Olympics: 2036ರ ಒಲಿಂಪಿಕ್ಸ್ ಆಯೋಜನೆಗೆ ಸಿದ್ಧತೆ ಆರಂಭಿಸಿದೆ ಗುಜರಾತ್!
Team Udayavani, Oct 17, 2023, 11:51 PM IST
ಅಹ್ಮದಾಬಾದ್: ಭಾರತ 2036ರ ಒಲಿಂಪಿಕ್ಸ್ ಆಯೋಜನೆಗೆ ಬಿಡ್ ಸಲ್ಲಿಸಲಿದೆ ಎಂದು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಘೋಷಣೆ ಮಾಡಿದ್ದರು. ವಿಶೇಷವೇನು ಗೊತ್ತೇ? ಗುಜರಾತ್ ಸರಕಾರ ಈಗಾ ಗಲೇ ಒಲಿಂಪಿಕ್ಸ್ ಆಯೋಜನೆಗೆ ಸಿದ್ಧತೆ ಶುರು ಮಾಡಿಕೊಂಡಿರುವುದು!
ಭಾರತಕ್ಕೆ ಈ ಮಹೋನ್ನತ ಕ್ರೀಡಾ ಕೂಟದ ಆತಿಥ್ಯದ ಅವಕಾಶ ಸಿಗು ತ್ತದೋ, ಇಲ್ಲವೋ ಎಂಬುದು ಖಚಿತ ವಾಗಲಿಕ್ಕೇ ಕೆಲವು ವರ್ಷ ಬೇಕು. ಅಷ್ಟರಲ್ಲಿ ಗುಜರಾತ್ ಸರಕಾರ ತೆರೆ ಮರೆಯಲ್ಲಿ ಸಿದ್ಧತೆ ಶುರು ಮಾಡಿದೆ, ಆದರೆ ಅದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ವರದಿಯಾಗಿದೆ.
ಒಲಿಂಪಿಕ್ಸ್ ಆಯೋಜನೆ ಮಾಡುವು ದೆಂದರೆ ಸುಲಭದ ಮಾತಲ್ಲ. ಇಲ್ಲಿ ಬರೀ ಹಣವೊಂದಿದ್ದರೆ ಸಾಕಾಗದು. ಕತೃತ್ವ ಶಕ್ತಿ, ಮೂಲಭೂತ ಸೌಕರ್ಯಗಳು ಸಕಾಲದಲ್ಲಿ ನಿರ್ಮಾಣವಾಗಬೇಕು. ಈಗಲೇ ಪ್ರಯತ್ನ ಶುರು ಮಾಡಿ ದರೆ ಮಾತ್ರ ಗುರಿಮುಟ್ಟಲು ಸಾಧ್ಯ. ಯೋಜನೆ ಯಲ್ಲಿ ತುಸು ಹೆಚ್ಚುಕಡಿಮೆಯಾದರೂ ದೇಶದ ಗೌರವಕ್ಕೆ ಧಕ್ಕೆಯಾಗುತ್ತದೆ.
ಏನೇನು ಮಾಡಲಾಗುತ್ತಿದೆ?
ಸದ್ಯ ದೇಶದಲ್ಲಿ ಒಲಿಂಪಿಕ್ಸ್ ಆಯೋ ಜನೆಗೆ ಬೇಕಾದ ಸಾಮರ್ಥ್ಯವಿರುವ ನಗರ ಅಹ್ಮಬಾದಾದ್ ಮಾತ್ರ. ಇಲ್ಲಿ ವಿಶ್ವದಲ್ಲೇ ಬೃಹತ್ ಕ್ರಿಕೆಟ್ ಮೈದಾ ನವಿದೆ. ಜತೆಗೆ ಟ್ರಾಫಿಕ್ ಒತ್ತಡ, ಜನಸಂಖ್ಯೆ, ಮಾಲಿನ್ಯ ಕಡಿಮೆಯಿರುವ ನಗರವೂ ಹೌದು. ಹೀಗಾಗಿ ಉಳಿದೆಲ್ಲ ಜನಪ್ರಿಯ ನಗರಿಗಳಿಗಿಂತ ಇದೇ ಸೂಕ್ತ ಎನ್ನಲಾಗುತ್ತಿದೆ. ಜತೆಗೆ ಸದ್ಯದ ಮಟ್ಟಿಗೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರು ವುದರಿಂದ ಅಹ್ಮದಾಬಾದ್ ಆಯ್ಕೆಯಾ ಗುವುದರಲ್ಲಿ ಅನುಮಾನವೇ ಇಲ್ಲ.
