿಪಡಿಸಿದೆ. ಇದು ಗಗನಯಾನದ ಕ್ರ್ಯೂ ಮಾಡ್ಯೂಲ್ನಷ್ಟೇ ಗಾತ್ರ ಮತ್ತು ದ್ರವ್ಯರಾಶಿಯನ್ನು ಹೊಂದಿರುತ್ತದೆ. ಅಲ್ಲದೆ, ನೈಜ ಮಾಡ್ನೂಲ್ನಲ್ಲಿರುವ ಎಲ್ಲ ವ್ಯವಸ್ಥೆಗಳು ಅಂದರೆ ಪ್ಯಾರಾಚೂಟ್, ಪತ್ತೆ ಸಾಧನ, ಆಕುcವೇಷನ್ ಸಿಸ್ಟಂ ಇತ್ಯಾದಿಗಳನ್ನು ಹೊಂದಿರುತ್ತದೆ. ಅ.21ರಂದು ನಡೆಯುವ ಪರೀಕ್ಷೆ ವೇಳೆ ಈ ಮಾಡ್ನೂಲ್ ಅನ್ನು ಉಡಾವಣೆ ಮಾಡಿ ಬಂಗಾಳ ಕೊಲ್ಲಿಯಲ್ಲಿ ಇಳಿಯುವಂತೆ ಮಾಡಲಾಗುತ್ತದೆ. ಭೂಮಿಯಿಂದ 17 ಕಿ.ಮೀ. ಎತ್ತರದಲ್ಲಿ ಪರೀಕ್ಷಾ ನೌಕೆಯಿಂದ ಕ್ರ್ಯೂ ಮಾಡ್ಯೂಲ್ ಪ್ರತ್ಯೇಕಗೊಳ್ಳುತ್ತದೆ. ನಂತರ, ನೌಕಾಪಡೆಯ ತಂಡ ಹಾಗೂ ನೌಕೆಯೊಂದನ್ನು ಬಳಸಿಕೊಂಡು ಮಾಡ್ಯೂಲ್ ಅನ್ನು ಪತ್ತೆ ಹಚ್ಚಿ ಹೊರತರಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.