Viral: ನಡುರಸ್ತೆಯಲ್ಲೇ ರಿಕ್ಷಾ ಚಾಲಕನ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿದ ಮಹಿಳೆ
ಕುಡಿದ ಮತ್ತಿನಲ್ಲಿ ಮಹಿಳೆಯಿಂದ ಕಿರುಕುಳ: ನೆಟ್ಟಿಗರು ಗರಂ
Team Udayavani, Oct 17, 2023, 2:24 PM IST
![Viral: ನಡುರಸ್ತೆಯಲ್ಲೇ ರಿಕ್ಷಾ ಚಾಲಕನ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿದ ಮಹಿಳೆ](https://www.udayavani.com/wp-content/uploads/2023/10/tdy-15-13-620x372.jpg)
![Viral: ನಡುರಸ್ತೆಯಲ್ಲೇ ರಿಕ್ಷಾ ಚಾಲಕನ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿದ ಮಹಿಳೆ](https://www.udayavani.com/wp-content/uploads/2023/10/tdy-15-13-620x372.jpg)
ದೆಹಲಿ: ನಡುರಸ್ತೆಯಲ್ಲೇ ಮಹಿಯೊಬ್ಬರು ರಿಕ್ಷಾ ಎಳೆಯುವ (ತಳ್ಳುವ ರಿಕ್ಷಾ) ವ್ಯಕ್ತಿಯ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕವಾಗಿ ಕಿರುಕುಳ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಹಿಳೆಯೊಬ್ಬರು ರಿಕ್ಷಾ ಎಳೆಯುವವ (Rickshaw puller) ವ್ಯಕ್ತಿಯ ಭುಜದ ಮೇಲೆ ತಲೆ ಇಟ್ಟು ಕೈಯಿಂದ ಆತನ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆಯನ್ನು ಕಾರಿನಲ್ಲಿ ಸಮೀಪದಲ್ಲಿದ್ದವರು ಸೆರೆ ಹಿಡಿದಿದ್ದು,ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ನಂತರ ಬಳಕೆದಾರರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಮೂರು ದಿನದ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಕೃತ್ಯವನ್ನು ಎಸಗಿದ ಮಹಿಳೆ ಕುಡಿತದ ಮತ್ತಿನಲ್ಲಿದ್ದಳು. ಹೀಗಾಗಿ ಇಂತಹ ಅಸಹ್ಯಕರ ಕೃತ್ಯವನ್ನುವೆಸಗಿದ್ದಾಳೆ ಎನ್ನಲಾಗಿದೆ. ಬಲವಂತವಾಗಿ ಚಾಲಕನಿಗೆ ಈ ರೀತಿ ಕಿರುಕುಳ ನೀಡುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
“ಮಹಿಳೆ ರಸ್ತೆಯಲ್ಲಿ ರಿಕ್ಷಾ ಪುಲ್ಲರ್ ನಿಗೆ ಕಿರುಕುಳ ನೀಡಿದ್ದಾಳೆ. ಅನುಚಿತವಾಗಿ ಪುರುಷನನ್ನು ಸ್ಪರ್ಶಿಸಿದ್ದಾಳೆ. ನಿರ್ಭಯವಾಗಿ ಈ ರೀತಿ ಮಾಡಿದ್ದಾಳೆ. ಅವಳ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ, ಎಂದು ಆಕೆಗೆ ಗೊತ್ತಿದೆ” ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಅಸಹ್ಯಕರ ಕೃತ್ಯವನ್ನು ಒಬ್ಬ ಮಹಿಳೆಗೆ ಮಾಡಿದ್ದರೆ ಏನಾಗುತ್ತಿತ್ತು? ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ನಮ್ಮಲ್ಲಿ ಲಿಂಗ ಪಕ್ಷಪಾತ ಕಾನೂನು ಇದೆ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Valentine’s Day: Young woman orders 100 pizzas for old boyfriend: But there’s a twist](https://www.udayavani.com/wp-content/uploads/2025/02/pizza-150x82.jpg)
![Valentine’s Day: Young woman orders 100 pizzas for old boyfriend: But there’s a twist](https://www.udayavani.com/wp-content/uploads/2025/02/pizza-150x82.jpg)
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
![Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…](https://www.udayavani.com/wp-content/uploads/2025/02/leopard-150x84.jpg)
![Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…](https://www.udayavani.com/wp-content/uploads/2025/02/leopard-150x84.jpg)
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
![Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ](https://www.udayavani.com/wp-content/uploads/2025/02/car-2-150x68.jpg)
![Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ](https://www.udayavani.com/wp-content/uploads/2025/02/car-2-150x68.jpg)
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
![1-ddsa](https://www.udayavani.com/wp-content/uploads/2025/02/1-ddsa-150x85.jpg)
![1-ddsa](https://www.udayavani.com/wp-content/uploads/2025/02/1-ddsa-150x85.jpg)
Malaysia; ಭಾರತ ಮೂಲದ ಮಹಿಳೆಯಿಂದ ಕೆಲಸಕ್ಕಾಗಿ ಪ್ರತಿದಿನ 700 ಕಿ.ಮೀ. ವಿಮಾನ ಯಾನ!