ಸೋತಾಫ್ರಿಕಾ!- ಅಜೇಯ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್‌  ಜಯಭೇರಿ

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮತ್ತೂಂದು ಏರುಪೇರಿನಾಟ

Team Udayavani, Oct 17, 2023, 11:48 PM IST

netherlands sa

ಧರ್ಮಶಾಲಾ: ಇದೇ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸರ್ವಾಧಿಕ ರನ್ನುಗಳ ದಾಖಲೆ ಸ್ಥಾಪಿಸಿದ್ದ ದಕ್ಷಿಣ ಆಫ್ರಿಕಾ ತೀರಾ ಸಾಮಾನ್ಯ ತಂಡವಾದ ನೆದರ್ಲೆಂಡ್ಸ್‌ ವಿರುದ್ಧ 38 ರನ್ನುಗಳಿಂದ ನೆಲ
ಕಚ್ಚಿದೆ. ಇದರೊಂದಿಗೆ 13ನೇ ವಿಶ್ವಕಪ್‌ ಮೂರೇ ದಿನದಲ್ಲಿ ಮತ್ತೂಂದು ಏರು ಪೇರಿನಾಟಕ್ಕೆ ಸಾಕ್ಷಿಯಾಯಿತು. ರವಿವಾರ ಅಫ್ಘಾನಿಸ್ಥಾನ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಆಘಾತವಿಕ್ಕಿತ್ತು.
ಇದು ವಿಶ್ವಕಪ್‌ನಲ್ಲಿ ಇತ್ತಂಡಗಳ ನಡುವಿನ ಮೊದಲ ಮುಖಾಮುಖೀಯಾಗಿತ್ತು. ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿತ್ತು. ಆದರೆ ಡಚ್ಚರ ಹೊಡೆತಕ್ಕೆ ಸಿಲುಕಿ ಅಪ್ಪಚ್ಚಿಯಾಯಿತು. 2 ಸೋಲುಗಳನ್ನು ಕಂಡಿದ್ದ ನೆದರ್ಲೆಂಡ್ಸ್‌ ಮೊದಲ ಗೆಲುವಿನ ಮಹಾಸಂಭ್ರಮವನ್ನು ಆಚರಿಸಿತು.

ಮಳೆಯಿಂದಾಗಿ ಈ ಪಂದ್ಯವನ್ನು 43 ಓವರ್‌ಗಳಿಗೆ ಇಳಿಸಲಾಗಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೆದರ್ಲೆಂಡ್ಸ್‌ ಕೊನೆಯ ಹಂತದಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿ 8 ವಿಕೆಟಿಗೆ 245 ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾ 42.5 ಓವರ್‌ಗಳಲ್ಲಿ 207ಕ್ಕೆ ಸರ್ವಪತನ ಕಂಡಿತು. ವಾನ್‌ ಬೀಕ್‌ 3 ವಿಕೆಟ್‌, ಮೀಕರೆನ್‌, ಮರ್ವ್‌ ಮತ್ತು ಡಿ ಲೀಡ್‌ ತಲಾ 2 ವಿಕೆಟ್‌ ಉಡಾಯಿಸಿದರು.

ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಕ್ವಿಂಟನ್‌ ಡಿ ಕಾಕ್‌ ದಕ್ಷಿಣ ಆಫ್ರಿಕಾ ಕುಸಿತಕ್ಕೆ ಮುಹೂರ್ತವಿರಿಸಿದರು. ಇವರ ಆಟ 20 ರನ್ನಿಗೆ ಮುಗಿಯಿತು. ಮೂರೇ ರನ್‌ ಅಂತರದಲ್ಲಿ ನಾಯಕ ಟೆಂಬ ಬವುಮ (16) ಪೆವಿಲಿಯನ್‌ ಸೇರಿಕೊಂಡರು. ತಂಡದ ಬೆನ್ನೆಲುವಾಗಿದ್ದ ರಸ್ಸಿ ವಾನ್‌ ಡರ್‌ ಡುಸೆನ್‌, ಐಡನ್‌ ಮಾರ್ಕ್‌ರಮ್‌ ಒಟ್ಟು ಸೇರಿ ಗಳಿಸಿದ್ದು ಐದೇ ರನ್‌. ಕ್ಲಾಸೆನ್‌ ಹೋರಾಡಿದರೂ 28ರ ಗಡಿಯಲ್ಲಿ ಎಡವಿದರು. 89 ರನ್‌ ಆಗುವಷ್ಟರಲ್ಲಿ ದಕ್ಷಿಣ ಆಫ್ರಿಕಾದ 5 ವಿಕೆಟ್‌ ಹಾರಿಹೋಯಿತು.

