Humnabad: ಹಬ್ಬದ ನಿಮಿತ್ತ ತುಳಜಾಪೂರಕ್ಕೆ ವಿಶೇಷ ಬಸ್ ಸೌಲಭ್ಯ

ಟಿಕೆಟ್ ದರದಲ್ಲಿ ವ್ಯತ್ಯಾಸ ಕರ್ನಾಟಕ-ಮಹಾರಾಷ್ಟ್ರ ಬಸ್ ಘಟಕಗಳ ಮಧ್ಯೆ ತಿಕ್ಕಾಟ ;ರಾಜ್ಯದ ಬಸ್ಸಿನಲ್ಲಿ ಮಹಿಳೆಯರಿಗೆ 200 ಟಿಕೆಟ್ – ಮಹಾರಾಷ್ಟ್ರದ ಬಸ್‌ನಲ್ಲಿ 130 ಟಿಕೆಟ್

Team Udayavani, Oct 17, 2023, 10:41 AM IST

5-humanabad

ಹುಮನಾಬಾದ: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಹಾಗೂ ಮಹಾರಾಷ್ಟ್ರ ಸರ್ಕಾರದ ಮಹಿಳಾ ಸನ್ಮಾನ ಯೋಜನೆಗಳು ಇದೀಗ ಎರಡು ರಾಜ್ಯಗಳ ಮಧ್ಯೆ ಮೈಮನಸು ಉಂಟು ಮಾಡುತ್ತಿವೆ.

ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪೂರಕ್ಕೆ ತೆರಳುವ ಭಕ್ತರಿಗಾಗಿ ಎರಡು ರಾಜ್ಯದ ಬಸ್ ಘಟಕಗಳು ವಿಶೇಷ ಬಸ್ ವ್ಯವಸ್ಥೆ ಮಾಡಿದ್ದು, ಟಿಕೆಟ್ ದರದ ವಿಷಯಕ್ಕೆ ಕಚ್ಚಾಡುತ್ತಿದ್ದಾರೆ.

ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭಿಸಿದ್ದು, ಮಹಿಳೆಯರು ಸೂಕ್ತ ದಾಖಲೆಗಳು ನೀಡಿ ಪ್ರಯಾಣ ಮಾಡುತ್ತಿದ್ದಾರೆ. ಅದು ಕರ್ನಾಟಕ ರಾಜ್ಯದಲ್ಲಿ ಮತ್ತು ರಾಜ್ಯದ ಮಹಿಳೆಯರಿಗೆ ಮಾತ್ರ ಪ್ರವಾಸಕ್ಕೆ ಅವಕಾಶವಿದ್ದು, ನೆರೆ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳಿಗೆ ಅನ್ವಯವಾಗುವುದಿಲ್ಲ.

ನೆರೆ ರಾಜ್ಯದ ಬಸ್‌ಗಳಲ್ಲಿ ಸಂಚಾರ ಮಾಡಬೇಕಾದರೆ ಪ್ರಯಾಣದ ಪೂರ್ತಿ ಟಿಕೆಟ್ ದರ ನೀಡಬೇಕು. ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪೂರದ ಅಂಬಾ ಭವಾನಿ ದರ್ಶನಕ್ಕೆ ಈ ಭಾಗದ ಲಕ್ಷಾಂತರದ ಜನರು ಪ್ರಯಾಣ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ವಿಶೇಷ ಕೌಂಟರ್ ತೆರೆದು ಪ್ರಯಾಣಿಕರಿಗೆ ಪ್ರಯಾಣದ ಮಾಹಿತಿ ನೀಡುತ್ತಿದ್ದಾರೆ.

