BTSbot: ಸೂಪರ್ನೊವಾ ಪತ್ತೆಹಚ್ಚಿದ ಬಿಟಿಎಸ್ಬಾಟ್
Team Udayavani, Oct 17, 2023, 9:13 PM IST
ನೂತನ ಕೃತಕ ಬುದ್ಧಿಮತ್ತೆ(ಎಐ) ಸಾಧನವೊಂದು ಮತ್ತು ಸಂಪುರ್ಣ ಸ್ವಯಂಚಾಲಿತ ಪ್ರಕ್ರಿಯೆಯು ಮೊದಲ ಬಾರಿಗೆ ಸೂಪರ್ನೊವಾ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ, ಗುರುತಿಸಿದೆ ಹಾಗೂ ವರ್ಗೀಕರಿಸಿದೆ. ಈ ತಂತ್ರಜ್ಞಾನವು ಖಗೋಳಶಾಸ್ತ್ರಜ್ಞರ ಕಾರ್ಯವನ್ನು ಸುಲಭಗೊಳಿಸಲಿದೆ.
ಅಲ್ಲದೇ ವಿಶ್ವದ ಕುರಿತು ವಿವರಿಸಲು, ಹೊಸ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಹಾಗೂ ಪರೀಕ್ಷಿಸಲು ಅವರಿಗೆ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಸಹಕಾರಿಯಾಗಿದೆ. ಅಮೆರಿಕದ ಇವಾನ್ಸ್ಟನ್ನಲ್ಲಿರುವ ನಾರ್ಥ್ವೆಸ್ಟರ್ನ್ ವಿಶ್ವವಿದ್ಯಾಲಯ ಅಡಿಯಲ್ಲಿ ಅಂತಾರಾಷ್ಟ್ರೀಯ ಸಂಶೋಧಕರು “ಬಿಟಿಎಸ್ಬಾಟ್'(ಬ್ರೈಟ್ ಟ್ರಾನ್ಸಿಯಂಟ್ ಸರ್ವೆ ಬಾಟ್) ಹೆಸರಿನ ಎಐ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. 16,000 ಖಗೋಳ ಮೂಲಗಳಿಂದ 1.4 ಮಿಲಿಯನ್ಗಳಿಂತಲೂ ಹೆಚ್ಚು ಐತಿಹಾಸಿಕ ಚಿತ್ರಗಳ ಮೇಲೆ ಬಿಟಿಎಸ್ಬಾಟ್ಗೆ ತರಬೇತಿ ನೀಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.