ಡೇವಿಡ್‌ ಮಿಲ್ಲರ್‌ “ಕಿಲ್ಲರ್‌’ ಆಗಲಿಲ್ಲ. ಇವರ ವಿಕೆಟ್‌ ಪತನದೊಂದಿಗೆ ದಕ್ಷಿಣ ಆಫ್ರಿಕಾದ ಸೋಲು ಖಚಿತವಾಯಿತು.

ಎಡ್ವರ್ಡ್ಸ್‌ ಕಪ್ತಾನನ ಆಟ
ನೆದರ್ಲೆಂಡ್ಸ್‌ ಇನ್ನಿಂಗ್ಸ್‌ನ ಹೈಲೈಟ್ಸ್‌ ಅಂದರೆ ಸ್ಕಾಟ್‌ ಎಡ್ವರ್ಡ್ಸ್‌ ಅವರ ನಾಯಕನ ಆಟ. ಇವರ ಬ್ಯಾಟಿಂಗ್‌ ಸಾಹಸದಿಂದ ನೂರೈವತ್ತರ ಆಸುಪಾಸಿನಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದ ಡಚ್ಚರ ಪಡೆ ಇನ್ನೂರೈವತ್ತರ ಗಡಿಯನ್ನು ಸಮೀಪಿಸಿ ಹರಿಣಗಳಿಗೆ ಸವಾಲೊಡ್ಡಿತು. 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಎಡ್ವರ್ಡ್ಸ್‌ ಜವಾಬ್ದಾರಿಯುತ ಆಟವಾಡಿ ಅಜೇಯ 78 ರನ್‌ ಬಾರಿಸಿದರು. ಡಚ್ಚರ ಪಡೆಯ ಈ ಚೇತೋಹಾರಿ ಪ್ರದರ್ಶನ ದಕ್ಷಿಣ ಆಫ್ರಿಕಾದ ಬೌಲಿಂಗ್‌ ಸರದಿಗೊಂದು ಹಿನ್ನಡೆಯೇ ಸರಿ.

ಆರಂಭದಲ್ಲಿ ಹರಿಣಗಳ ಬೌಲಿಂಗ್‌ ಚೇತೋಹಾರಿಯಾಗಿಯೇ ಇತ್ತು. ರಬಾಡ, ಜಾನ್ಸೆನ್‌, ಎನ್‌ಗಿಡಿ, ಕೋಟಿ ಸೇರಿಕೊಂಡು ತಮ್ಮ ಛಾತಿಗೆ ತಕ್ಕ ಬೌಲಿಂಗ್‌ ದಾಳಿಯನ್ನೇ ಸಂಘಟಿಸಿದ್ದರು. ನೆದರ್ಲೆಂಡ್ಸ್‌ನ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಇವರ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ. ವಿಕ್ರಮ್‌ಜೀತ್‌ ಸಿಂಗ್‌ (2), ಮ್ಯಾಕ್ಸ್‌ ಓ’ಡೌಡ್‌ (18), ಕಾಲಿನ್‌ ಆ್ಯಕರ್‌ಮನ್‌ (13), ಬಾಸ್‌ ಡಿ ಲೀಡ್‌ (2), ಸಿಬ್ರಾಂಡ್‌ ಎಂಗಲ್‌ಬ್ರೆಟ್‌ (19), ತೇಜ ನಿಡಮನೂರು (20) ಸಣ್ಣ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. 34ನೇ ಓವರ್‌ ವೇಳೆ 140ಕ್ಕೆ 7 ವಿಕೆಟ್‌ ಉರುಳಿತ್ತು.