ಆದರೆ, ಇಲ್ಲಿನ ಬಸ್ ನಿಲ್ದಾಣದಲ್ಲಿ ಮಾತ್ರ ಮಹಾರಾಷ್ಟ್ರದ ಬಸ್‌ಗಳಿಗೆ ಪ್ರವೇಶ ನೀಡುತ್ತಿಲ್ಲ. ಕಾರಣ ಹುಮನಾಬಾದನಿಂದ ತುಳಜಾಪುರಕ್ಕೆ ಪ್ರಯಾಣಿಸುವ ಮಹಿಳೆಯರಿಗೆ ರೂ.130, ಪುರುಷರಿಗೆ ರೂ.200 ಟಿಕೆಟ್ ದರ ಇದೆ. ಎರೆಡು ರಾಜ್ಯದ ಪುರುಷರಿಗೆ ರೂ.200 ಇದೆ.  ಆದರೆ, ಮಹಿಳೆಯರ ಟಿಕೆಟ್‌ದರಲ್ಲಿ ರೂ.70ರ ವ್ಯತ್ಯಾಸ ಇದೆ.

ಕಾರಣ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದಲ್ಲಿ ಸಂಚರಿಸುವ ದೇಶದ ಎಲ್ಲಾ ಮಹಿಳೆಯರಿಗೆ ಅರ್ಧ ಟಿಕೆಟ್ ಪಡೆಯುವ ಯೋಜನೆ ಜಾರಿಯಲ್ಲಿ ಇರುವ ಕಾರಣಕ್ಕೆ ಕರ್ನಾಟಕದಿಂದ ಪ್ರಯಾಣ ಮಾಡುವ ಮಹಿಳೆಯರಿಗೆ ರಾಜ್ಯದ ಗಡಿವರೆಗೆ ಪೂರ್ಣ ಟಿಕೆಟ್ ಪಡೆದು ಮಹಾರಾಷ್ಟ್ರ ಪ್ರವೇಶವಾದ ನಂತರ ಅರ್ಧ ಟಿಕೆಟ್ ಪಡೆಯುತ್ತಿರುವ ಕಾರಣಕ್ಕೆ ಕಡಿಮೆ ವೆಚ್ಚದಲ್ಲಿ ಪ್ರಯಾಣ ನೀಡುತ್ತಿರುವುದು ಈಶಾನ್ಯ ಸಾರಿಗೆ ಇಲಾಖೆಗೆ ಕಂಟಕವಾಗಿ ಕಾಡುತ್ತಿದೆ. ಅಲ್ಲದೆ, 75 ವರ್ಷದ ಹಿರಿಯ ನಾಗರಿಕರಿಗೆ ಸೂಕ್ತ ದಾಖಲೆ ನೀಡಿದರೆ ಉಚಿತ ಪ್ರಯಾಣದ ಯೋಜನೆ ಕೂಡ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಧ್ಯ ರಾಜ್ಯದ ಬಸ್‌ಗಳು ಸುಗಮವಾಗಿ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದು, ಇದೇ ಗೊಂದಲ ಮುಂದು ವರೆದರೆ ಮುಂದಿನ ದಿನಗಳಲ್ಲಿ ಎರೆಡು ರಾಜ್ಯಗಳ ಮಧ್ಯೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳು ಕೂಡ ಕಂಡುಬರುತ್ತಿದ್ದು, ಎರೆಡು ರಾಜ್ಯಗಳ ಸಾರಿಗೆ ಮುಖ್ಯಸ್ಥರು ಈ ಕಡಗೆ ಗಮನ ಹರಸಿಬೇಕಾಗಿದೆ.

ಬೀದರ್ ಜಿಲ್ಲೆಯಿಂದ ತುಳಜಾಪೂರಕ್ಕೆ ಹೋಗುವ ಬಸ್‌ಗಳಿಗೆ ಮಹರಾಷ್ಟರದ ಬಸ್ ಘಟಕದವರು ಅವರ ನಿಲ್ದಾಣದಲ್ಲಿ ಸ್ಥಳ ನೀಡುತ್ತಿಲ್ಲ. ನಮ್ಮ ಬಸ್‌ಗಳಿಗೆ ನಿಲ್ಲಿಸಲು ಪ್ರಯಾಣಿಕರನ್ನು ಹತ್ತಿಸಲು ಸ್ಥಳ ನೀಡದ ಕಾಣರ ಕಳೆದ ಅನೇಕ ವರ್ಷಗಳಿಂದ ಖಾಸಗಿ ಭೂಮಿ ಬಾಡಿಗೆ ಪಡೆದುಕೊಂಡು ಬಸ್ ನಿಲ್ಲಿಸುತ್ತಿದ್ದೇವೆ. ಸರತಿ ಸಾಲಿನಲ್ಲಿ ಕೂಡ ನಮ್ಮ ಬಸ್‌ಗಳಿಗೆ ವಕಾಶ ಕಲ್ಪಿಸುತ್ತಿಲ್ಲ. ‌

