Mysuru Dasara: ಮೈಸೂರು ದಸರಾ ಸ್ತಬ್ಧ ಚಿತ್ರಕ್ಕೆ ಶಿವಗಂಗೆ ಬೆಟ್ಟ
Team Udayavani, Oct 17, 2023, 12:41 PM IST
ದೇವನಹಳ್ಳಿ: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಈಗಾಗಲೇ ಚಾಲನೆ ದೊರೆತಿದ್ದು, ಈ ಬಾರಿ ಮೆರವಣಿಗೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಹೊಂದಿರುವ ಶಿವಗಂಗೆ ಕ್ಷೇತ್ರದ ಸ್ತಬ್ಧಚಿತ್ರವೂ ಪಾಲ್ಗೊಳ್ಳುತ್ತಿರುವುದು ವಿಶೇಷ.
ಸ್ತಬ್ಧಚಿತ್ರ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆದಿದ್ದು, ಅಪರೂಪದ ಕ್ಷಣ ಕಣ್ತುಂಬಿಕೊಳ್ಳಳು ಜಿಲ್ಲೆಯ ಜನ ಕಾತರರಾಗಿ ದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ವಿಶೇಷತೆಯನ್ನು ಸಾರುವ ಜಂಬೂ ಸವಾರಿಯಲ್ಲಿ ಶಿವಗಂಗೆ ಕ್ಷೇತ್ರದ ಇತಿಹಾಸ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವನ್ನು ಸಾರುವ ಸ್ತಬ್ಧಚಿತ್ರದ ಅನಾವರಣವಾಗುತ್ತಿರುವುದು ಜಿಲ್ಲೆಯ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.
ದಕ್ಷಿಣ ಕಾಶಿ ಖ್ಯಾತಿಯ ಶಿವಗಂಗೆ ಬೆಟ್ಟ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಪರೂಪದ ಧಾರ್ಮಿಕ ಕ್ಷೇತ್ರ. ನಂದಿ ಕಲ್ಲಿನ ಕೆತ್ತನೆ ಈ ಸ್ಥಳದ ಪ್ರಮುಖ ಆಕರ್ಷಣೆ. ಶ್ರೀ ಗಂಗಾಧರೇಶ್ವರ, ಶ್ರೀ ಹೊನ್ನಾದೇವಿ ದೇವಾಲಯ ಹಾಗೂ ಒಳಕಲ್ಲು ತೀರ್ಥ, ನಂದಿ ಪ್ರತಿಮೆ, ಪಾತಾಳಗಂಗೆ ಇವುಗಳ ಸಂಗಮದಿಂದ ಈ ಸ್ಥಳವನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ಹೊಯ್ಸಳ ರಾಜರ ನಿಯಂತ್ರಣದಲ್ಲಿದ್ದ ಈ ಪ್ರದೇಶವು ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲಾ ಹಾಗೂ 16ನೇ ಶತಮಾನದಲ್ಲಿ ಶಿವಪ್ಪ ನಾಯಕರಿಂದ ಈ ಗುಡ್ಡದ ಕೋಟೆಯನ್ನು ಕೆಡವಾಲಾಗಿತ್ತು. ಆದರೆ, ಬೆಂಗಳೂರಿನ ಸಂಸ್ಥಾಪಕ ನಿರ್ಮಾತೃ ಮಾಗಡಿ ಕೆಂಪೇಗೌಡರಿಂದ ಈ ಕೋಟೆ ಸುಧಾರಣೆ ಕಂಡಿತು. ಈ ಕೋಟೆಯಲ್ಲಿ ಖಜಾನೆ ನಿಧಿ ಭಾಗವನ್ನು ಉಳಿಸಿಕೊಂಡಿದ್ದರು. ಶ್ರೀ ಗಂಗಾಧರೇಶ್ವರ ಸ್ವಾಮಿಗೆ ತುಪ್ಪ ಸವರಿದರೆ ಬೆಣ್ಣೆಯಾಗುತ್ತದೆಂಬುದು ಸ್ಥಳೀಯರ ನಂಬಿಕೆ.