ಸ್ಕಾಟ್‌ ಎಡ್ವರ್ಡ್ಸ್‌ ಪ್ರವೇಶದೊಂದಿಗೆ ನೆದರ್ಲೆಂಡ್ಸ್‌ ಇನ್ನಿಂಗ್ಸ್‌ನ ಚಿತ್ರಣವೇ ಬದಲಾಯಿತು. ಅವರು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬಹಳ ಜಾಣ್ಮೆಯಿಂದ ನಿಭಾಯಿಸುತ್ತ ಇನ್ನಿಂಗ್ಸ್‌ ಕಟ್ಟತೊಡಗಿದರು. ರೋಲ್ಫ್ ವಾನ್‌ ಡರ್‌ ಮರ್ವ್‌ (29) ಮತ್ತು ಆರ್ಯನ್‌ ದತ್‌ (ಅಜೇಯ 23) ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಪರಿಣಾಮ, ಡೆತ್‌ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್‌ ಹಳಿ ತಪ್ಪಿತು.

7 ವಿಕೆಟ್‌ ಪತನದ ಬಳಿಕ 105 ರನ್‌ ಪೇರಿಸಿದ್ದು ನೆದರ್ಲೆಂಡ್ಸ್‌ ಬ್ಯಾಟಿಂಗ್‌ ಸಾಹಸಕ್ಕೆ ಸಾಕ್ಷಿಯಾಯಿತು. ಇದು ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ 7ನೇ ವಿಕೆಟ್‌ ಉರುಳಿದ ಬಳಿಕ ದಾಖಲಾದ ಅತ್ಯಧಿಕ ಮೊತ್ತ. ಈ ಅವಧಿಯಲ್ಲಿ ನೆದರ್ಲೆಂಡ್ಸ್‌ ಕಳೆದುಕೊಂಡದ್ದು ಒಂದೇ ವಿಕೆಟ್‌. ಕೊನೆಯ 5 ಓವರ್‌ಗಳಲ್ಲಿ 68 ರನ್‌ ಹರಿದು ಬಂತು.

ಸ್ಕಾಟ್‌ ಎಡ್ವರ್ಡ್ಸ್‌ 69 ಎಸೆತಗಳಿಂದ ಅಜೇಯ 78 ರನ್‌ ಬಾರಿಸಿ ಮೆರೆದರು. ಸಿಡಿಸಿದ್ದು 10 ಬೌಂಡರಿ ಮತ್ತು ಒಂದು ಸಿಕ್ಸರ್‌. ಇದು ಏಕದಿನದಲ್ಲಿ ದಕ್ಷಿಣ ಆಫ್ರಿಕಾ ನಾಯಕ 4ನೇ ಅತ್ಯಧಿಕ ಗಳಿಕೆ. 84 ರನ್‌ ಬಾರಿಸಿದ ಪೀಟರ್‌ ಬೋರೆನ್‌ ಅಗ್ರಸ್ಥಾನದಲ್ಲಿದ್ದಾರೆ. ಅನಂತರದ ಮೂರೂ ಸ್ಥಾನಗಳನ್ನು ಸ್ಕಾಟ್‌ ಎಡ್ವರ್ಡ್ಸ್‌ ಆಕ್ರಮಿಸಿಕೊಂಡಿರುವುದು ವಿಶೇಷ.

ಎಡ್ವರ್ಡ್ಸ್‌-ವಾನ್‌ ಡರ್‌ ಮರ್ವ್‌ ಕೇವಲ 37 ಎಸೆತಗಳಿಂದ 64 ರನ್‌ ಬಾರಿಸಿದರು. ಕೊನೆಯಲ್ಲಿ ಎಡ್ವರ್ಡ್ಸ್‌-ಆರ್ಯನ್‌ ದತ್‌ 3.1 ಓವರ್‌ಗಳಲ್ಲಿ 41 ರನ್‌ ಪೇರಿಸಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು.

ಟಾಪ್ ನ್ಯೂಸ್

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

jameer

Waqf Boardನಿಂದ ಪ್ರತಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜು: ಸಚಿವ ಜಮೀರ್‌

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.