ಈ ಹಿಂದೆ ನಡೆದ ಮೇಲಾಧಿಕಾರಿಗಳ ಸಭೆಯಲ್ಲಿ ಎರೆಡು ರಾಜ್ಯದ ಬಸ್‌ಗಳ ಟಿಕೆಟ್ ದರ ಒಂದೇ ಇಡುವಂತೆ ಮನವರಿಕೆ ಮಾಡಲಾಗಿತ್ತು. ಆದರೆ, ಮಹಾರಾಷ್ಟ್ರದ ಬಸ್‌ಗಳ ಮೇಲೆ ಮಹಿಳೆಯರಿಗೆ 130 ಎಂದು ಬರೆದುಕೊಂಡು ಬರುತ್ತಿದ್ದು, ರಾಜ್ಯದ ಬಸ್ ಘಟಕಕ್ಕೆ ಹಾನಿ ಸಂಭವಿಸಬಹುದಾಗಿದೆ. ಕಾರಣ ನಮ್ಮ ಬಸ್ ನಿಲ್ದಾಣದಲ್ಲಿ ಮಹರಾಷ್ಟçದ ಬಸ್‌ಗಳಿಗೆ ಅವಕಾಶ ನೀಡುತ್ತಿಲ್ಲ. – ವಿಠಲರಾವ ಕದಂ ಬಸ್ ನಿಲ್ದಾಣದ ವ್ಯವಸ್ಥಾಪಕ ಹುಮನಾಬಾದ

ಕಳೆದ ಮೂರುದಿನಗಳಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ತುಳಜಾಪೂರಕ್ಕೆ ತೆರಳುವ ವಿಶೇಷ ಬಸ್‌ಗಳಿಗೆ ಪ್ರವೇಶ ನೀಡುತ್ತಿಲ್ಲ. ಬಸ್ ನಿಲ್ದಾಣದ ಎದುರಿನ ಮುಖ್ಯರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿನ ಅನುಸಾರ ಮಹಿಳೆಯರಿಗೆ ಕಡಿಮೆ ಟಿಕೆಟ್ ಇದೆ. ಎರೆಡು ರಾಜ್ಯಗಳ ಮೇಲಾಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಿಬ್ಬಂದಿಗಳು ಕಚ್ಚಾಟದಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕರ್ತವ್ಯದ ಒತ್ತಡ, ಹೆಚ್ಚಿನ ಆದಾಯದ ಕುರಿತು ಎರೆಡು ರಾಜ್ಯದ ಸಿಬ್ಬಂದಿಗಳಿಗೆ ಇದೆ. ಇಲ್ಲಿ ಸಮಸ್ಯೆ ಆದರೆ, ಅಲ್ಲಿಯೂ ಸಮಸ್ಯೆ ಉಂಟಾಗುತ್ತದೆ ಎಂಬುವುದು ತಿಳಿದುಕೊಳ್ಳಬೇಕಾಗಿದೆ. – ಶಿವರಾಜ ಎಲ್‌ಪಿ ಉಮರ್ಗಾ ಬಸ್ ಘಟಕದ ಸಂಚಾರ ನಿಯಂತ್ರಣ ಅಧಿಕಾರಿ

ಟಾಪ್ ನ್ಯೂಸ್

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಂಡ್ರೆ

By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.