ಸಿದ್ಧತೆಗೆ ಸೂಚನೆ
ಗುಜರಾತ್ ಸರಕಾರ ಪ್ರಸ್ತುತ ಅಹ್ಮ ದಾಬಾದ್ ಮತ್ತು ಸಮೀಪದ ಗಾಂಧಿ ನಗರ ನಗರಪಾಲಿಕೆಗಳಿಗೆ ಸಿದ್ಧತೆ ಮಾಡಿ ಕೊಳ್ಳಲು ತಿಳಿಸಿದೆ. ಹಾಗೆಯೇ ಗುಜ ರಾತ್ ಒಲಿಂಪಿಕ್ಸ್ ಮತ್ತು ಮೂಲಭೂತ ಸೌಕರ್ಯ ನಿಗಮ ರಚನೆಯಾಗಿದೆ. ಅಹ್ಮದಾಬಾದ್‌ನಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣವನ್ನೇ ಕೇಂದ್ರವಾಗಿಟ್ಟುಕೊಂಡು ಎಲ್ಲ ಸಿದ್ಧತೆ ಮಾಡಲಾಗುತ್ತದೆ. ಈ ಸಂಕೀರ್ಣದಲ್ಲೇ ಮೋದಿ ಮೈದಾನವಿರುವುದು. ಈ ಸರ್ದಾರ್ ಸಂಕೀರ್ಣದಲ್ಲೇ 20 ಮುಖ್ಯ ಕ್ರೀಡೆಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ. ರಾಜ್ಯಾದ್ಯಂತ 33 ಕ್ರೀಡಾ ಕೇಂದ್ರಗಳನ್ನು ಗುರುತಿಸಲಾಗಿದೆ. ಶಿವರಾಜಪುರ, ಏಕತಾ ಪ್ರತಿಮಾ ಕೇಂದ್ರ, ಸೂರತ್‌ನ ಕೆಲಭಾಗಗಳನ್ನು ಜಲಕ್ರೀಡೆಗಳಿಗಾಗಿ ಗುರುತಿಸಲಾಗಿದೆ ಎನ್ನಲಾಗಿದೆ. ಈಗಾಗಲೇ ಅಹ್ಮದಾಬಾದ್-ಗಾಂಧಿ ನಗರದಲ್ಲಿ ನಾಲ್ಕು ಜಾಗಗಳನ್ನು ಗುರು ತಿಸಿ ನಿರ್ಮಾಣ ಕಾರ್ಯ ಆರಂಭಿಸ ಲಾಗಿದೆ. ಮುಖ್ಯವಾಗಿ ಕ್ರೀಡಾಗ್ರಾಮ ನಿರ್ಮಾಣ ದೊಡ್ಡ ಕೆಲಸ. ಮೋದಿ ಮೈದಾನಕ್ಕೆ ಸನಿಹವಾಗಿಯೇ ಕ್ರೀಡಾ ಗ್ರಾಮವಿರುತ್ತದೆ ಎನ್ನಲಾಗಿದೆ.
ಇನ್ನೂ ಮೂರು ವರ್ಷ ಬೇಕು
2024ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ, 2028ರ ಕೂಟ ಲಾಸ್ ಏಂಜಲಿಸ್‌ನಲ್ಲಿ, 2032ರ ಪಂದ್ಯಾವಳಿ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. 2036ರ ಆತಿಥ್ಯ ಪಡೆಯಲು ಭಾರತ ಇನ್ನೂ ವರ್ಷ ಕಾಯಬೇಕು. ಅಂದರೆ ಅಲ್ಲಿಯವರೆಗೆ ಹಲವು ಸುತ್ತಿನ ಮಾತುಕತೆಗಳು, ಸಭೆಗಳು ನಡೆಯಲಿವೆ. ಹಲವು ದೇಶಗಳು ಪೈಪೋಟಿ ನಡೆಸಲಿವೆ. ಈ ಎಲ್ಲ ಕಡೆ ಭಾರತ ಸಮರ್ಥವಾಗಿ ತನ್ನ ಆತಿಥ್ಯದ ಹಕ್ಕು ಮಂಡಿಸಬೇಕಾಗಿದೆ.
ಮೂರು ದೇಶಗಳಿಂದ ಪೈಪೋಟಿ
ಭಾರತ ಒಲಿಂಪಿಕ್ಸ್ ಆಯೋಜಿಸುವುದಕ್ಕೆ ಪೋಲೆಂಡ್, ಇಂಡೋನೇಷ್ಯಾ, ಮೆಕ್ಸಿಕೊ ಅಡ್ಡಿಯಾಗಿವೆ. 2036ರ ಒಲಿಂಪಿಕ್ಸ್ ಆತಿಥ್ಯ ಪಡೆದುಕೊಳ್ಳಲು ಈ ದೇಶಗಳೂ ಸಿದ್ಧವಾಗಿವೆ. ಇವನ್ನೆಲ್ಲ ಮೀರಿ, ಹಲವು ಸುತ್ತಿನ ಮಾತುಕತೆಗಳು, ನೂರಾರು ಸಭೆಗಳ ಅನಂತರ ಭಾರತಕ್ಕೆ ಆತಿಥ್ಯ ಸಿಗುವುದು ಖಚಿತವಾಗಲಿದೆ. ಸದ್ಯದ ಮಟ್ಟಿಗೆ ಭಾರತಕ್ಕೆ ಪೈಪೋಟಿಯೊಡ್ಡುವ ಸಾಮರ್ಥ್ಯ ಈ ದೇಶಗಳಿಗಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.