ಉತ್ತರ ದಿಕ್ಕಿನಿಂದ ಸರ್ಪದಂತೆ, ದಕ್ಷಿಣ ದಿಕ್ಕಿನಿಂದ ಗಣೇಶ ಆಕಾರ, ಪೂರ್ವ ದಿಕ್ಕಿನಿಂದ ನಂದಿ ಹಾಗೂ ಪಶ್ಚಿಮ ದಿಕ್ಕಿನಿಂದ ಲಿಂಗದ ಆಕಾರದಂತೆ ಕಾಣುವುದು ಈ ಬೆಟ್ಟದ ವಿಶೇಷತೆಗಳಲ್ಲೊಂದು. ಈ ಬಾರಿ ದಸರಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೋಟೆ, ಟಿಪ್ಪು ಜನ್ಮಸ್ಥಳ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, ವಿಧಾನಸೌಧ ನಿರ್ಮಾಣಕ್ಕೆ ಕಲ್ಲು ನೀಡಿದ ಕೊಯಿರಾ ಬೆಟ್ಟ, ನೆಲಮಂಗಲದ ಶಿವಗಂಗೆ ಬೆಟ್ಟ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ, ಮಾಕಳಿದುರ್ಗ, ಹುಲುಕುಡಿ ಬೆಟ್ಟ, ಪ್ರಮುಖವಾಗಿದ್ದವು. ಇದರಲ್ಲಿ ಶಿವಗಂಗೆ ಬೆಟ್ಟವನ್ನು ಸ್ತಬ್ಧಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಸ್ತಬ್ಧಚಿತ್ರಕ್ಕೆ ಪ್ರಮುಖ ಆಕರ್ಷಕ ಅಂಶಗಳು: ವಿಷ್ಣುವರ್ಧನ/ ಹೊಯ್ಸಳರ ಬಹುಮುಖ್ಯ ಮಂಟಪ(ನಂದಿ ಮಂಟಪ). ವಿಷ್ಣುವರ್ಧನ/ ಹೊಯ್ಸಳರ ಸಮಕಾಲೀನ ಕೈದಾಳಪ್ರದೇಶವನ್ನು ಆಳಿದ್ದ ಅವನ ಸಾಮಂತ ಆದಳ. ವಂಶದ ವಿಷ್ಣುವರ್ಧನನು ಶ್ರೀ ಗಂಗಾಧರೇಶ್ವರ ಗುಹಾಲಯದ ಮುಂದೆ ಒಂದು ಕಲ್ಯಾಣ ಮಂಟಪ ನಿರ್ಮಿಸಿದ್ದಾನೆ. ಶಾಸನವು ಅವನನ್ನು ವಿಶೇಷವಾಗಿ ಹೋಗಳಿ ಅವನು ಶಿವಗಂಗೆ ಮತ್ತು ಸುತ್ತಮುತ್ತ ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಾಣ ಮಾಡಿದನೆಂದು ಹೇಳುತ್ತದೆ. ಕ್ರಿ.ಶ.1140 ಎನ್ನಲಾಗಿದೆ. ಶಿವಗಂಗೆ ಗಿರಿಯ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ರೂಪದಲ್ಲಿ ಗೋಚರಿಸುತ್ತದೆ. ಜೊತೆಗೆ ದಕ್ಷಿಣ ಕಾಶಿಯಾಗಿದೆ.
ಮೈಸೂರು ದಸರಾ ಜಂಬು ಸವಾರಿ ಎಂದು ನಡೆಯಲಿರುವ ವಿವಿಧ ಜಿಲ್ಲಾ ಗಳ ಸ್ತಬ್ಧಚಿತ್ರಗಳ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಧಾರ್ಮಿಕ ಕ್ಷೇತ್ರ ಹಾಗೂ ಪ್ರಾಕೃತಿಕ, ಭೌಗೋಳಿಕ ಸೌಂದರ್ಯ ಹೊಂದಿರುವ ಶಿವಗಂಗೆ ಬೆಟ್ಟವನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಮೈಸೂರು ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸಮಿತಿ ಅನುಮೋದನೆ ಕೊಟ್ಟಿದೆ. ಈಗಾಗಲೇ ಮೈಸೂರಿನಲ್ಲಿ ಸ್ತಬ್ಧಚಿತ್ರ ತಯಾರಿ ಮತ್ತು ಸಿದ್ಧತೆ ನಡೆಯುತ್ತಿದೆ. ● ಮಹಮ್ಮದ್ ರಫೀಕ್, ಉಪನಿರ್ದೇಶಕರು, ಖಾದಿ ಮತ್ತು ಗ್ರಾಮ ಉದ್ಯೋಗ ಇಲಾಖೆ
ಈ ಬಾರಿ ಮೈಸೂರು ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಶಿವಗಂಗೆ ಬೆಟ್ಟದ ಮಹತ್ವ ಸಾರಲಾಗುತ್ತಿದೆ. ಶಿವಗಂಗೆ ಬೆಟ್ಟವು ಐತಿಹಾಸಿಕ ಕ್ಷೇತ್ರವಾಗಿದ್ದು, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿಯೂ ಶ್ರೀಮಂತವಾಗಿದೆ. ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಅನಾವರಣಗೊಳ್ಳಲು ಸಿದ್ಧಗೊಳ್ಳುತ್ತಿರುವ ಶಿವಗಂಗೆ ಮಾದರಿ. – ಡಾ.ಅನುರಾಧಾ, ಜಿಪಂ ಸಿಇಒ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.