Kannada: ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾತಿಗಷ್ಟೇ ಸೀಮಿತ: ಸಿಎಂ ಸಿದ್ದರಾಮಯ್ಯ ಬೇಸರ
ಕರ್ನಾಟಕ ಸಂಭ್ರಮ-50 ಲಾಂಛನ ಬಿಡುಗಡೆ
Team Udayavani, Oct 18, 2023, 12:20 AM IST
ಬೆಂಗಳೂರು: ಇಂಗ್ಲಿಷ್ ವ್ಯಾಮೋಹವೋ ಅಥವಾ ನಮ್ಮ ಭಾಷೆ ಬಗ್ಗೆ ಕೀಳರಿಮೆಯೋ ಗೊತ್ತಿಲ್ಲ. ಆಡಳಿತ ಭಾಷೆ ಕನ್ನಡವಾಗಿದ್ದರೂ ಕೆಲವು ಸಚಿವರು ಮತ್ತು ಅಧಿಕಾರಿಗಳು ಕಡತದಲ್ಲಿ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯುತ್ತಾರೆ. ಇದರಿಂದ ಸಮರ್ಪಕ ಅನುಷ್ಠಾನ ಬರೀ ಮಾತಿಗೆ ಸೀಮಿತವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ 50ರ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬೇರೆ ರಾಜ್ಯಗಳು ಮತ್ತು ಕೇಂದ್ರದೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್ ಬಳಕೆ ಮಾಡಲಿ. ಆದರೆ, ರಾಜ್ಯಮಟ್ಟದಲ್ಲೂ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯಲಾಗುತ್ತದೆ. ಭಾಷೆಯ ಬಗ್ಗೆ ಈ ಉದಾಸೀನ ಅಥವಾ ಕೀಳರಿಮೆ ಹೋಗಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವ ವಾತಾವರಣ, ಕನ್ನಡದ ಅನಿವಾರ್ಯತೆ ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದರು.
ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶದಲ್ಲಿ ಅಲ್ಲಿನ ಭಾಷೆ ಕಲಿಯುವ ಅನಿವಾರ್ಯತೆ ಸೃಷ್ಟಿಸಲಾಗಿದೆ. ಆದರೆ, ನಮ್ಮಲ್ಲಿ ಹಾಗಿಲ್ಲ. ನಾವೇ ಅವರ ಭಾಷೆ ಕಲಿಯುತ್ತೇವೆ ಅಥವಾ ಇಂಗ್ಲಿಷ್‌ನಲ್ಲಿ ವ್ಯವಹರಿಸಲು ಯತ್ನಿಸುತ್ತೇವೆ. ಹಾಗಂತ, ಕನ್ನಡಿಗರು ಅಭಿಮಾನ ಶೂನ್ಯರು ಅಂತಲ್ಲ; ನಮ್ಮ ಔದಾರ್ಯತೆ ತುಸು ಜಾಸ್ತಿಯೇ ಆಯ್ತು ಅನಿಸುತ್ತಿದೆ ಎಂದು ಹೇಳಿದರು.
ವರ್ಷವಿಡೀ ವಿಭಿನ್ನ ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಸರಕಾರದ ವಿವಿಧ ಇಲಾಖೆಗಳ ಪ್ರತಿಯೊಂದು ಲೆಟರ್‌ಹೆಡ್‌ನಲ್ಲಿ ಕರ್ನಾಟಕ ಸಂಭ್ರಮ 50ರ ಲಾಂಛನ ಪ್ರಕಟಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಾಳಿಪಟ ಉತ್ಸವ, ಹಂಪಿಯಿಂದ ಗದಗ ವೀರನಾರಾಯಣ ದೇವಸ್ಥಾನದವರೆಗೆ ರಥಯಾತ್ರೆ, ಐಟಿ-ಬಿಟಿ ಕಚೇರಿಗಳಲ್ಲಿ ರಾಜ್ಯೋತ್ಸವ, ಸುಪ್ರಭಾತದ ಮೊದಲು ನಾಡಗೀತೆ ಮೊಳಗಬೇಕು ಎನ್ನುವುದು ಸೇರಿದಂತೆ ಇಡೀ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಲಾಂಛನದ ವಿನ್ಯಾಸ 1 ಲ.ರೂ. ಬಹುಮಾನ
ಕರ್ನಾಟಕ ಸಂಭ್ರಮ- 50 ಲಾಂಛನ ರಚಿಸಿದ ರವಿರಾಜ ಹುಲಗೂರ ಅವರಿಗೆ ಒಂದು ಲಕ್ಷ ರೂ. ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸಂಭ್ರಮ-50 ಲಾಂಛನಕ್ಕೆ ಆಸಕ್ತರಿಂದ ಮಾದರಿಗಳನ್ನು ಆಹ್ವಾನಿಸಲಾಗಿತ್ತು. 271 ಮಾದರಿಗಳು ಬಂದಿದ್ದವು. ಈ ಪೈಕಿ ರವಿರಾಜ ಹುಲಗೂರ ಅವರ ಮಾದರಿ ಆಯ್ಕೆಯಾಗಿದ್ದು, ಇಲಾಖೆಯಿಂದ 25 ಸಾವಿರ ರೂ. ಚೆಕ್ ಅನ್ನು ಬಹುಮಾನವಾಗಿ ನೀಡಲಾಯಿತು. ಇದರ ಜತೆಗೆ ಬಿಬಿಎಂಪಿಯಿಂದ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.